ಬೆಳಿಗ್ಗೆ ಲೇಟಾಗಿ ಎದ್ದಾಗ, ಅಥವಾ ರಾತ್ರಿ ಏನಾದ್ರೂ ಸ್ಪೆಶಲ್ ಮಾಡಬೇಕು ಎನ್ನಿಸಿದಾಗ, ನೀವು ಇನಸ್ಟಂಟ್ ದೋಸೆಯನ್ನ ಸರಳವಾಗಿ ಮಾಡಬಹುದು. ಹಾಗಂತ ನಾವಿಂದು ಹೇಳುವ ರೆಸಿಪಿಗೆ ನೀವು ಹಲವು ಹಿಟ್ಟುಗಳನ್ನ ಕದಡಿ ದೋಸೆ ಮಾಡೋದಲ್ಲ. ಬದಲಾಗಿ ರುಬ್ಬಿದ ಹಿಟ್ಟಿಂದಲೇ, ಮೃದುವಾಗ, ರುಚಿಯಾದ ದೋಸೆ ಮಾಡಬಹುದು. ಹಾಗಾದ್ರೆ ಇನಸ್ಟಂಟ್ ದೋಸೆ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಚಪಾತಿ, ದೋಸೆಗೆ ಗುಡ್ ಕಾಂಬಿನೇಷನ್ ಈ ಪಪ್ಪಾಯಿ ಜ್ಯಾಮ್..
ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಕಪ್ ರವಾ, ಅರ್ಧ ಕಪ್ ಅವಲಕ್ಕಿ, ಎರಡು ಸ್ಪೂನ್ ಮೊಸರು, ಉಪ್ಪು. ಇವಿಷ್ಟು ದೋಸೆಗೆ ಬೇಕಾದ ಸಾಮಗ್ರಿ.
ಮಾಡುವ ವಿಧಾನ: ಮೊದಲು ಕಡಿಮೆ ನೀರು ಹಾಕಿ, ರವೆಯನ್ನು 5 ನಿಮಿಷ ನೆನೆಸಿಡಿ. ಅವಲಕ್ಕಿಯನ್ನು 3 ನಿಮಿಷ ನೆನೆಸಿಡಿ. ನಂತರ ಅವಲಕ್ಕಿ ಮತ್ತು ರವೆ ಮತ್ತು ಮೊಸರನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹೆಚ್ಚು ನೀರು ಹಾಕಬೇಡಿ. ಇದಕ್ಕೆ ಅವಶ್ಯಕತೆಗೆ ತಕ್ಕಷ್ಟು ಉಪ್ಪು ಹಾಕಿದ್ರೆ, ದೋಸೆ ಹಿಟ್ಟು ರೆಡಿ.
ಉತ್ತರ ಭಾರತದ ಸ್ನ್ಯಾಕ್ಸ್ ಮೇಥಿ ಮಟರಿ ರೆಸಿಪಿ..
ಕಾವಲಿಯನ್ನು ಚೆನ್ನಾಗಿ ಕಾಯಿಸಿ, ದಪ್ಪಗೆ ದೋಸೆ ಹೊಯ್ಯಬೇಕು. ನಂತರ ಮಂದ ಉರಿಯಲ್ಲಿ ಕಾಯಿಸಬೇಕು. ಹೀಗೆ ಮಾಡಿದಾಗ, ದೋಸೆ ರುಚಿಯಾಗಿರುತ್ತದೆ.