ಇತ್ತೀಚೆಗೆ ಥೈರಾಯ್ಡ್ ಸಮಸ್ಯೆ ಹೆಚ್ಚಾಗುತ್ತಿದೆ. ಅದರಿಂದಲೇ ಎಷ್ಟೋ ಜನ ಮಕ್ಕಳಾಗದೇ ಕೊರಗುತ್ತಿದ್ದಾರೆ. ಹಾಗಾಗಿ ಇಂದು ನಾವು ಈ ಸಮಸ್ಯೆಗೆ ಸಂಬಂಧಿಸಿದ ಕೆಲ ವಿಚಾರಗಳನ್ನು ಹೇಳಲಿದ್ದೇವೆ. ನಿಮಗೇನಾದರೂ ಥೈರಾಯ್ಡ್ ಸಮಸ್ಯೆ ಇದ್ದಲ್ಲಿ, ಕೆಲ ಕೆಲಸಗಳನ್ನ ಮಾಡೋದನ್ನ ಇಂದೇ ನಿಲ್ಲಿಸಿಬಿಡಿ..
ಕಪ್ಪು ಕಡಲೆಯನ್ನ ಹೀಗೆ ಸೇವಿಸಿದ್ರೆ ನಿಮ್ಮ ದೇಹದ ತೂಕವನ್ನು ಬೇಗ ಇಳಿಸಬಹುದು..
ಮೊದಲನೇಯ ಕೆಲಸ. ನೀವು ಹೆಚ್ಚು ಟೀ ಕಾಫಿ ಕುಡಿಯುವವರಾಗಿದ್ದರೆ, ಈಗಿಂದಲೇ ಟೀ ಕಾಫಿ ಸೇವನೆ ಬಿಟ್ಟುಬಿಡಿ. ಅಲ್ಲದೇ, ಖಾಲಿ ಹೊಟ್ಟೆಯಲ್ಲಿ ಟೀ ಕಾಫಿ ಸೇವನೆ ಮಾಡುವುದನ್ನು ನಿಲ್ಲಿಸಿಬಿಡಿ. ಯಾಕಂದ್ರೆ ಇದರಿಂದ ಗ್ಯಾಸ್ಟ್ಕಿಕ್ ಸಮಸ್ಯೆ ಉದ್ಭವಿಸುತ್ತದೆ. ಇದು ಥೈರಾಯ್ಡ್ ಸಮಸ್ಯೆ ಮೇಲೆ ಪರಿಣಾಮ ಬೀರುತ್ತದೆ.
ಎರಡನೇಯ ಕೆಲಸ. ತಣ್ಣಗಿನ ನೀರು, ಜ್ಯೂಸ್, ಐಸ್ ಹಾಕಿದ ಪಾನೀಯ ಕುಡಿಯುವವರಾಗಿದ್ದರೆ, ಇಂದೇ ಈ ಕೆಲಸವನ್ನು ಸ್ಟಾಪ್ ಮಾಡಿ. ಹೆಚ್ಚು ಐಸ್ಕ್ರೀಮ್ ಸಹ ತಿನ್ನಬೇಡಿ. ಹೀಗೆ ಮಾಡುವುದರಿಂದ ವಾತದೋಷದಲ್ಲಿ ಅಡೆತಡೆಯುಂಟಾಗುತ್ತದೆ. ಇದು ಥೈರಾಯ್ಡ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಮಗುವಿನ ಕೂದಲು ಸಧೃಡ ಮತ್ತು ಆರೋಗ್ಯಕರವಾಗಿ ಇರಿಸುವುದು ಹೇಗೆ..?
ಮೂರನೇಯ ಕೆಲಸ. ಹೆಚ್ಚು ಟೆನ್ಶನ್ ತೆಗೆದುಕೊಳ್ಳುವ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ನಿಮಗೆ ಎಲ್ಲಿ ನೆಮ್ಮದಿ ಸಿಗುತ್ತದೆಯೋ ಆ ಜಾಗದಲ್ಲಿರಲು ಪ್ರಯತ್ನಿಸಿ. ಮನೆಯಲ್ಲಿ ಜಗಳವಾಗದಂತೆ ನಿಗಾವಹಿಸಿ. ಕೆಲ ಕಾಲ ನೆಮ್ಮದಿಯಾಗಿ ಪ್ರೀತಿಪಾತ್ರರ ಮನೆಗೆ ಅಥವಾ ಯಾವುದಾದರೂ ಪ್ರಶಾಂತವಾದ ಸ್ಥಳಕ್ಕೆ ಹೋಗಿ. ಯಾಕಂದ್ರೆ ಥೈರಾಯ್ಡ್ ಇದ್ದವರು, ಹೆಚ್ಚು ಟೆನ್ಶನ್ ತೆಗೆದುಕೊಂಡ್ರೆ, ಈ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ.