ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಖದರ್ ತೋರಿಸುತ್ತಿರೋ ಟಿಕ್ ಟಾಕ್ ರಾಜ್ಯದ ಓರ್ವ ಯುವಕನನ್ನು ಬಲಿ ಪಡೆದಿದೆ. ಟಿಕ್ ಟಾಕ್ ಮಾಡುವಾಗ ತೀವ್ರ ಗಾಯಗೊಂಡಿದ್ದ ಯುವಕ ಇದೀಗ ದುರಂತ ಅಂತ್ಯ ಕಂಡಿದ್ದಾನೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೌಡಕೆರೆ ನಿವಾಸಿ ಕುಮಾರ್ ಇದೀಗ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಕುಮಾರ್ ಕಳೆದ ಶನಿವಾರ ಟಿಕ್ ಟಾಕ್ ನಲ್ಲಿ ಸ್ಟಂಟ್ ಮಾಡುವ ವೇಳೆ ನೆಲಕ್ಕೆ ಕುತ್ತಿಗೆಯ ಭಾಗ ಬಡಿದಿತ್ತು. ಇದರಿಂದ ಕುಮಾರ್ ನ ಕತ್ತಿನ ಮೂಳೆ ಮತ್ತು ಬೆನ್ನುಹುರಿಗೆ ತೀವ್ರ ಪೆಟ್ಟು ಬಿದ್ದಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಮಾರ್ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಟಿಕ್ ಟಾಕ್ ಮಾಡೋ ಮೂಲಕ ಸಾಕಷ್ಟು ಜನರು ತಮ್ಮ ಪ್ರತಿಭೆ ಪದರ್ಶಿಸಿ ಕ್ಲಿಕ್ ಆಗಿದ್ದುಂಟು. ಆದ್ರೆ ಇಂಥಾ ಅಪಾಯಕಾರಿ ಸ್ಟಂಟ್ ಮಾಡುವಾಗ ಎಚ್ಚರದಿಂದರಬೇಕು ಅನ್ನೋದಕ್ಕೆ ಕುಮಾರ್ ಪ್ರಕರಣ ಸಾಕ್ಷಿಯಾಗಿದೆ.
ಇನ್ಮುಂದೆ ಎಲ್ಲಾ ಇಂಟರ್ ನೆಟ್ ದುಬಾರಿಯಾಗಲಿದೆ…! ಮಿಸ್ ಮಾಡದೇ ಈ ವಿಡಿಯೋ ನೋಡಿ