Sunday, November 16, 2025

Latest Posts

ನಾಯಿಗಳು ನೀಡುತ್ತದೆ ಈ ಶುಭ ಮತ್ತು ಅಶುಭದ ಸಂಕೇತಗಳು..

- Advertisement -

ನಾಯಿಗಳು ಅಂದ್ರೆ ಮೊದಲು ನೆನಪಿಗೆ ಬರೋದು ನಿಯತ್ತು. ಮತ್ತು ಮುದ್ದು ಮುದ್ದು ಮುಖಗಳು. ಹಾಗಾಗಿಯೇ ಹಲವರಿಗೆ ನಾಯಿ ಅಂದ್ರೆ ಇಷ್ಟದ ಪ್ರಾಣಿಗಳು. ಆದ್ರೆ ನಾಯಿ ಬರೀ ನಿಯತ್ತಿಗೆ, ಮುದ್ದಿಗಷ್ಟೇ ಫೇಮಸ್ ಅಲ್ಲ, ಬದಲಾಗಿ ಇದು ಶುಭ ಮತ್ತು ಅಶುಭ ಸಂಕೇತಗಳನ್ನ ಕೂಡ ನೀಡತ್ತೆ. ಇದನ್ನು ಶ್ವಾನ ಶಕುನ ಎಂದು ಹೇಳಲಾಗತ್ತೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..

ನಾಯಿ ಎಂದರೆ ಕಾಲ ಭೈರವನ ವಾಹನ. ಹಾಗಾಗಿ ನಾಯಿಯನ್ನು ಪ್ರೀತಿ, ಕಾಳಜಿಯಿಂದ ಸಾಕಿದ್ದಲ್ಲಿ, ನೀವು ಕಾಲ ಭೈರವನ ಪ್ರೀತಿಗೆ ಪಾತ್ರರಾಗುತ್ತೀರಿ. ಇನ್ನು ಕರಿ ನಾಯಿಯ ಮೇಲೆ ರಾಹು ಮತ್ತು ಕೇತುವಿನ ಪ್ರಭಾವ ಹೆಚ್ಚಾಗಿರುತ್ತದೆ. ಹಾಗಾಗಿ ಕಪ್ಪು ನಾಯಿ ಸಾಕಿದವರ ಮನೆಗೆ ಯಾರದ್ದೂ ದೃಷ್ಟಿ ತಾಕುವುದಿಲ್ಲ. ಆ ಮನೆಯಲ್ಲಿ ನೆಮ್ಮದಿ ಇರುತ್ತದೆ.

ಇನ್ನು ಯಾರ ಮನೆಯ ಮುಂದೆ ನಾಯಿ ಅಳುತ್ತದೆಯೋ, ಆ ಮನೆಯವರು ಅಶುಭ ಸಮಾಚಾರ ಕೇಳಲಿದ್ದಾರೆ ಎಂದರ್ಥ. ಅಲ್ಲದೇ ನಾಯಿ ಜೋರಾಗಿ ಕೂಗಿದರೆ, ಆ ಸ್ಥಳದಲ್ಲಿ ಹತ್ತಿರದಲ್ಲೇ ಎಲ್ಲೋ, ಕೆಟ್ಟ ಘಟನೆ ನಡೆಯಲಿದೆ. ಅಥವಾ ಅಲ್ಲಿ ಯಾರದ್ದೋ ಸಾವಾಗಲಿದೆ ಎಂದರ್ಥ. ಯಾಕಂದ್ರೆ, ನಾಯಿಗೆ ಕೆಲ ಘಟನೆಗಳ ಬಗ್ಗೆ ಮೊದಲೇ ಗೊತ್ತಾಗುತ್ತದೆ. ಯಮಕಿಂಕರರು ಬರುವುದು ನಾಯಿಗೆ ಕಾಣಿಸುತ್ತದೆ ಎಂದು ಹೇಳಲಾಗತ್ತೆ.

ಇನ್ನು ಬೆಳಬೆಳಿಗ್ಗೆ ಮನೆ ಮುಂದೆ ನಾಯಿ ಅಳುತ್ತ ಕೂತಿದ್ದರೆ, ಆ ದಿನ ನಿಮಗೆ ಯಾವುದಾದರೂ ಮುಖ್ಯವಾದ ಕೆಲಸ ಮಾಡುವುದಿದ್ದರೆ, ಅದನ್ನ ಕ್ಯಾನ್ಸಲ್ ಮಾಡಿ. ಯಾಕಂದ್ರೆ ಆ ಕೆಲಸದಿಂದ ನಿಮಗೆ ಕಂಠಕವಾಗುವ ಸೂಚನೆಯನ್ನ ನಾಯಿ ನೀಡಿರುತ್ತದೆ. ಅಲ್ಲದೇ ನಾಯಿ ಕಣ್ಣೀರು ಹಾಕುತ್ತ, ನೀವು ಹಾಕಿದ ಆಹಾರ ತಿನ್ನದಿದ್ದಲ್ಲಿ, ನಿಮ್ಮ ಮನೆಗೆ ಆರ್ಥಿಕ ಸಮಸ್ಯೆ ಬರಲಿದೆ ಎಂಬ ಸೂಚನೆಯನ್ನು ಇದು ನೀಡಿದಂತೆ.

ಇನ್ನು ನಾಯಿ, ದನದ ಜೊತೆ ಆಡುತ್ತಿದ್ದರೆ, ಅಥವಾ ನಾಯಿ ನಿಮ್ಮ ಕನಸಿನಲ್ಲಿ ಬಂದು ಆಡುತ್ತಿದ್ದರೆ, ನಿಮಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದರ್ಥ. ನಾಯಿಗೆ ಎಳ್ಳೆಣ್ಣೆಯಲ್ಲಿ ಮಾಡಿದ ಚಪಾತಿಯನ್ನು ತಿನ್ನಿಸಿದ್ದಲ್ಲಿ, ಶನಿ ಕಾಟದಿಂದ ಮುಕ್ತಿ ಸಿಗುತ್ತದೆ. ಇನ್ನು ನೀವು ಮನೆಯಲ್‌ಲಿ ನಾಯಿ ಸಾಕಿದ್ದಲ್ಲಿ, ಅಥವಾ ನಿಮಗೆ ನಾಯಿಗೆ ತಿಂಡಿ ಹಾಕಲು ಅವಕಾಶ ಸಿಕ್ಕಿದ್ದಲ್ಲಿ, ಅದಕ್ಕೆ ಪ್ರೀತಿಯಿಂದ ಎಂಜಿಲು ಮಾಡದ ಊಟವನ್ನು ಹಾಕಿ. ಇದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಪಾಪಗಳನ್ನು ಮಾಡಿದ ಊರ್ವಶಿ ಅಪ್ಸರೆಯಾಗಲು ಕಾರಣವೇನು..?

ಅರ್ಜುನನ ರುಂಡವನ್ನು ಮುಂಡದಿಂದ ಬೇರ್ಪಡಿಸಿದವರು ಯಾರು ಗೊತ್ತೇ..?

ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 1

- Advertisement -

Latest Posts

Don't Miss