ಇಂಥ ಸಮಯದಲ್ಲಿ ರುದ್ರಾಕ್ಷಿಯನ್ನು ಧರಿಸುವ ತಪ್ಪು ಮಾಡಬೇಡಿ..

ರುದ್ರಾಕ್ಷಿ ಅಂದ್ರೆ ಶಿವನ ಮೂರನೇಕಣ್ಣು ಎಂದರ್ಥ. ಇದರ ಅಂಶವೇ ಭೂಮಿಗೆ ಬಿದ್ದು, ಅಲ್ಲಿ ಗಿಡವಾಗಿ, ಆ ಗಿಡದ ಹಣ್ಣೇ ರುದ್ರಾಕ್ಷಿ ಹಣ್ಣಾಯಿತು. ನಂತರ ಅದನ್ನ ಒಣಗಿಸಿ, ರುದ್ರಾಕ್ಷಿ ಮಾಡಿ, ಧರಿಸಲಾಯಿತು. ಆದ್ರೆ ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳು ರುದ್ರಾಕ್ಷಿ ಧರಿಸುವಂತಿಲ್ಲ. ಯಾಕಂದ್ರೆ ಅವರು ಪ್ರತಿ ತಿಂಗಳು ಋತುಮತಿಯಾಗುತ್ತಾರೆಂಬ ಕಾರಣಕ್ಕೆ. ಆದ್ರೆ ಗಂಡು ಮಕ್ಕಳಷ್ಟೇ ರುದ್ರಾಕ್ಷಿ ಧರಿಸಬಹುದು. ಆದ್ರೆ ಅದಕ್ಕೂ ಸುಮಾರು ಪದ್ಧತಿಗಳಿದೆ. ಹಾಗಾದ್ರೆ ರುದ್ರಾಕ್ಷಿ ಧರಿಸಿ ಮಾಡಬಾರದ ಕೆಲಸಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

5 ಸಮಯದಲ್ಲಿ ರುದ್ರಾಕ್ಷಿ ಧರಿಸಬಾರದು ಅಂತಾ ಹೇಳಲಾಗುತ್ತದೆ. ಮೊದಲನೇಯದಾಗಿ ನಿಮ್ಮ ಮನೆಯಲ್ಲಿ ಯಾರಾದರೂ ಋತುಚಕ್ರದಲ್ಲಿದ್ದರೆ, ನೀವು ರುದ್ರಾಕ್ಷಿ ಧರಿಸುವಂತಿಲ್ಲ. ಅಥವಾ ನೀವು ರುದ್ರಾಕ್ಷಿ ಧರಿಸಿ, ಯಾವ ಹೆಣ್ಣು ಮಕ್ಕಳನ್ನೂ ಮುಟ್ಟುವಂತಿಲ್ಲ. ಯಾಕಂದ್ರೆ ಹಿಂದೂ ಪದ್ಧತಿ ಪ್ರಕಾರ, ಮುಟ್ಟಾದ ಹೆಣ್ಣು ಮಕ್ಕಳು ಯಾವುದೇ ಪೂಜೆ, ಪುನಸ್ಕಾರದಲ್ಲಿ ಭಾಗಿಯಾಗಬಾರದು. ದೇವರಿಗೆ ಸಂಬಂಧಿಸಿದ ವಸ್ತುವನ್ನು ಮುಟ್ಟಬಾರದು ಅನ್ನೋ ನಂಬಿಕೆ ಇದೆ. ಹಾಗಾಗಿ ರುದ್ರಾಕ್ಷಿ ಧರಿಸಿ, ಹೆಣ್ಣು ಮಕ್ಕಳನ್ನು ಮುಟ್ಟಬೇಡಿ.

ಎರಡನೇಯದಾಗಿ ಮಾಂಸಾಹಾರ ಸೇವಿಸುವಾಗ ಮತ್ತು ಧೂಮಪಾನ, ಮದ್ಯಪಾನ ಮಾಡುವಾಗ ರುದ್ರಾಕ್ಷಿ ಧರಿಸಬಾರದು. ಹೀಗೆ ಮಾಡಿದ್ದಲ್ಲಿ, ಅದರಲ್ಲಿರುವ ಶಕ್ತಿ ಕುಂದಿಹೋಗುತ್ತದೆ. ಮತ್ತು ನಿಮಗೆ ಇದು ನಕಾರಾತ್ಮಕ ಪರಿಣಾಮ ಬೀರಬಹುದು. ನಿಮ್ಮ ಆರೋಗ್ಯ, ಅದೃಷ್ಟದ ಮೇಲೆ ಇದುರ ಪರಿಣಾಮ ಬಿದ್ದು, ನಿಮ್ಮ ನೆಮ್ಮದಿ ಹಾಳಾಗಬಹುದು. ಹಾಗಾಗಿ ಮಾಂಸಾಹಾರ ಸೇವಿಸುವಾಗ ಮತ್ತು ಧೂಮಪಾನ, ಮದ್ಯಪಾನ ಮಾಡುವಾಗ ರುದ್ರಾಕ್ಷಿ ಧರಿಸಬೇಡಿ.

ಮೂರನೇಯದಾಗಿ ಮನೆಯಲ್ಲಿ ಸೂತಕವಿರುವ ಸಮಯದಲ್ಲಿ, ಅಥವಾ ನೀವು ಯಾರದ್ದಾದರೂ ಶವ ನೋಡಲು ಹೋಗುವ ಸಂದರ್ಭದಲ್ಲಿ ರುದ್ರಾಕ್ಷಿ ಧರಿಸುವುದನ್ನು ನಿಷೇಧಿಸಲಾಗಿದೆ. ಯಾಕಂದ್ರೆ ಶವವಿರುವ ಜಾಗದಲ್ಲಿ ಅಶುದ್ಧತೆ ಇರುತ್ತದೆ. ಆ ಜಾಗದಲ್ಲಿ ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ, ಶವದಲ್ಲಿರುವ ಕೀಟಾಣುವಿನಿಂದ ಆ ಸ್ಥಳ ಅಶುಚಿಯಾಗಿರುತ್ತದೆ. ಹಾಗಾಗಿ ಅಲ್ಲಿ ಹೋದ ಜನರಿಗೂ ಕೀಟಾಣು ಅಂಟುತ್ತದೆ. ಇದರಿಂದ ರುದ್ರಾಕ್ಷಿ ಅಶುದ್ಧವಾಗುತ್ತದೆ. ಮತ್ತು ಇದು ನಿಮಗೆ ಉತ್ತಮವಲ್ಲ. ಹಾಗಾಗಿ ಶವ ಸಂಸ್ಕಾರದ ವೇಳೆ ರುದ್ರಾಕ್ಷಿ ಧರಿಸಬೇಡಿ. ಇದೇ ರೀತಿ ಮನೆಯಲ್ಲಿ ಮಗು ಜನಿಸಿದಾಗ ಕೂಡ, ಸೂತಕ ಬರುತ್ತದೆ. ಈ ಸಮಯದಲ್ಲಿಯೂ ರುದ್ರಾಕ್ಷಿ ಧರಿಸಬೇಡಿ.

ನಾಲ್ಕನೇಯದಾಗಿ ಮಲಗುವ ಸಮಯದಲ್ಲಿ ಮತ್ತು ಸಂಭೋಗದ ಸಮಯದಲ್ಲಿ ರುದ್ರಾಕ್ಷಿ ಧರಿಸಬಾರದು. ನಾವು ಮಲಗಿದ ಮೇಲೆ ನಮ್ಮ ದೇಹ ಅಶುದ್ಧವಾಗುತ್ತದೆ ಅಂತಾ ಹೇಳಲಾಗುತ್ತದೆ. ಅದಕ್ಕಾಗಿಯೇ ನಾವು ಬೆಳಿಗ್ಗೆ ಎದ್ದು ಸ್ನಾನ ಮಾಡೋದು. ಬ್ರಶ್ ಮಾಡೋದು. ಹಾಗಾಗಿ ಆ ಅಶುದ್ಧತೆ ರುದ್ರಾಕ್ಷಿಗೆ ತಾಕಬಾರದು ಅನ್ನೋ ಕಾರಣಕ್ಕೆ ಮಲಗುವ ವೇಳೆ ರುದ್ರಾಕ್ಷಿ ಧರಿಸಬಾರದು ಅಂತಾ ಹೇಳಲಾಗುತ್ತದೆ.

About The Author