ಇಂದ್ರ ದರಿದ್ರನಾಗಿ ದಿಕ್ಕಿಲ್ಲದಂತಿದ್ದಾಗ, ವಿಷ್ಣು ಸಮುದ್ರ ಮಂಥನ ಮಾಡಿ, ಮತ್ತೆ ಸಿರಿವಂತನಾಗು ಎಂದು ಸಲಹೆ ನೀಡುತ್ತಾನೆ. ಆಗ ದೇವೆಂದ್ರ ದಾನವರ ಬಳಿ ಸಂಧಾನ ಮಾಡಿ, ಸಮುದ್ರ ಮಂಥನ ಮಾಡುತ್ತಾನೆ. ಈ ವೇಳೆ ಕೆಲವು ಕೆಟ್ಟ ವಸ್ತುಗಳು ಮತ್ತು 14 ಅತ್ಯುತ್ತಮ ರತ್ನಗಳು ಸಿಗುತ್ತದೆ. ಹಾಗೆ ಸಿಕ್ಕ ಅತ್ಯುತ್ತಮ ರತ್ನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮಂದ್ರಾಚಲ ಪರ್ವತ ಮತ್ತು ವಾಸುಕಿಯ ಸಹಾಯದಿಂದ ಸಮುದ್ರ ಮಂಥನ ಮಾಡಲಾಯಿತು. ಅಮೃತ ಕುಡಿದು ಚಿರಂಜೀವಿಯಾಗಬೇಕೆಂದು ಅಸುರರು ಮತ್ತು ದೇವತೆಗಳು ಸೇರಿ, ಸ್ಪರ್ಧೆಗಿಳಿದರು. ಈ ಸಮುದ್ರ ಮಂಥನದಿಂದ ಮೊದಲು ಹೊರಬಂದಿದ್ದೇ ಹಾಲಾಹಲ. ಇದನ್ನು ಕುಡಿದ ಶಿವ ವಿಷಕಂಠನೆನ್ನಿಸಿಕೊಂಡ.
ಅಡುಗೆ ಕೋಣೆಯಲ್ಲಿರುವ ಈ 4 ವಸ್ತುವನ್ನು ಎಂದಿಗೂ ಯಾರಿಗೂ ಕೊಡಬೇಡಿ..
ನಂತರ ಹೊರಗೆ ಬಂದಿದ್ದು ಕಾಮಧೇನುವೆಂಬ ಗೋವು. ಈಕೆ ಬೇಡಿದ್ದನ್ನು ಕರುಣಿಸುವ ಗೋಮಾತೆಯಾಗಿದ್ದಳು. ಯಜ್ಞಕ್ಕೆ ಬೇಕಾದ ವಸ್ತುವನ್ನು ನೀಡುತ್ತಿದ್ದಳು. ಈಕೆಯ ಹಾಲು ಅಮೃತಕ್ಕೆ ಸಮನಾಗಿತ್ತು. ಹಾಗಾಗಿ ಈಕೆಯನ್ನು ಋಷಿಮುನಿಗಳು ತೆಗೆದುಕೊಂಡರು.
ಇದಾದ ಬಳಿಕ ಉಚ್ಛೈಶ್ರವಾ ಎಂಬ ಅಶ್ವ ಹೊರಗೆ ಬಂತು. ಇದನ್ನು ದೇವರಾಜ ಇಂದ್ರನಿಗೆ ಕೊಡಲಾಯಿತು. ಶ್ವೇತ ವರ್ಣದ ಈ ಕುದುರೆಯನ್ನು ಕುದುರೆಗಳ ರಾಜ ಎಂದೇ ಕರೆಯುತ್ತಿದ್ದರು.
ನಾಲ್ಕನೇಯದಾಗಿ ಹೊರ ಬಂದಿದ್ದು ಐರಾವತವೆಂಬ ಆನೆ. ಇದೂ ಕೂಡ ದೇವರಾಜ ಇಂದ್ರನ ಪಾಲಾಯಿತು. ಐದನೇಯದಾಗಿ ಕೌಸ್ತುಭ ಮಣಿ ಪ್ರಕಟವಾಯಿತು. ಇದನ್ನು ಶ್ರೀವಿಷ್ಣು ತನ್ನ ಹೃದಯದಲ್ಲಿ ಧಾರಣೆ ಮಾಡಿದ.
ಆರನೇಯದಾಗಿ ಕಲ್ಪವೃಕ್ಷ ಪ್ರಕಟವಾಯಿತು. ಇದನ್ನು ದೇವತೆಗಳು ಸ್ವರ್ಗಲೋಕದಲ್ಲಿ ಸ್ಥಾಪಿಸಿದರು. ಇದು ಬೇಡಿದ್ದನ್ನು ನೀಡುವ ಕಲ್ಪವೃಕ್ಷವಾಗಿತ್ತು. ಏಳನೇಯದಾಗಿ ರಂಭೆ ಎಂಬ ಸುಂದರ ನಾರಿ ಪ್ರಕಟವಾದಳು. ಈಕೆ ತಾನಾಗಿಯೇ ದೇವತೆಗಳ ಬಳಿ ಹೋಗಿ, ನಂತರ ಇಂದ್ರನ ಸ್ವರ್ಗಲೋಕದಲ್ಲಿ ನರ್ತಕಿಯಾದಳು. ಎಂಟನೇಯದಾಗಿ ಲಕ್ಷ್ಮೀ ದೇವಿ ಪ್ರಕಟವಾದಳು. ರಾಕ್ಷಸರು, ಋಷಿಗಳೆಲ್ಲ ತಮಗೆ ಲಕ್ಷ್ಮೀ ದೇವಿ ಬೇಕೆಂದು ಆಸೆಪಟ್ಟರು. ಆದ್ರೆ ಆಕೆ ಶ್ರೀವಿಷ್ಣುವನ್ನು ವರಿಸಿದಳು.
ತೀರಿಹೋದವರು ಕನಸ್ಸಿನಲ್ಲಿ ಕಾಣಿಸೋದ್ಯಾಕೆ..?
ಒಂಭತ್ತನೇಯದಾಗಿ ವಾರುಣಿ ಪ್ರಕಟವಾಯಿತು. ವಾರುಣಿ ಎಂದರೆ ಮದಿರೆ. ಇದನ್ನು ರಾಕ್ಷಸರು ತೆಗೆದುಕೊಂಡರು. ಹತ್ತನೇಯದಾಗಿ ಚಂದ್ರ ಪ್ರಕಟವಾದ. ಇದನ್ನು ಶಿವ ತನ್ನ ಮಸ್ತಕದಲ್ಲಿ ಇರಿಸಿಕೊಂಡ. ಹನ್ನೊಂದನೇಯದಾಗಿ ಪಾರಿಜಾತ ವೃಕ್ಷ ಪ್ರಕಟವಾಗಿತು. ಇದು ದೇವತೆಗಳ ಪಾಲಾಯಿತು. ಹನ್ನೆರಡನೇಯದಾಗಿ ಪಾಂಚಜನ್ಯ ಶಂಖ ಉತ್ಪತ್ತಿಯಾಯಿತು. ಇದು ಕೂಡ ವಿಷ್ಣುವಿನ ಪಾಲಾಯಿತು. ಮಹಾಭಾರತ ಯುದ್ಧ ಸಮಯದಲ್ಲಿ ಕೃಷ್ಣ ಈ ಶಂಖ ಮೊಳಗಿಸಿಯೇ ಯುದ್ಧ ಆರಂಭಿಸಿದ್ದ.
ಹದಿಮೂರನೇಯದಾಗಿ ಧನ್ವಂತರಿ ದೇವ ಪ್ರಕಟವಾದ. ಇಂದ್ರನ ಅನುಮತಿಯಂತೆ, ಈತ ದೇವತೆಗಳ ವೈದ್ಯನಾದ. ಕೊನೆಯದಾಗಿ ಅಮೃತ ಪ್ರಕಟವಾಯಿತು. ಇದನ್ನು ರಾಕ್ಷಸರು ಕುಡಿದು ಅಮರರಾಗುವ ಮೊದಲು ದೇವತೆಗಳಿಗೆ ಅಮೃತವನ್ನು ಹಂಚಬೇಕೆಂದು ವಿಷ್ಣು, ಮೋಹಿನಿ ರೂಪ ಧಾರಣೆ ಮಾಡಿ, ದೇವತೆಗಳಿಗೆ ಅಮೃತ ಹಂಚಿದ.