Friday, November 22, 2024

Latest Posts

ಜಮ್ಮು- ಕಾಶ್ಮೀರದಲ್ಲಿರುವ ವಾಸುಕಿ ನಾಗ ದೇವಸ್ಥಾನದ ಬಗ್ಗೆ ಮಾಹಿತಿ..

- Advertisement -

Spiritual: ಇಡೀ ಪ್ರಪಂಚದಲ್ಲಿ ಅತೀ ಹೆಚ್ಚು ದೇವಸ್ಥಾನವನ್ನು ಹೊಂದಿದ ದೇಶವೆಂದರೆ, ನಮ್ಮ ಭಾರತ ದೇಶ. ಏಕೆಂದರೆ ಇದೊಂದು ಹಿಂದೂ ರಾಷ್ಟ್ರವಾಗಿದೆ. ಹಾಗಾಗಿ ಇಲ್ಲಿ ಗಲ್ಲಿ ಗಲ್ಲಿಗೂ ದೇವಸ್ಥಾನವಿದೆ. ಇನ್ನು ಭಾರತದಲ್ಲಿರುವ ಪ್ರಸಿದ್ಧ ದೇವಸ್ಥಾನದಲ್ಲಿ ಜಮ್ಮು-ಕಾಶ್ಮೀರದಲ್ಲಿರುವ ವಾಸುಕಿ ನಾಗ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಜಮ್ಮುವಿನ ಡೋಡಾದಲ್ಲಿ ಈ ವಾಸುಕಿ ನಾಗ ದೇವಸ್ಥಾನವಿದೆ. ಇದನ್ನು ಭದ್ರೇವಾಹ ದೇವಸ್ಥಾನವೆಂದು ಕರಿಯಲಾಗುತ್ತದೆ. ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಸ್ಥಾನದಲ್ಲಿ ನಾಗನ ಸುಂದರವಾದ ಮೂರ್ತಿಯನ್ನು ಕೆತ್ತಲಾಗಿದೆ. ಇಲ್ಲಿನ ಕೈಲಾಸ ಕುಂಡವು ಪ್ರಸಿದ್ಧವಾಗಿದೆ.

ಪುರಾತನ ಕಥೆಯ ಪ್ರಕಾರ, ಭೂಪತ್ ಪಾಲ್ ಎಂಬ ರಾಜ, ಭದ್ರೇವಾಹದ ಮೇಲೆ ಅಧಿಕಾರ ಸ್ಥಾಪಿಸಲು ಮುಂದಾದ. ಒಮ್ಮೆ ಯುದ್ಧ ಮಾಡುತ್ತಾ, ಕೈಲಾಸ ಕುಂಡವನ್ನು ದಾಟಿ ಹೋದಾಗ, ಅಲ್ಲಿ ದೊಡ್ಡ ವಾಸುಕಿಯ ಹಿಡಿತಕ್ಕೆ, ಸಿಕ್ಕಿಕೊಂಡ. ಬಳಿಕ ತನ್ನ ತಪ್ಪಿಗೆ ವಾಸುಕಿಯಲ್ಲಿ ಕ್ಷಮೆಯಾಚಿಸಿದ. ಆಗ ವಾಸುಕಿ, ತನಗಾಗಿ ಈ ಜಾಗದಲ್ಲಿ ದೇವಸ್ಥಾನವನ್ನು ನಿರ್ಮಿಸಬೇಕು. ಆದಷ್ಟು ಬೇಗ ನಿರ್ಮಿಸಬೇಕು ಎಂದಿತು. ಅದಕ್ಕೆ ಒಪ್ಪಿದ ರಾಜ, ಮರುದಿನವೇ ದೇವಸ್ಥಾನ ನಿರ್ಮಾಣಕ್ಕೆ ಮುಂದಾದ.

ಆದರೆ ದೇವಸ್ಥಾನ ನಿರ್ಮಾಣಕಾರ್ಯ ವಿಳಂಬವಾಯಿತು. ಆಗ ಕೋಪಗೊಂಡ ನಾಗ, ರಾಜನಿಗೆ ನೀರಿಲ್ಲದಂತೆ ಮಾಡಿಬಿಟ್ಟ. ವಾಸುಕಿಯ ಕೋಪಕಂಡ ರಾಜ, ಬೇಗ ಬೇಗ ದೇವಸ್ಥಾನ ಕಟ್ಟಿ ಮುಗಿಸಿದ. ಇಲ್ಲಿ ವಾಸುಕಿಯ ಜೊತೆ ರಾಜಾ ಜಾಮೂನ್ ವಾಹನನ್ನೂ ಪೂಜಿಸಲಾಗುತ್ತದೆ. ಇಬ್ಬರ ವಿಗ್ರಹವೂ ಅಕ್ಕಪಕ್ಕವಿದ್ದು, ಕಪ್ಪು ಕಲ್ಲಿನಲ್ಲಿ ಕೆತ್ತಲಾಗಿದೆ.

ಮಂಗಳಮುಖಿಯರ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ವಿಷಯಗಳು..

ತನ್ನ ಪತಿಯನ್ನು ವೇಶ್ಯೆಯ ಬಳಿ ಕರೆದೊಯ್ದ ಪತ್ನಿ ಮುಂದೇನಾಯ್ತು- ಭಾಗ 1

ತನ್ನ ಪತಿಯನ್ನು ವೇಶ್ಯೆಯ ಬಳಿ ಕರೆದೊಯ್ದ ಪತ್ನಿ ಮುಂದೇನಾಯ್ತು- ಭಾಗ 2

- Advertisement -

Latest Posts

Don't Miss