ಹಳೆಯ ಕಾಲದಲ್ಲಿ ಹಿರಿಯರು ಹಾಕಿದ ಶಾಪ ತುಂಬ ಶಕ್ತಿಯುತವಾಗಿರುತ್ತಿತ್ತಂತೆ. ಯಾಕಂದ್ರೆ ಅವರ ಜೀವಿಸುವ ರೀತಿ ಅಷ್ಟು ಶುದ್ಧವಾಗಿರುತ್ತಿತ್ತು. ಅದೇ ರೀತಿ ರಾಮಾಯಣ ಕಾಲದಲ್ಲಿ ಹಾಕಿದ ಶಾಪಗಳು ಇಂದಿನ ಕಾಲದಲ್ಲಿಯೂ ಜನ ಅನುಭವಿಸುತ್ತಿದ್ದಾರೆ. ಹಾಗಾದ್ರೆ ಅದು ಯಾವ ಶಾಪ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ರಾಮ ಲಕ್ಷ್ಮಣ ಮತ್ತು ಸೀತೆ ವನವಾಸಕ್ಕೆ ಹೋದಾಗ, ರಾಜ ದಶರಥ ತನ್ನ ಅರಮನೆಯಲ್ಲಿ ರಾಮ ರಾಮ ಎಂದು ಕನವರಿಸುತ್ತಾ, ರಾಮನನ್ನು ನೋಡಲಾಗದೇ, ಕೊನೆಯುಸಿರೆಳೆದ. ಈ ವಿಷಯ ತಿಳಿದ ರಾಮ ತಂದೆಯನ್ನು ನೋಡಲಾಗದಿದ್ದರೂ, ಅವರ ಪಿಂಡ ಪ್ರಧಾನವಾದರೂ ಮಾಡಬೇಕೆಂದು ನಿರ್ಧರಿಸಿದ. ಅರಮನೆಯಲ್ಲಿ ಭರತ ಅಪ್ಪನ ತಿಥಿ ಮಾಡಿದ್ದ.
‘ಇನ್ನೆರಡು ಮೂರು ತಿಂಗಳಲ್ಲಿ ಬಿಜೆಪಿ- ಕಾಂಗ್ರೆಸ್ ಶಾಸಕರು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಾರೆ’
ಆದರೂ ಕೂಡ ಹಿರಿಯ ಪುತ್ರನ ಕರ್ತವ್ಯವೆಂದು ರಾಮ ಪಿಂಡ ಪ್ರಧಾನ ಮಾಡಲು ಬೇಕಾಗುವ ವಸ್ತುವನ್ನು ತರಲು ಲಕ್ಷ್ಮಣನೊಂದಿಗೆ ಹೊರಡುತ್ತಾನೆ. ಆಗ ದಶರಥನ ಆತ್ಮ ಬಂದು, ಸೀತೆಯ ಬಳಿ ಪಿಂಡಕ್ಕಾಗಿ ಬೇಡುತ್ತದೆ. ಪಿಂಡ ಪ್ರಧಾನ ಮಾಡುವ ಸಮಯ ಬಂದರೂ ರಾಮ ಲಕ್ಷ್ಮಣ ಬರಲಿಲ್ಲ. ಇನ್ನು ಅವರಿಗಾಗಿ ಕಾದರೆ, ಸಮಯ ಮೀರುತ್ತದೆ ಎಂದು ಸೀತೆ ತಾನೇ ಪಿಂಡ ಪ್ರಧಾನ ಮಾಡಲು ನಿರ್ಧರಿಸಿದಳು.
ಫಲ್ಗುಣಿ ನದಿ, ಕೇದಿಗೆ ಹೂವು, ಗೋವು ಮತ್ತು ವಟವೃಕ್ಷವನ್ನು ಸಾಕ್ಷಿ ಎಂದು ನಂಬಿ ದಶರಥ ರಾಜನಿಗೆ ಪಿಂಡ ಪ್ರಧಾನ ಮಾಡಿದಳು. ರಾಮ ಬಂದಾಗ, ಸೀತೆ ನಡೆದ ವಿಚಾರವನ್ನು ಹೇಳಿದಳು. ಆದರೆ ವಟವೃಕ್ಷ ಒಂದನ್ನು ಬಿಟ್ಟು, ಉಳಿದೆಲ್ಲರೂ ಸುಳ್ಳು ಹೇಳಿದರು. ಆಗ ಸೀತೆ ದಶರಥರ ಆತ್ಮವನ್ನು ಕರೆಸಿ, ತಾನು ಫಲ್ಗುಣಿ ನದಿಯ ದಡದಲ್ಲಿದ್ದ ಮರಳಿನಿಂದ ಪಿಂಡ ಪ್ರಧಾನ ಮಾಡಿದ್ದು, ಸತ್ಯವಲ್ಲವೇ ಎಂದು ಕೇಳಿದಳು. ದಶರಥರ ಆತ್ಮ ಸತ್ಯ ಹೇಳಿ ಹೋಯಿತು.
ನಾನಾ..? – ನೀನಾ..?: ಕೆಡಿಪಿ ಸಭೆಯಲ್ಲಿ ಪ್ರೀತಂಗೌಡ ಮತ್ತು ಮಾಜಿ ಸಚಿವ ರೇವಣ್ಣ ಮಾತಿನ ಜಟಾಪಟಿ..
ಆಗ ಕ್ರೋಧಗೊಂಡ ಸೀತೆ, ನಾನು ನಿಮ್ಮ ಸಾಕ್ಷ್ಯವಾಗಿ ಪಿಂಡ ಪ್ರಧಾನ ಮಾಡಿದರೂ ಕೂಡ ನೀವು ಸುಳ್ಳು ಹೇಳಿದ್ದೀರಿ. ಹಾಗಾಗಿ ಕೇದಿಗೆ ಹೂವು ಇಂದಿನಿಂದ ಯಾವ ಪೂಜೆಗೂ ಅರ್ಹವಲ್ಲ. ಈ ಹೂವನ್ನು ಇರಿಸಿ ಪೂಜೆ ಮಾಡಿದರೆ, ಆ ಪೂಜೆ ಎಂದಿಗೂ ಸಫಲವಾಗುವುದಿಲ್ಲ ಎಂದು ಕೇದಿಗೆ ಹೂವಿಗೆ ಶಾಪ ನೀಡುತ್ತಾಳೆ. ಇನ್ನು ಗೋಮಾತೆಗೆ ತಾಯಿಯ ಸ್ಥಾನವಿದ್ದರೂ ಕೂಡ, ನೀನು ಎಂಜಿಲು ತಿನ್ನುವಂತಾಗಲಿ ಎಂದು ಶಾಪ ನೀಡುತ್ತಾಳೆ.
ಅಲ್ಲದೇ ಫಲ್ಗುಣಿ ನದಿ ಬರೀ ಹೆಸರಿಗಷ್ಟೇ ನದಿಯಾಗಿರಲಿ ಎಂದು ಶಾಪ ನೀಡುತ್ತಾಳೆ. ಹಾಗಾಗಿ ಗಯಾದಲ್ಲಿರುವ ಫಲ್ಗುಣಿಯಲ್ಲಿ ಜನ ಪಿಂಡ ಪ್ರಧಾನ ಮಾಡಲು ಬರುತ್ತಾರೆ. ಹಾಗೆ ಬಂದವರು ಸ್ನಾನ ಮಾಡಬೇಕೆಂದಲ್ಲಿ, ಅಲ್ಲಿರುವ ಮರಳನ್ನು ಸರಿಸಬೇಕು. ಆಗಲೇ ಅವರಿಗೆ ನೀರು ಸಿಗೋದು. ಹಾಗಾಗಿ ಫಲ್ಗುಣಿ ನದಿ ಹೆಸರಿಗಷ್ಟೇ ನದಿಯಾಗಿ, ಭೂಮಿಯ ಒಳಗೆ ಹರಿಯುತ್ತಿದೆ.