ನಾವು ಸಾತ್ವಿಕ ಆಹಾರದ ಬಗ್ಗೆ ನಿಮಗೆ ಹಲವು ಬಾರಿ ಹೇಳಿದ್ದೆವು. ಸಾತ್ವಿಕ ಆಹಾರ ಎಂದರೇನು..? ಇದರಲ್ಲಿ ಯಾವ ಯಾವ ವಸ್ತು ನಿಷಿದ್ಧವಾಗಿದೆ ಅನ್ನೋ ಬಗ್ಗೆ ಮಾಹಿತಿಯನ್ನ ನೀಡಿದ್ದೆವು. ಈಗ ಅದೇ ರೀತಿ, ಸಾತ್ವಿಕ, ತಾಮಸಿಕ ಮತ್ತು ರಾಜಸಿಕ ಗುಣದ ಬಗ್ಗೆಯೂ ಮಾಹಿತಿ ನೀಡಲಿದ್ದೇವೆ. ಇದು ಮನುಷ್ಯನಿಗಿರುವ ಗುಣ. ಈ ಮೂರು ಗುಣದಲ್ಲಿ ನಿಮ್ಮದ್ಯಾವ ಗುಣ ಅನ್ನೋ ಬಗ್ಗೆ ಖಂಡಿತ ಕಾಮೆಂಟ್ ಮಾಡಿ.
ತಾಮಸಿಕ ಗುಣ. ತಾಮಸಿಕ ಗುಣ ಅಂದ್ರೆ ಯಾವಾಗಲೂ ಆಲಸ್ಯದಿಂದ ಕೂಡಿರುವುದು. ಬೆಳಿಗ್ಗೆ ಲೇಟ್ ಎದ್ದರೂ, ಮತ್ತೆ ಮತ್ತೆ ನಿದ್ದೆ ಬೇಕು ಎನ್ನಿಸುವುದು. ಯಾವಾಗಲೂ ಅನಾರೋಗ್ಯ ಸಮಸ್ಯೆ ಎಂದು ಸುಮ್ಮನೆ ಕೂರುವುದು. ಯಾವಾಗಲೂ ಬೇಸರದಲ್ಲಿರುವುದು. ಅಳುತ್ತಲಿರುವುದು. ಪದೇ ಪದೇ ಕೋಪ ಮಾಡಿಕೊಳ್ಳುವುದು. ಯಾರೊಂದಿಗೂ ಮಾತನಾಡಲು ಇಚ್ಚಿಸದಿರುವುದು. ಇದೆಲ್ಲ ತಾಮಸಿಕ ಗುಣ. ಇಂಥ ಗುಣ ಇದ್ದವರು ಜೀವನದಲ್ಲಿ ಯಶಸ್ಸು ಸಾಧಿಸಲು ಎಂದಿಗೂ ಸಾಧ್ಯವಿಲ್ಲ. ಹೆಚ್ಚು ನಾನ್‌ವೆಜ್ ಇಷ್ಟ ಪಡುತ್ತಾರೆ.
ರಾಜಸಿಕ ಗುಣ. ಈ ಗುಣ ಇದ್ದವರಿಗೆ ಏನಾದರೂ ಸಾಧಿಸಬೇಕು ಅನ್ನೋ ಛಲವಿರುತ್ತದೆ. ಯಾವಾಗಲೂ ಚೈತನ್ಯದಾಯಕವಾಗಿರ್ತಾರೆ. ಜೀವನವನ್ನು ಎಂಜಾಯ್ ಮಾಡಬೇಕು ಅನ್ನೋ ಸ್ವಭಾವದವರು. ಯಾವಾಗಲಾದರೂ ಒಮ್ಮೆ ಕೋಪ ಬರುತ್ತದೆ. ಮಾತನಾಡುವುದಿದ್ದರೆ, ರಾಜಕೀಯ, ಸಿನಿಮಾ, ಗಾಸಿಪ್ ಬಗ್ಗೆಯೇ ಇವರ ಮಾತಿರುತ್ತದೆ. ಇವರಿಗೆ ಇಷ್ಟೆಲ್ಲ ಉತ್ತಮ ಗುಣವಿದ್ರೂ, ಇವರ ಮನಸ್ಸಿನಲ್ಲಿ ತಳಮಳವಿರುತ್ತದೆ. ಕೆಲಸದ ಬಗ್ಗೆ ಗರ್ವವಿರುತ್ತದೆ. ಈ ಗರ್ವ ಮತ್ತು ತಳಮಳ ಹೆಚ್ಚಾದರೆ, ಅಹಂಕಾರ ಬರುತ್ತದೆ. ಮತ್ತು ಅಹಂಕಾರವೇ ಮನುಷ್ಯನ ನಾಶಕ್ಕೆ ದಾರಿ. ಹಾಗಾಗಿ ರಾಜಸಿಕ ಗುಣ ಹೆಚ್ಚಾಗದಿದ್ದರೆ ಒಳಿತು. ಇವರು ಎಲ್ಲ ರೀತಿಯ ಆಹಾರ ಇಷ್ಟ ಪಡುತ್ತಾರೆ.
ಸಾತ್ವಿಕ ಗುಣ. ಬರೀ ಶಾಖಾಹಾರಿ ಆಹಾರ ಇಷ್ಟ ಪಡುತ್ತಾರೆ. ಇವರಿಗೆ ದೇವರ ಬಗ್ಗೆ ಭಕ್ತಿ, ಗುರು ಹಿರಿಯರ ಬಗ್ಗೆ ಗೌರವ ಹೆಚ್ಚಿರುತ್ತದೆ. ಬೆಳಿಗ್ಗೆ ಬೇಗ ಎದ್ದು, ಯೋಗ, ಧ್ಯಾನ, ಕೆಲಸದಲ್ಲಿ ಸಹಾಯ ಮಾಡುವ ಸ್ವಭಾವ ಇವರಿಗಿರುತ್ತದೆ. ಇವರು ತಮ್ಮ ಸಮಯವನ್ನು ವ್ಯರ್ಥ ಮಾಡದೇ, ಉತ್ತಮ ಕೆಲಸದಲ್ಲಿ ತೊಡಗಿಕೊಳ್ಳಲು ಇಷ್ಟಪಡುತ್ತಾರೆ. ಇವರು ಯಾವಾಗಲೂ ಹಸನ್ಮುಖಿಯಾಗಿ, ಜಗಳವಾಡಲು, ಬೈಯಲ್ಲು ಇಷ್ಟಪಡದ, ಪ್ರಶಾಂತ ಮನಸ್ಸಿನ ವ್ಯಕ್ತಿಯಾಗಿರುತ್ತಾರೆ. ಈ ಮೂರರಲ್ಲಿ ನಿಮ್ಮದು ಯಾವ ಗುಣ ಅಂತಾ ಕಾಮೆಂಟ್ ಮಾಡಿ ತಿಳಿಸಿ.