Monday, December 23, 2024

Latest Posts

ನಿಮ್ಮ ಗೆಳೆಯ/ಗೆಳತಿ ಒಳ್ಳೆಯವರಾ ಇಲ್ಲವಾ ಅಂತಾ ತಿಳಿಯೋದು ಹೇಗೆ..?

- Advertisement -

ಎಲ್ಲರಿಗೂ ತಮ್ಮ ಗೆಳೆಯ ಅಥವಾ ಗೆಳತಿ, ಉತ್ತಮರು, ಒಳ್ಳೆಯವರು ಅಂತಾನೇ ಅನ್ನಿಸುತ್ತದೆ. ಯಾಕಂದ್ರೆ ನಿಮಗೆ ಈವರೆಗೆ ಕಷ್ಟಕಾಲ ಬಂದಿರ್ಲಿಕ್ಕಿಲ್ಲಾ. ಆದ್ರೆ ಕಷ್ಟ ಕಾಲದಲ್ಲೂ ನೆಪ ಹೇಳದೇ, ಓಡಿ ಹೋಗದೇ, ನಿಮಗೆ ಸಾಥ್ ಕೊಡುತ್ತಾರಲ್ಲ, ಅವರೇ ನಿಜವಾದ ಗೆಳೆಯ ಗೆಳತಿ. ಹಾಗಾದ್ರೆ ನಿಮ್ಮ ಗೆಳೆಯರು ಉತ್ತಮರಾ ಇಲ್ಲವಾ ಅಂತಾ ತಿಳಿಯೋದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನವರಾತ್ರಿಯ ಒಂಭತ್ತನೇಯ ದಿನದ ಪ್ರಸಾದ ರೆಸಿಪಿ..

  1. ನಿಮ್ಮ ಗೆಳೆಯ ಒಳ್ಳೆಯವರಾಗಿದ್ರೆ, ನಿಮಗೆ ಒಳ್ಳೆಯದೇ ಬಯಸಿದ್ರೆ, ನಿಮ್ಮ ಬಳಿ ಅವರೆಂದೂ ಸುಳ್ಳು ಹೇಳುವುದಿಲ್ಲ. ನೀವು ಹೇಗೆ ಕಾಣುತ್ತಿದ್ದೀರೋ, ಹಾಗೆ ಹೇಳುತ್ತಾರೆ. ನೀವು ಚೆನ್ನಾಗಿ ಕಾಣದಿದ್ದಲ್ಲಿ, ಚೆನ್ನಾಗಿ ಕಾಣ್ತಿಲ್ಲಾ ಅಂತಾ, ಚೆನ್ನಾಗಿ ಮಾತನಾಡದಿದ್ದಲ್ಲಿ, ಸರಿಯಾಗಿ ಮಾತಾಡು ಎಂದು, ಚೆನ್ನಾಗಿ ಬಿಹೇವ್ ಮಾಡದಿದ್ದಲ್ಲಿ, ನೀವು ಮಾಡಿದ್ದು ಸರಿ ಅಲ್ಲ ಅಂತಾನೇ ಹೇಳ್ತಾರೆ ಹೊರತು, ನೀ ಮಾಡಿದ್ದೆಲ್ಲವೂ ಸರಿ ಅಂತಾ ಹೇಳೋದಿಲ್ಲ. ಹಾಗೇನಾದ್ರೂ ನೀವು ತಪ್ಪು ಮಾಡಿದ್ರೂ, ಅದೇ ಸರಿ ಅನ್ನೋ ಗೆಳೆಯರು ನಿಮ್ಮ ಯಶಸ್ಸನ್ನು ಎಂದಿಗೂ ಬಯಸೋದಿಲ್ಲಾ.
  2. ನಿಮ್ಮ ನಿಜವಾದ ಗೆಳೆಯ ಎಂದಿಗೂ ನಿಮ್ಮನ್ನು ಅವಮಾನಿಸುವುದಿಲ್ಲ. ಸುಮ್ಮಸುಮ್ಮನೆ ಕಂಡ ಕಂಡವರೆದುರು ನಿಮ್ಮನ್ನು ತಮಾಷೆ ಮಾಡೋದಿಲ್ಲಾ. ಫ್ರೆಂಡ್ಶಿಪ್ ಅಂದ ಮೇಲೆ ಅಲ್ಲಿ ತಮಾಷೆ ತಂಟೆ ಎಲ್ಲಾ ಇರುತ್ತದೆ. ಆದ್ರೆ ನಿಮಗೆ ಅವಮಾನವಾಗುವಷ್ಟು ನಿಮ್ಮನ್ನು ಯಾರಾದ್ರೂ ತಮಾಷೆ ಮಾಡಿದ್ರೆ, ಅಂಥವರ ಗೆಳೆತನ ಬಿಡುವುದೇ ಉತ್ತಮ.

ವಿಜಯದಶಮಿ ದಸೆರೆಗೆ ನೈವೇದ್ಯ ರೆಸಿಪಿ..

3. ನೀವು ಭಾಗವಹಿಸುವ ಸ್ಪರ್ಧೆಗಳಲ್ಲಿ ಸಪೋರ್ಟ್ ಮಾಡುವವರು ನಿಜವಾದ ಗೆಳೆಯರು. ನೀವು ಯಶಸ್ವಿಯಾಗುವುದನ್ನು ಕಾಣಲು ಬಯಸುವವರು, ನಿಮ್ಮ ಯಶಸ್ಸನ್ನು ನೋಡಿ ಖುಷಿಪಡುವವರು ನಿಜವಾದ ಗೆಳೆಯರು. ಅದನ್ನು ಬಿಟ್ಟು ನಿಮ್ಮನ್ನು ಉತ್ತಮ ಕೆಲಸಕ್ಕಾಗಿ ಬೆಂಬಲಿಸದೇ, ಆ ಕೆಲಸ ಮಾಡದಿರುವಂತೆ ಮಾಡುವವರು ಸ್ವಾರ್ಥಿಗಳು.

4. ನೀವು ಕಷ್ಟಕಾಲದಲ್ಲಿ ಇರುವಾಗ ನಿಮ್ಮ ಸಾಥ್ ನೀಡದೇ, ನಿಮ್ಮನ್ನು ಬಿಟ್ಟು ಓಡುವವರು ಒಳ್ಳೆಯ ಗೆಳೆಯರಾಗಲು ಸಾಧ್ಯವೇ ಇಲ್ಲ. ನೀವು ಕೂಡ ನಿಮ್ಮ ಗೆಳೆಯ ಗೆಳತಿ ಕಷ್ಟದಲ್ಲಿರುವಾಗ, ಅವರ ಕಷ್ಟಕ್ಕೆ ಸ್ಪಂದಿಸದಿದ್ದಲ್ಲಿ, ಒಳ್ಳೆಯ ಗೆಳೆಯರಾಗಲು ಸಾಧ್ಯವೇ ಇಲ್ಲಾ.

5. ನಿಮ್ಮ ನಿಜವಾದ ಸ್ನೇಹಿತರು ಎಂದಿಗೂ ನಿಮ್ಮ ಹಿಂದೆ ಮಾತನಾಡುವುದಿಲ್ಲ. ಬದಲಾಗಿ ನಿಮ್ಮ ಮುಂದೆಯೇ ನಿಮ್ಮ ತಪ್ಪನ್ನು ಹೇಳಿ, ಅದನ್ನು ಸರಿ ಮಾಡಲು ಅವಕಾಶ ಕೊಡುತ್ತಾರೆ.

6. ನಿಮ್ಮ ಉತ್ತಮ ಗೆಳೆಯರೆಂದೂ ನಿಮ್ಮ ಬಳಿ ಲಾಭ ಪಡೆಯಲು ಬಯಸುವುದಿಲ್ಲ. ನಿಮಗೆ ಯಾವಾಗಲೂ ಲಾಭವಾಗಲಿ ಎಂದು ಬಯಸುತ್ತಾರೆ.

- Advertisement -

Latest Posts

Don't Miss