Friday, September 20, 2024

Latest Posts

ಮುಟ್ಟಾದ ಸಂದರ್ಭದಲ್ಲಿ ಈ ಅಂಶ ಕಂಡುಬಂದರೆ, ಖಂಡಿತ ವೈದ್ಯರ ಬಳಿ ಹೋಗಿ..

- Advertisement -

ಮುಟ್ಟಾದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಕೆಲ ತೊಂದರೆಗಳಾಗುತ್ತದೆ. ಆದ್ರೆ ಇದು ಒಂದೆರಡು ದಿನದ ಸಮಸ್ಯೆ ಅಂತಾ ನಿರ್ಲಕ್ಷ್ಯ ಮಾಡುತ್ತಾರೆ. ಆದ್ರೆ ಹೀಗೆ ಸಣ್ಣ ಸಮಸ್ಯೆ ಎಂದು ಮಾಡುವ ನಿರ್ಲಕ್ಷ್ಯವೇ, ಮುಂದೆ ದೊಡ್ಡ ಸಮಸ್ಯೆಯಾಗುತ್ತದೆ. ಹಾಗಾದ್ರೆ ಮುಟ್ಟಾದ ಸಂದರ್ಭದಲ್ಲಿ ಯಾವ ಸಮಸ್ಯೆ ಕಂಡು ಬಂದರೆ, ಆ ಬಗ್ಗೆ ವೈದ್ಯರಲ್ಲಿ ವಿಚಾರಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಈ 5 ಮರಗಳು ನಿಮ್ಮ ಮನೆಯ ಬಳಿ ಇರದಂತೆ ನೋಡಿಕೊಳ್ಳಿ..

ಹೊಟ್ಟೆನೋವು. ಮುಟ್ಟಿನ ಸಮಯದಲ್ಲಿ ಕೆಲವರಿಗೆ ಒಂದು ದಿನ ಹೊಟ್ಟೆನೋವಿರುತ್ತದೆ. ಆದ್ರೆ ನಿದ್ದೆ ಮಾಡುವುದರಿಂದ ಅಥವಾ ಮನೆಮದ್ದು ಮಾಡುವುದರಿಂದ ಆ ನೋವು ಹೋಗುತ್ತದೆ. ಮರುದಿನ ಕೊಂಚ ಹೊಟ್ಟೆನೋವಿರಬಹುದು. ಆದ್ರೆ ಮುಟ್ಟಾದಾಗಿನಿಂದ ಹಿಡಿದು ಮೂರ್ನಾಲ್ಕು ದಿನಗಳವರೆಗೂ ನಿಮಗೆ ತುಂಬಾ ಹೊಟ್ಟೆ ನೋವಿದ್ದರೆ, ಖಂಡಿತ ನೀವು ವೈದ್ಯರ ಬಳಿ ಹೋಗಲೇಬೇಕು.

ರಕ್ತಸ್ರಾವ. ಮುಟ್ಟಾದಾಗ ರಕ್ತಸ್ರಾವವಾಗುವಾಗ, ಒಂದೆರಡು ಸಲ ರಕ್ತ ಹೆಪ್ಪು ಗಟ್ಟಿದ ಹಾಗಾಗುತ್ತದೆ. ಆದ್ರೆ ಪ್ರತಿದಿನ ನಿಮಗೆ ತುಂಬಾ ರಕ್ತ ಹೆಪ್ಪುಗಟ್ಟಿದೆ ಎಂದು ಎನ್ನಿಸಿದರೆ, ಆ ಸ್ಥಳದಲ್ಲಿ ಹೆಚ್ಚು ನೋವಾಗುತ್ತಿದ್ದರೆ, ಖಂಡಿತ ವೈದ್ಯರ ಬಳಿ ಹೋಗಿ, ಈ ಬಗ್ಗೆ ಪರಿಹಾರ ಕಂಡುಕೊಳ್ಳಿ. ಇಲ್ಲವಾದಲ್ಲಿ, ಮುಂದೆ ಈ ಸಮಸ್ಯೆ ದೊಡ್ಡದಾಗಬಹುದು.

ಕಾಳುಮೆಣಸನ್ನ ಅಡುಗೆಯಲ್ಲಿ ಸೇರಿಸಬೇಕು ಅಂತಾ ಹೇಳೋದು ಇದಕ್ಕೆ ನೋಡಿ..

ದಿನ ಬದಲಾವಣೆ. ಮುಟ್ಟಾಗುವ ದಿನಾಂಕದಿಂದ 15 ದಿನದೊಳಗೆ ಮುಟ್ಟಾಗದಿದ್ದಲ್ಲಿ, ಒಮ್ಮೆ ವೈದ್ಯರ ಬಳಿ ಹೋಗುವುದು ಉತ್ತಮ. ನೀವು ವಿವಾಹಿತರಾಗಿದ್ದಲ್ಲಿ, ಈ ರೀತಿಯಾದರೆ, ಒಮ್ಮೆ ಪ್ರೆಗ್ನೆನ್ಸಿ ಚೆಕಪ್ ಮಾಡಿಕೊಳ್ಳಿ. ಅವಿವಾಹಿತರಾಗಿದ್ದಲ್ಲಿ, ಒಂದೆರಡು ತಿಂಗಳು ಲೇಟ್ ಪಿರಿಯಡ್ಸ್ ಆಗಿ, ಮತ್ತೆ ಸರಿಯಾಗಬಹುದು. ಆದ್ರೆ ನಿಮಗೆ ಎರಡು ಮೂರು ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದರೆ, ಖಂಡಿತ ವೈದ್ಯರ ಬಳಿ ವಿಚಾರಿಸಿ. ಕೆಲವರಿಗೆ ಪಿಸಿಓಡಿ ಸಮಸ್ಯೆ ಇದ್ದಲ್ಲಿ ಹೀಗಾಗುತ್ತದೆ. ಹಾಗಿದ್ದಲ್ಲಿ, ಅದಕ್ಕೆ ಬೇಕಾದ ಚಿಕಿತ್ಸೆ ಪಡೆದುಕೊಳ್ಳಿ.

- Advertisement -

Latest Posts

Don't Miss