ಕೆಲವೊಂದು ಕನಸು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡುತ್ತೆ. ಅದು ಉತ್ತಮ ರೀತಿಯಿಂದಲೂ ಇರಬಹುದು, ಕೆಟ್ಟದಾಗಿಯೂ ಇರಬಹುದು. ಕೆಲವೊಂದು ಕನಸು ಅದೃಷ್ಟವನ್ನು ತರುವಂಥದ್ದಾಗಿರುತ್ತದೆ. ಆದ್ರೆ ಆ ಕನಸಿನ ಬಗ್ಗೆ ನೀವು ಯಾರಲ್ಲಾದರೂ ಹೇಳಿದ್ರೆ, ಆ ಅದೃಷ್ಟ ಬಂದ ದಾರಿಯಲ್ಲೇ ಹೋಗುತ್ತದೆ ಅಂತಾ ಹೇಳಲಾಗತ್ತೆ. ಹಾಗಾದ್ರೆ ಎಂಥ ಕನಸು ಬಿದ್ರೆ ಅದನ್ನು ನೀವು ಬೇರೆಯವರಿಗೆ ಹೇಳಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಈ ದೇವರಿಗೆ ಮದ್ಯಪಾನವನ್ನು ನೈವೇದ್ಯವಾಗಿ ನೀಡಲಾಗುತ್ತದೆ..
ಮೊದಲನೇಯ ಕನಸು, ಕನಸಲ್ಲಿ ಸತ್ತ ವ್ಯಕ್ತಿಯನ್ನು ಕಾಣೋದು. ಅಥವಾ ಸ್ವತಃ ನೀವೇ ಸತ್ತ ಹಾಗೆ ಕನಸು ಕಾಣೋದು. ಇಂಥ ಕನಸು ಬಿದ್ದರೆ, ಅದನ್ನು ಯಾರ ಬಳಿಯೂ ಹೇಳಬೇಡಿ. ಯಾಕಂದ್ರೆ ಅದರ ಪ್ರಭಾವ ಕಡಿಮೆಯಾಗುತ್ತದೆ. ಕನಸಿನಲ್ಲಿ ನೀವು ಅಥವಾ ಇತರರು ಸತ್ತ ಹಾಗೆ ಕಂಡರೆ, ನಿಮ್ಮ ಕಷ್ಟಗಳೆಲ್ಲಾ ಕಳೆದು ಹೋಗಲಿದೆ ಎಂದರ್ಥ. ಹಾಗಾಗಿ ನಿಮ್ಮ ಕಷ್ಟ ಕಳೆದು ನೀವು ಹಾಯಾಗಿರಬೇಕು ಅಂದ್ರೆ, ನಿಮಗೆ ಬಿದ್ದ ಕನಸಿನ ಬಗ್ಗೆ ಯಾರ ಬಳಿಯೂ ಹೇಳಬೇಡಿ..
ಎರಡನೇಯ ಕನಸು ಬೆಳ್ಳಿ ನಾಣ್ಯಗಳನ್ನು ತುಂಬಿದ ಬಿಂದಿಗೆಯ ಕನಸು. ಈ ಕನಸು ಕಂಡರೆ, ನಿಮಗೆ ಅದೃಷ್ಟ ಒಲಿಯಲಿದೆ ಎಂದರ್ಥ. ಈ ಕನಸು ಬೀಳುವುದರಿಂದ ನಿಮ್ಮ ಭವಿಷ್ಯ ಉತ್ತಮವಾಗಲಿದೆ. ನೀವು ಅಂದುಕೊಂಡ ಕೆಲಸ ಬೇಗ ನೆರವೇರುತ್ತದೆ ಎಂಬುದೇ ಈ ಕನಸಿನ ಅರ್ಥ. ಹಾಗಾಗಿ ಇಂಥ ಕನಸು ಬಿದ್ದರೆ, ಯಾರಲ್ಲಿಯೂ ಹೇಳಬೇಡಿ.
ಅಪ್ಪ ಅಮ್ಮನಿಗಿಂತ ಮಿಗಿಲಾದ ದೇವರಿಲ್ಲ ಅಂತಾ ಹೇಳೋದ್ಯಾಕೆ ಗೊತ್ತಾ..?
ಮೂರನೇಯ ಕನಸು, ಹೂವನ್ನು ಕನಸ್ಸಿನಲ್ಲಿ ಕಾಣೋದು. ನಿಮ್ಮ ಕನಸಿನಲ್ಲಿ ಹೂವು ಕಂಡರೆ, ಅದು ಕೂಡ ಅದೃಷ್ಟದ ಸಂಕೇತವೇ ಸರಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನೀವು ಸಿಹಿ ಸುದ್ದಿ ಕೇಳಲಿದ್ದೀರಿ ಎಂದರ್ಥ. ನಿಮಗೆ ಸಿಹಿ ಸುದ್ದಿ ಕೇಳುವ ಯೋಗ ಬರಬೇಕೆಂದರೆ, ನೀವು ಈ ಕನಸಿನ ಬಗ್ಗೆ ಯಾರಲ್ಲಿಯೂ ಹೇಳಬಾರದು.