Spiritual: ಕರ್ನಾಟಕದ ಪ್ರಸಿದ್ಧ ಪುಣ್ಯಸ್ಥಳಗಳಲ್ಲಿ ಉಡುಪಿಯ ಶ್ರೀಕೃಷ್ಣ ಮಠ ಕೂಡ ಒಂದು. ದೇಶದ ಬೇರೆ ಬೇರೆ ಭಾಗಗಳಿಂದ ಭಕ್ತರು ಶ್ರೀಕೃಷ್ಣನ ದರ್ಶನಕ್ಕಾಗಿ ಬರುತ್ತಾರೆ. ಶ್ರೀಕೃಷ್ಣ ಜನ್ಮಾಷ್ಠಮಿ ವೇಳೆ ಇಲ್ಲಿ, ಕೃಷ್ಣನಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ಇಲ್ಲಿ ನಡೆಸುವ ಮೊಸರು ಕುಡಿಕೆ ಕಾರ್ಯಕ್ರಮವಂತೂ ಪ್ರಸಿದ್ಧವಾಗಿದೆ. ಇಂದು ನಾವು ಶ್ರೀಕೃಷ್ಣ ಜನ್ಮಾಷ್ಠಮಿ ವಿಶೇಷವಾಗಿ, ಉಡುಪಿ ಮಠಕ್ಕೆ ಶ್ರೀಕೃಷ್ಣ ಬಂದು ನೆಲೆಸಿದ್ದು ಹೇಗೆ ಅಂತಾ ಹೇಳಲಿದ್ದೇವೆ.
ಉಡುಪಿ ಮಠದಲ್ಲಿ ಶ್ರೀಕೃಷ್ಣನನ್ನು ಶ್ರೀಮಧ್ವಾಚಾರ್ಯರು ಸ್ಥಾಪಿಸಿದ್ದಾರೆ. ಈ ಬಗ್ಗೆ ಒಂದು ಕಥೆ ಇದೆ. ಉಡುಪಿ ಶ್ರೀಕೃಷ್ಣನ ಮೂರ್ತಿಯನ್ನು ವಿಶ್ವಕರ್ಮ ನಿರ್ಮಿಸಿದರೆಂದು ಹೇಳಲಿದ್ದು, ಈ ಮೂರ್ತಿ ದ್ವಾರಕೆಯಲ್ಲಿ ಮುಳುಗಿ ಹೋಗಿತ್ತು. ಅಲ್ಲಿ ಗೋಪಿ ಚಂದನ ರಾಶಿ ಇದ್ದಿದ್ದು, ಅದರ ಮಧ್ಯೆ ಶ್ರೀಕೃಷ್ಣನ ಕುಡಗೋಲು ಮೂರ್ತಿ ಅಡಗಿತ್ತು. ಆ ಗೋಪಿ ಚಂದನವನ್ನು ವ್ಯಾಪಾರಿಗಳು ಹಡಗಿನಲ್ಲಿ ಹಾಕಿ ತರುವಾಗ, ಸಮುದ್ರ ಮಧ್ಯೆ ಬಿರುಗಾಳಿ ಶುರುವಾಗಿ, ವ್ಯಾಪಾರಸ್ಥರ ಹಡಗು ಮುಳುಗುವ ಹಂತಕ್ಕೆ ಬರುತ್ತದೆ.
ಆ ಹಡಗಿನಲ್ಲಿ ಶ್ರೀಕೃಷ್ಣನ ಮೂರ್ತಿ ಇದೆ ಎಂದು ಅರಿತ ಮಧ್ವಾಚಾರ್ಯರು, ಇತರರ ಸಹಾಯದಿಂದ ಆ ಸಮುದ್ರ ಮುಳುಗದಂತೆ ನೋಡಿಕೊಂಡರು. ಬಳಿಕ ಗೋಪಿ ಚಂದನದ ರಾಶಿಯ ಮಧ್ಯದಿಂದ ಶ್ರೀಕೃಷ್ಣನ ಮೂರ್ತಿಯನ್ನು ತೆಗೆದು, ಪ್ರತಿಷ್ಠಾಪಿಸಿದರು. ಈ ರೀತಿಯಾಗಿ ಶ್ರೀಕೃಷ್ಣ ದ್ವಾರಕೆಯಿಂದ ಉಡುಪಿಗೆ ಬಂದು ನೆಲೆನಿಂತ. 13ನೇಯ ಶತಮಾನದಲ್ಲಿ ಈ ಮೂರ್ತಿ ಪ್ರತಿಷ್ಠಾಪನೆಯಾಯಿತು.
ಉಡುಪಿಯಲ್ಲಿ 8 ಮಠಗಳಿದೆ. ಇವನ್ನು ಅಷ್ಠಮಠಗಳೆದು ಕರೆಯಲಾಗುತ್ತದೆ. ಇಲ್ಲಿ 8ಮಠಾಧೀಶರಿದ್ದು 2 ತಿಂಗಳಿಗೊಮ್ಮೆ ಪರ್ಯಾಯವಾಗಿ, ಎಲ್ಲ ಮಠಾಧೀಶರು ಶ್ರೀಕೃಷ್ಣನ ಪೂಜೆ ಮಾಡುತ್ತಾರೆ. ಅದಮಾರು, ಫಲಿಮಾರು, ಶಿರೂರು, ಸೋದೆ, ಪುತ್ತಿಗೆ, ಪೇಜಾವರ, ಕಾಣಿಯೂರು, ಕೃಷ್ಣಾಪುರ ಮಠಗಳಿದೆ. ಈ ದೇವಸ್ಥಾನದಲ್ಲಿ ಪ್ರತೀವರ್ಷ ವಿಜೃಂಭಣೆಯಿಂದ ಕೃಷ್ಣ ಜನ್ಮಾಷ್ಠಮಿ ಆಚರಿಸಲಾಗುತ್ತದೆ.
ಭವಿಷ್ಯದ ವಿಪತ್ತಿನ ವಿರುದ್ಧ ಸಂಪತ್ತನ್ನು ಉಳಿಸಿ ಎಂದಿದ್ದಾರೆ ಚಾಣಕ್ಯರು.. ಏನಿದರ ಅರ್ಥ..?

