ಹೊಟ್ಟೆಯಲ್ಲಿರುವ ಮಗು ಹೆಣ್ಣಾದರೆ, ಅಥವಾ ಅನೈತಿಕ ಸಂಭಂಧಕ್ಕೆ ಹುಟ್ಟಿದ ಮಗುವಾದರೆ, ಕೆಲವರು ಅದನ್ನು ತೆಗೆಯಲು ಗುಳಿಗೆ ತೆಗೆದುಕೊಳ್ಳುತ್ತಾರೆ. ಅಬಾರ್ಷನ್ ಮಾಡಿಸುತ್ತಾರೆ. ಇದನ್ನೇ ಭ್ರೂಣಹತ್ಯೆ ಎನ್ನುವುದು. ಇಂಥ ಮಹಾಪಾಪ ಮಾಡುವವರಿಗೆ ಯಮಲೋಕದಲ್ಲಿ ಭಯಂಕರ ಶಿಕ್ಷೆ ನೀಡಲಾಗುತ್ತದೆ. ಯಾವುದು ಅಂಥ ಶಿಕ್ಷೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಅಪ್ಪ ಅಮ್ಮನ ಈ ತಪ್ಪಿನಿಂದ ಮಕ್ಕಳು ಇಂಥ ಶಿಕ್ಷೆ ಅನುಭವಿಸಬೇಕಾಗುತ್ತದೆ…
ಮಹಾಭಾರತದ ಪ್ರಕಾರ, ಅಶ್ವತ್ಥಾಮ ಪಾಂಡವರ ವಂಶವನ್ನು ನಿರ್ವಂಶ ಮಾಡಬೇಕು ಎಂದು ಉತ್ತರೆಯ ಗರ್ಭದಲ್ಲಿರುವ ಮಗುವಿಗೆ ಗುರಿಯಿಟ್ಟು ಬ್ರಹ್ಮಾಸ್ತ್ರ ಪ್ರಯೋಗಿಸಿದ. ಇದನ್ನು ಕಂಡು ಕ್ರೋಧಿತನಾದ ಕೃಷ್ಣ, ನೀನು ಜನ್ಮವನ್ನು ಕಂಡಿದ್ದಿಯ. ಆದರೆ ಮರಣವನ್ನು ಕಾಣಲು ಸಾಧ್ಯವಿಲ್ಲ. ನೀನು ಈ ಪ್ರಪಂಚವಿರುವವರೆಗೂ ಜೀವಂತವಿರುತ್ತಿಯಾ. ಮತ್ತು ಹಲವು ರೀತಿಯ ಕಷ್ಟ ಕೋಟಲೆಗಳನ್ನು ಅನುಭವಿಸುತ್ತಿಯಾ. ಯಾವಾಗಲಾದರೂ ನನ್ನ ಸಾವು ಸಂಭವಿಸುತ್ತದೆಯೋ ಎಂದು ಸಾವಿಗಾಗಿ ಕಾತರಿಸುತ್ತಿಯಾ ಎಂದು ಕೃಷ್ಣ, ಅಶ್ವತ್ಥಾಮನಿಗೆ ಶಾಪ ನೀಡುತ್ತಾನೆ.
ಗಣೇಶ ಕುಬೇರನನ್ನೇ ತಿನ್ನಲು ಹೋಗಿದ್ದೇಕೆ..? ಕುಬೇರ ಅಂಥಾದ್ದೇನು ಮಾಡಿದ್ದ..?
ಇದೇ ರೀತಿ, ಭ್ರೂಣ ಹತ್ಯೆ ಮಾಡಿದವರಿಗೆ ನರಕ ಪ್ರಾಪ್ತಿಯಾಗುತ್ತದೆ. ನರಕದಲ್ಲಿ ವಿವಿಧ ತರಹದ ಶಿಕ್ಷೆಗಳನ್ನು ನೀಡಲಾಗುತ್ತದೆ. ಇಂಥವರಿಗೆ ಮನುಷ್ಯ ಜನ್ಮ ಸಿಗುವುದಿಲ್ಲ. ಇವರು ನರಕದಲ್ಲೇ ಇದ್ದು, ಅಲ್ಲಿ ಸಿಗುವ ಎಲ್ಲ ರೀತಿಯ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇದಾದ ಬಳಿಕ, ಹಂದಿ, ಕಾಗೆ ಇತ್ಯಾದಿ ಜೀವ ಜಂತುಗಳ ಯೋನಿಯಲ್ಲಿ ಜನ್ಮ ಸಿಗುತ್ತದೆ.