ಹಿಂದೂಗಳು ಅಕ್ಷಯ ತೃತೀಯವನ್ನ ಭರ್ಜರಿಯಾಗಿ ಆಚರಿಸದಿದ್ದರೂ ಕೂಡ, ಏನನ್ನಾದರೂ ಖರೀದಿಸುವ ಮೂಲಕ, ಹಬ್ಬ ಆಚರಿಸುತ್ತಾರೆ. ಈ ದಿನ ಪವಿತ್ರವಾದ ದಿನವಾಗಿದ್ದು, ಚಿನ್ನ, ಬೆಳ್ಳಿ, ಅರಿಶಿನ, ಕುಂಕುಮ, ಪುಸ್ತಕ, ಪೆನ್ನು, ದಿನಸಿ ಖರೀದಿಸುವ ಕ್ರಮವಿದೆ. ಅಲ್ಲದೇ, ದಾನ ಮಾಡುವುದರಿಂದಲೂ, ದಾನ ಮಾಡುವ ಯೋಗ್ಯತೆ ಅಕ್ಷಯವಾಗುತ್ತದೆ ಅನ್ನೋ ನಂಬಿಕೆ ಇದೆ.
ಇನ್ನು ಅಕ್ಷಯ ತೃತೀಯದ ದಿನ ಹಲವು ಘಟನೆಗಳು ನಡೆದಿದೆ ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪಿತಾಮಹನೆಂದು ಕರೆಯಲ್ಪಡುವ ಪರಶುರಾಮ ಜನ್ಮ ತಾಳಿದ್ದು ಇದೇ ದಿನ ಎಂದು ಹೇಳಲಾಗುತ್ತದೆ. ಮಹಾವಿಷ್ಣು ಅಕ್ಷಯ ತೃತೀಯದಂದೇ, ಪರಶುರಾಮನ ರೂಪ ತಾಳಿದ್ದು ಎಂದು ಹೇಳಲಾಗಿದೆ.
ಅಲ್ಲದೇ ಭೂಮಿಗೆ ಬರಲು ಒಪ್ಪದ ಗಂಗೆಯನ್ನು, ಶಿವನ ಮೂಲಕ ಭಗೀರಥರು ಭೂಮಿಗೆ ಬರಮಾಡಿಕೊಂಡಿದ್ದು ಕೂಡ ಅಕ್ಷಯ ತೃತೀಯದ ದಿನ ಎಂದು ಹೇಳಲಾಗಿದೆ. ಶಂಕರನ ಪ್ರಾಣ ಉಳಿಸಲು ಪಾರ್ವತಿ ಅನ್ನಪೂರ್ಣೆಯ ರೂಪ ತಾಳಿದ್ದು ಕೂಡ ಇದೇ ದಿನ ಎಂಬ ನಂಬಿಕೆ ಇದೆ. ಹಾಗಾಗಿಯೇ ಈ ದಿನ ಅಕ್ಕಿಯನ್ನು ಮನೆಗೆ ತರಬೇಕು, ಅನ್ನವನ್ನು ದಾನ ಮಾಡಬೇಕು ಎಂದು ಹೇಳಲಾಗುತ್ತದೆ. ಅಕ್ಷಯ ತೃತೀಯದಂದೇ ವೇದವ್ಯಾಸರು ಮಹಾಭಾರತ ಬರೆಯಲು ಪ್ರಾರಂಭಿಸಿದ್ದರಂತೆ. ಹಾಗಾಗಿ ಹಿಂದೂಗಳಿಗೆ ಅಕ್ಷಯ ತೃತೀಯ ಪವಿತ್ರವಾದ ದಿನವಾಗಿದೆ.
ಅಕ್ಷಯ ತೃತೀಯಾಗೆ ಚಿನ್ನ ತೆಗೆದುಕೊಳ್ಳದಿದ್ದರೂ ಇದನ್ನು ಖಂಡಿತ ಖರೀದಿಸಿ..
ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?




