ಹೆಣ್ಣಿನ ಜೀವನ ಖುಷಿಯಾಗಿರುವುದೇ ಅಥವಾ ದುಃಖಭರಿತವಾಗಿರುವುದೇ ಅನ್ನೋದು ತಿಳಿಯೋದು ಮದುವೆಯ ಬಳಿಕ. ಯಾಕಂದ್ರೆ ಮದುವೆಯ ಬಳಿಕ ಆಕೆಯ ಜೀವನವೇ ಬದಲಾಗುತ್ತದೆ. ಪತಿ ಒಳ್ಳೆಯವನಿದ್ದರೆ, ಒಳ್ಳೆಯ ರೀತಿಯಲ್ಲಿ ಬದಲಾಗುತ್ತದೆ. ಅದೇ ದುಷ್ಟ ಪತಿ ಇದ್ದರೆ, ಆಕೆಯ ಜೀವನವೇ ಹಾಳಾಗಿ ಹೋಗುತ್ತದೆ. ಮಹಾಭಾರತದ ವಿದುರ ಈ ಬಗ್ಗೆ ಹೇಳಿದ್ದಾದರೂ ಏನು..? ಎಂಥ ಪತಿ ತನ್ನ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾನೆಂದು ತಿಳಿಯೋಣ ಬನ್ನಿ..
ಯಾವ ಪುರುಷ ಒಳ್ಳೆಯ ತನದಲ್ಲೂ, ಕೆಟ್ಟದ್ದನ್ನು ಹುಡುಕುತ್ತಾನೋ, ಅವನು ಉತ್ತಮ ಪತಿಯಾಗಲು ಸಾಧ್ಯವೇ ಇಲ್ಲ. ಯಾಕಂದ್ರೆ ಓರ್ವ ಪತ್ನಿ ತನ್ನ ಗಂಡನಿಗಾಗಿ ಎಷ್ಟೇ ಒಳ್ಳೆಯ ಕೆಲಸ ಮಾಡಲಿ, ಎಷ್ಟೇ ಅವನ ಸೇವೆ ಮಾಡಲಿ, ಆದರೂ ಅವಳು ಅವನಿಗೆಂದೂ ಇಷ್ಟವಾಗುವುದಿಲ್ಲ. ಹಾಗಾಗಿ ಅಂಥ ಪುರುಷನೊಂದಿಗೆ ಹೆಣ್ಣು ಎಂದಿಗೂ ಖುಷಿಯಾಗಿರಲು ಸಾಧ್ಯವಿಲ್ಲ.
ಇನ್ನು ವಿದುರನ ಪ್ರಕಾರ, ಇನ್ನೊಬ್ಬರ ಬಗ್ಗೆ ಯಾವಾಗಲೂ ಅವಹೇಳನ ಮಾಡುವವರು, ಬೇರೆಯವರನ್ನು ಉಪಹಾಸ ಮಾಡುವವರು ಮೂರ್ಖ ಪುರುಷರು. ಇಂಥ ಪುರುಷನನ್ನು ವಿವಾಹವಾಗುವುದರಿಂದ ಹೆಣ್ಣಿನ ಜೀವನದ ನೆಮ್ಮದಿಯೇ ಹಾಳಾಗಿ ಹೋಗುತ್ತದೆ. ಯಾಕಂದ್ರೆ ಊರ ಮಂದಿಯ ಅವಹೇಳನ ಮಾಡುವ ಪತಿ, ಬೇರೆಯವರ ಎದುರು, ತನ್ನ ಪತ್ನಿಯನ್ನು ಅವಹೇಳನ ಮಾಡಿಯೇ ಮಾಡುತ್ತಾನೆ.
ಮೂರನೇಯದಾಗಿ ಕ್ರೋಧಿತ ವ್ಯಕ್ತಿ ಎಂದಿಗೂ ತನ್ನ ಪತ್ನಿಯನ್ನು ಖುಷಿಯಾಗಿರಿಸುವುದಿಲ್ಲ. ಮಾತು ಮಾತಿಗೂ ಸಿಟ್ಟು ಮಾಡುವ ಪತಿಯೊಂದಿಗೆ, ಪತ್ನಿ ಎಂದಿಗೂ ಖುಷಿಯಾಗಿ ಬದುಕಲಾಗುವುದಿಲ್ಲ. ಆಕೆಯ ನೆಮ್ಮದಿಯೇ ಹಾಳಾಗಿ ಹೋಗುತ್ತದೆ. ಯಾಕಾದರೂ ವಿವಾಹವಾದೇನೋ ಎಂಬಷ್ಟು ಆಕೆ ಕೊರಗುತ್ತಾಳೆ. ಅಲ್ಲದೇ ಆತ ಸಿಟ್ಟಲ್ಲಿ ಪತ್ನಿಯ ಮನೆ ಜನರನ್ನು ಹೀಯಾಳಿಸುತ್ತಾನೋ, ಅಥವಾ ಬೈಯ್ಯುತ್ತಾನೋ, ಅಂಥವನಿಂದ ಪತ್ನಿ ಸುಖದಿಂದಿರಲು ಸಾಧ್ಯವೇ ಇಲ್ಲ. ಇನ್ನು ಮಧ್ಯಪಾನ ಮಾಡುವುದು, ಪತ್ನಿಯ ಮೇಲೆ ಹಲ್ಲೆ ಮಾಡುವುದೆಲ್ಲ ಮಾಡುವ ಪತಿಯಿಂದ ಪತ್ನಿ ದೂರವಿರುವುದೇ ಉತ್ತಮ.