ಹಿಂದೂಗಳಷ್ಟೇ ಅಲ್ಲ, ಕೆಲವು ಇಸ್ಲಾಂ ಧರ್ಮದವರು, ಕ್ರಿಶ್ಚಿಯನ್ನರು ಕೂಡ, ರಾಮನನ್ನು ನಂಬುತ್ತಾರೆ. ಇಂಥ ಸರ್ವಶ್ರೇಷ್ಠ ರಾಮ, ಭರತ ಖಂಡಕ್ಕೇ ರಾಜನಾಗಿ ಮೆರೆದವರು. ಹಾಗಾಗಿ ರಾಮನನ್ನು ಬರೀ ಭಾರತೀಯರಷ್ಟೇ ಅಲ್ಲ, ಪಾಕಿಸ್ತಾನದ ಹಿಂದೂಗಳು, ನೇಪಾಳಿಗರು, ಇಂಡೋನೆಷಿಯಾದ ಜನರು ಕೂಡ, ಶ್ರೀರಾಮನನ್ನು ಪೂಜಿಸುತ್ತಾರೆ. ನೀವು ಯಾವುದೇ ಕಷ್ಟದಲ್ಲಿದ್ದರೂ, ರಾಮನನ್ನು ನೆನೆದು, ರಾಮನಾಮ ಜಪ ಮಾಡಿ. ನಿಮ್ಮ ಕಷ್ಟ ಕೊನೆಗೊಳ್ಳುತ್ತದೆ ಎಂದು ಅದರ ಅನುಭವ ಪಡೆದವರು ಹೇಳುತ್ತಾರೆ. ಹಾಗಾದ್ರೆ ಯಾಕೆ ರಾಮನಾಮ ಜಪ ಶ್ರೇಷ್ಠ ಎಂದು ಹೇಳೋದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ರಾಮನಾಮ ಎಂಥ ಜಪವೆಂದರೆ, ಆ ಜಪ ಮಾಡಲು ಯಾವುದೇ ನೀತಿ ನಿಯಮವಿಲ್ಲ. ನೀವು ಸುಮ್ಮನೆ ಕುಳಿತಾಗಲೂ ರಾಮನ ಜಪ ಮಾಡಬಹುದು. ನಡೆದಾಡುವಾಗಲೂ ರಾಮನನ್ನು ನೆನೆಯಬಹುದು. ಹೀಗೆ ಯಾವುದೇ ಸಮಯದಲ್ಲೂ, ಯಾವುದೇ ಸ್ಥಿತಿಯಲ್ಲೂ ನೀವು ಮಾಡಬಹುದಾದ ಶ್ರೇಷ್ಠ ಜಪವೆಂದರೆ, ರಾಮನಾಮ ಜಪ. ಯಾರ ಜನ್ಮವಾದರೂ, ಮರಣವಾದರೂ ಹೇಳಬಹುದಾದ ಜಪವೇ ರಾಮನಾಮ ಜಪ. ಹಾಗಾಗಿಯೇ ಸತ್ತಾಗ, ರಾಮ ನಾಮ ಸತ್ಯ ಹೈ ಅಂತಾ ಹೇಳೋದು.
ಪೌರಾಣಿಕ ಕಥೆಗಳು ರಾಮನ ಹೆಸರು ಎಷ್ಟು ಶ್ರೇಷ್ಠ ಅನ್ನೋದನ್ನ ಹೇಳುತ್ತದೆ. ಒಮ್ಮೆ ಸೀತೆಯನ್ನು ಲಂಕೆಯಿಂದ ಕರೆತರಬೇಕಾದ ಸಂದರ್ಭದಲ್ಲಿ, ಸಮುದ್ರದಲ್ಲಿ ಸೇತುವೆ ಕಟ್ಟಬೇಕಾಗಿತ್ತು. ಆಗ ವಾನರ ಸೇನೆಯು ಕಲ್ಲಿನ ಮೇಲೆ ರಾಮನೆಂದು ಬರೆದು, ಆ ಕಲ್ಲಿನಿಂದ ಸೇತುವೆ ಕಟ್ಟುತ್ತಿದ್ದರು. ರಾಮ ಇದನ್ನೆಲ್ಲ ಗಮನಿಸುತ್ತಿದ್ದ. ನನ್ನ ಹೆಸರನ್ನು ಬರೆದ ಕಲ್ಲುಗಳಿಗೆ ತೇಲುವ ಶಕ್ತಿ ಇದೆ ಎಂದ ಮೇಲೆ, ನಾನು ಸ್ಪರ್ಶಿಸಿದ ಕಲ್ಲಿಗೂ ಇಂಥ ಶಕ್ತಿ ಬರಬೇಕಲ್ಲವೇ ಎಂದು ಹೇಳಿ, ತಾನು ಒಂದು ಕಲ್ಲು ತೆಗೆದುಕೊಂಡು, ಸಮುದ್ರದ ಮೇಲಿರಿಸಲು ಹೋದ. ಆದರೆ ಆ ಕಲ್ಲು ಮುಳುಗಿ ಹೋಯಿತು.
ಆಗ ಶ್ರೀರಾಮ, ಹನುಮನಲ್ಲಿ ಈ ವಿಷಯ ಹೇಳಿದ. ಇದಕ್ಕೆ ಉತ್ತರಿಸಿದ ಹನುಮ, ಪ್ರಭು ಅವು ನಿಮ್ಮ ಹೆಸರಿನ ಸಹಾಯದ ಮೇಲೆ ತೇಲುತ್ತಿದೆ. ನಿಮ್ಮ ಹೆಸರೇ ಅಷ್ಟು ಅದ್ಭುತವಾಗಿದೆ. ಅದರಲ್ಲಿ ಭಾರವಾದ ಕಲ್ಲನ್ನೇ ತೇಲಿಸುವ ಶಕ್ತಿ ಇದೆ ನೋಡಿ ಎಂದ. ಈ ರೀತಿ ರಾಮನ ಹೆಸರೇ ಎಷ್ಟು ಶಕ್ತಿಯುತವಾಗಿ ಎಂಬುದನ್ನ ಪೌರಾಣಿಕ ಕತೆಗಳಲ್ಲಿ ಹೇಳಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..
ಈ ಸ್ಮಶಾನ ಮಧ್ಯದಲ್ಲಿ ಚಿತೆಯ ಎದುರು ವೇಶ್ಯೆಯರು ನೃತ್ಯ ಮಾಡುತ್ತಾರೆ.. ಯಾಕೆ ಗೊತ್ತಾ..?

