Friday, December 27, 2024

Latest Posts

ಪಾಪ ಮಾಡಿದವರೇ ಹೆಚ್ಚು ಖುಷಿಯಾಗಿರುವುದೇಕೆ..?

- Advertisement -

ಯಾರಾದರೂ ಒಳ್ಳೆ ಮನುಷ್ಯ ತೀರಿಹೋದರೆ, ಕೆಲವರು, ಛೇ ಎಷ್ಟು ಒಳ್ಳೆ ಹುಡುಗ, ಇಷ್ಟು ಬೇಗ ಹೋಗಿಬಿಟ್ಟ. ಈ ಲೋಕದಲ್ಲಿ ಎಂಥೆಂಥವರೋ ಇದ್ದಾರೆ, ಪಾಪ ಮಾಡಿಕೊಂಡೇ ಬದುಕುವವರಿದ್ದಾರೆ. ಅವರನ್ನೆಲ್ಲ ಬಿಟ್ಟು, ಆ ದೇವರಿಗೆ ಈ ಹುಡುಗನೇ ಸಿಕ್ಕನಾ ಅಂತಾ ಮಾತಾಡ್ತಾರೆ. ಅಲ್ಲದೇ, ನಾವು ನೀವು ನೋಡಿರುವ ಹಾಗೆ, ಕೆಟ್ಟ ಮನುಷ್ಯರು, ಬೇರೆಯವರಿಗೆ ಕೇಡನ್ನೇ ಬಯಸುವವರು, ಬೇರೆಯವರ ಬಗ್ಗೆ ಯಾವಾಗಲೂ ಕೆಟ್ಟದ್ದನ್ನೇ ಮಾತನಾಡುವವರು, ಯಾವಾಗಲೂ ಖುಷಿ ಖುಷಿಯಾಗಿಯೇ ಇರುತ್ತಾರೆ. ಆಗ ನಮಗೆ, ಇವರು ಇಷ್ಟೆಲ್ಲ ಕೆಟ್ಟದ್ದು ಬಯಸಿದರೂ, ಕೆಟ್ಟದ್ದು ಮಾಡಿದರೂ ಎಷ್ಟು ಖುಷಿಯಾಗಿದ್ದಾರಲ್ಲ..? ಅನ್ನೋ ಯೋಚನೆ ಬರತ್ತೆ. ಹಾಗಾಗಿ ಇಂದು ನಾವು ಯಾಕೆ ಪಾಪ ಮಾಡಿದವರೇ, ಹೆಚ್ಚು ಖುಷಿಯಾಗಿರುತ್ತಾರೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ವೇದ ವ್ಯಾಸರ ಪ್ರಕಾರ, ನಾವು ಕಳೆದ ಜನ್ಮದಲ್ಲಿ ಮಾಡಿದ ಪಾಪ, ಪುಣ್ಯ ನಮಗೆ ಈ ಜನ್ಮದಲ್ಲಿ ಪ್ರಾಪ್ತಿಯಾಗುತ್ತದೆಯಂತೆ. ಹಾಗಾಗಿ ಕೆಲ ಮನುಷ್ಯರು ಕೆಟ್ಟದ್ದು ಮಾಡಿದರೂ, ಅವರಿಗೆ ಕಳೆದ ಜನ್ಮದ ಪುಣ್ಯದ ಫಲವಾಗಿ ಎಲ್ಲವೂ ಒಳ್ಳೆಯದೇ ಆಗುತ್ತದೆಯಂತೆ. ಅದೇ ರೀತಿ, ಈ ಜನ್ಮದಲ್ಲಿ ಪಾಪ ಮಾಡಿದರೆ, ಅದರ ಫಲ ನಮಗೆ ಮುಂದಿನ ಜನ್ಮದಲ್ಲಿ ಸಿಗುತ್ತದೆ ಅಂತಾ ಹೇಳಲಾಗಿದೆ.

ಇನ್ನು ಕೆಲವರು ತಿಳಿದೋ ತಿಳಿಯದೆಯೋ ತಪ್ಪು ಮಾಡುತ್ತಾರೆ. ಆದ್ರೆ ತಿಳಿಯದೇ ಮಾಡಿದರೂ ಕೂಡ ಅದು ತಪ್ಪೇ ಆಗಿರುವುದರಿಂದ, ಅದರ ಪಾಪ ತಟ್ಟೇ ತಟ್ಟುತ್ತದೆ. ಅದೇ ರೀತಿ, ನೀವು ನಿಮ್ಮಅರಿವಿಲ್ಲದೇ, ಒಳ್ಳೆಯ ಕೆಲಸ ಮಾಡಿದರೆ, ಅದರ ಪುಣ್ಯವೂ ನಿಮಗೆ ಲಭಿಸುತ್ತದೆ. ಕೆಟ್ಟ ಜನರು ತಮಗರಿವಿಲ್ಲದೇ, ಒಳ್ಳೆಯ ಕೆಲಸ ಮಾಡಿದರೂ ಸಾಕು. ಅವರಿಗೆ ಒಳ್ಳೆಯದಾಗುತ್ತದೆ. ಈ ಕಾರಣಕ್ಕೆ ಕೆಟ್ಟದ್ದು ಮಾತನಾಡಿದರೂ, ಕೆಟ್ಟದ್ದು ಬಯಸಿದರೂ, ಕೆಟ್ಟದ್ದು ಮಾಡಿದರೂ, ಅಂಥ ಜನ ಯಾವುದೋ ಪುಣ್ಯದ ಕೆಲಸದ ಫಲವಾಗಿ ಖುಷಿಯಾಗಿರುತ್ತಾರೆ.

- Advertisement -

Latest Posts

Don't Miss