ಮಕ್ಕಳು ಓದುವ ಕೋಣೆ ಎಷ್ಟು ಚಂದವಾಗಿ, ಎಷ್ಟು ಶಾಂತವಾಗಿ ಇರುತ್ತದೆಯೋ, ಅಷ್ಟು ಮಕ್ಕಳು ಏಕಾಗೃತೆಯಿಂದ ಓದಲು ಸಾಧ್ಯವಾಗುತ್ತದೆ. ಹಾಗಾಗಿ ಇಂದು ನಾವು ಮಕ್ಕಳು ಓದುವ ಕೋಣೆ ಹೇಗಿರಬೇಕು..? ಅಲ್ಲಿ ಏನೇನಿರಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ…
ಮೊದಲನೇಯದಾಗಿ ಓದುವ ಕೋಣೆ ಯಾವಾಗಲೂ ಸ್ವಚ್ಛವಾಗಿರಬೇಕು. ಅಲ್ಲಿ ಧೂಳು, ಕಸ ಕಡ್ಡಿಯೆಲ್ಲ ಇರಬಾರದು. ಹಾಗಾಗಿ ಪ್ರತಿದಿನ ನೀವು ಓದುವ ಕೋಣೆಯನ್ನು ಗುಡಿಸಿ, ಒರೆಸಿ ಕ್ಲೀನ್ ಆಗಿ ಇರಿಸಿಕೊಳ್ಳಬೇಕು.
ಎರಡನೇಯದಾಗಿ ನೀವು ಓದುವ ಕೋಣೆಗೆ ಚಪ್ಪಲಿ ಧರಿಸಿ ಹೋಗಬಾರದು. ಮತ್ತು ನಿಮ್ಮ ಕೋಣೆಗೆ ಯಾರೂ ಕೂಡ ಚಪ್ಪಲಿ ಧರಿಸಿ ಬರದಂತೆ ನೋಡಿಕೊಳ್ಳಬೇಕು. ಯಾಕಂದ್ರೆ ನೀವು ನಿಮ್ಮ ಕೋಣೆಯಲ್ಲಿ ಎಷ್ಟಾಗತ್ತೋ ಅಷ್ಟು ನೆಗೆಟಿವ್ ಎನರ್ಜಿ ಇರದಂತೆ ನೋಡಿಕೊಳ್ಳಬೇಕು. ನೀವು ನಿಮ್ಮ ಓದುವ ಕೋಣೆಯಲ್ಲಿ ದೇವರ ಫೋಟೋವನ್ನ ಇರಿಸಿಕೊಂಡಿದ್ದರೆ, ಚಪ್ಪಲಿ ಧರಿಸಿ ಯಾರಾದರೂ ಒಳಗೆ ಬಂದರೆ, ಅಲ್ಲಿ ಪಾಸಿಟಿವ್ ಎನರ್ಜಿ ಕಡಿಮೆಯಾಗುತ್ತದೆ. ಹಾಗಾಗಿ ಯಾರೂ ನಿಮ್ಮ ಕೋಣೆಗೆ ಚಪ್ಪಲಿ ಧರಿಸಿ ಬರದಂತೆ ನೋಡಿಕೊಳ್ಳಿ.
ಇನ್ನು ಮೂರನೇಯದಾಗಿ ನಿಮ್ಮ ಕೋಣೆಯ ಪೇಯ್ಟಿಂಗ್ ತಿಳಿ ನೀಲಿ ಬಣ್ಣದ್ದಾಗಿರಲಿ. ಅಥವಾ ಬಿಳಿ ಬಣ್ಣದ್ದಾಗಿರಲಿ. ಎರಡು ಮೂರು ಬಣ್ಣದ ಪೇಂಟ್ ಮಾಡಿಸುವುದು, ಅಥವಾ ಗಾಢವಾದ ಬಣ್ಣದಿಂದ ಪೇಂಟ್ ಮಾಡಿಸಿದ್ದಲ್ಲಿ, ಆ ಕೋಣೆಯಲ್ಲಿ ನೀವು ಏಕಾಗೃತೆಯಿಂದ ಓದಲಾಗುವುದಿಲ್ಲ. ಹಾಗಾಗಿ ಓದುವ ಕೋಣೆಯ ಬಣ್ಣ ತಿಳಿ ಬಣ್ಣದ್ದಾಗಿರಲಿ.
ನಾಲ್ಕನೇಯದಾಗಿ ನಿಮ್ಮ ಓದುವ ಕೋಣೆಯಲ್ಲಿ ಕಟ್ಟಿಗೆಯ ಟೇಬಲ್, ಕುರ್ಚಿ ಮತ್ತು ಕಪಾಟಿರಲಿ. ಟೇಬಲ್ ಮತ್ತು ಕುರ್ಚಿ ನಿಮಗೆ ಓದಿಕೊಳ್ಳುವುದಕ್ಕಾದರೆ, ಕಪಾಟು ನಿಮ್ಮ ಪುಸ್ತಕ , ಬ್ಯಾಗುಗಳನ್ನ ಇಡುವುದಕ್ಕೆ ಸಹಾಯವಾಗುತ್ತದೆ. ಹಾಗಾಗಿ ನಿಮ್ಮ ಟೇಬಲ್ ಮೇಲೆ ಪುಸ್ತಕ, ಪೆನ್ನುಗಳನ್ನಿಟ್ಟು, ಓದಲು ಅಡ್ಡಿಯಾಗುವಂತೆ ಮಾಡಿಕೊಳ್ಳಬೇಡಿ. ಓದಲು ಬೇಕಾದಷ್ಟು ಮಾತ್ರ ಪುಸ್ತಕಗಳನ್ನಿರಿಸಿಕೊಳ್ಳಿ.
ಐದನೇಯದಾಗಿ ನೀವು ಓದುವ ಕೋಣೆ ಶಾಂತತೆಯಿಂದಿರಬೇಕು. ನಿಮ್ಮ ಕೋಣೆಯ ಬಳಿ ಯಾವುದೇ ಗಲಾಟೆ ಇರಬಾರದು. ನೀವು ಏಕಾಗೃತೆಯಿಂದ ಓದುವಷ್ಟು ಶಾಂತಿ ಆ ಕೋಣೆಯಲ್ಲಿರಬೇಕು. ಮತ್ತು ನೀವು ಓದುವಾಗ ಈಶಾನ್ಯ ದಿಕ್ಕಿಗೆ ಮುಖ ಮಾಡಿ ಓದಿ. ಇಲ್ಲವಾದಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿ ಓದಿ. ಇದು ನಿಮ್ಮ ಏಕಾಗೃತೆ ಹೆಚ್ಚಿಸಲು ಅನುಕೂಲವಾದ ದಿಕ್ಕಾಗಿದೆ.
ಆರನೇಯದಾಗಿ ನಿಮ್ಮ ಕೋಣೆ ಯಾವಾಗಲೂ ಸುಗಂಧಿತವಾಗಿರಲಿ. ಹಾಗಂತ ಕೆಟ್ಟದಾಗಿರುವ ಪರ್ಫ್ಯೂಮ್ ಸಿಂಪಡಿಸಬೇಡಿ. ಬದಲಾಗಿ ಲೈಟ್ ಆಗಿ ಶ್ರೀಗಂಧದ ಪರಿಮಮಳವಿರುವ ಸೆಂಟ್ ಲೈಟ್ ಆಗಿ ಸ್ಪ್ರೇ ಮಾಡಿ. ನೀವು ನಿಮ್ಮ ಕೋಣೆಯಲ್ಲಿ ಕುಡಿಯಲು ನೀರನ್ನಷ್ಟೇ ತಂದಿಟ್ಟುಕೊಳ್ಳಿ. ಜ್ಯೂಸ್, ಟೀ, ಕಾಫಿ ಕುಡಿಯಬಹುದು. ಅದನ್ನ ಬಿಟ್ಟು ಊಟ ತಿಂಡಿಯನ್ನೆಲ್ಲ ಓದುವ ಕೋಣೆಯಲ್ಲಿ ತಿನ್ನಬಾರದು. ಹಸಿವಾದಾಗ, ಓದುವ ಕೋಣೆಯ ಹೊರಗೆ ಹೋಗಿ ತಿಂದು ಬನ್ನಿ.