Health Tips: ನಾವು ತೂಕ ಇಳಿಸಲು ನಾನಾ ಕಸರತ್ತು ಮಾಡುತ್ತೇವೆ. ಯೋಗ, ವ್ಯಾಯಾಮ, ವಾಕಿಂಗ್, ಜಾಗಿಂಗ್, ಜಿಮ್, ಜುಂಬಾ ಡಾನ್ಸ್, ಏರೋಬಿಕ್ಸ್ ಹೀಗೆ ನಾನಾ ರೀತಿಯಲ್ಲಿ ದೇಹವನ್ನು ದಂಡಿಸುತ್ತೇವೆ. ಅದು ಕೂಡ ದುಡ್ಡು ಕೊಟ್ಟು. ಆದರೆ ನೀವು ಜಿಮ್‌ಗೆ ಹೋಗುವ ಬದಲು ಈ ರೀತಿ ಮಾಡಿ ಅಂತಾ ವೈದ್ಯರು ಸಲಹೆ ಕೊಟ್ಟಿದ್ದಾರೆ. ಹಾಗಾದರೆ ಫಿಟ್ ಆಗಿರಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ಜಿಮ್ ಬದಲು ವಾಕಿಂಗ್ ಮಾಡಿದರೆ, ನಾವು ಆರೋಗ್ಯವಾಗಿ, ಫಿಟ್ ಆಗಿ ಇರುತ್ತೇವೆ. ಡಾ.ಸಿದ್ಧಾರ್ಥ ಗೋಸಾವಿ ಈ ಬಗ್ಗೆ ವಿವರಿಸಿದ್ದು, ಎತ್ತರ ತಗ್ಗು ಪ್ರದೇಶದಲ್ಲಿ, ಬೆಟ್ಟ ಗುಡ್ಡಗಳಿರುವಂಥ ಪ್ರದೇಶದಲ್ಲಿ ವಾಕಿಂಗ್ ಮಾಡುವುದನ್ನು ಅವೈಡ್ ಮಾಡಬೇಕು. ನೇರ ರಸ್ತೆಯಲ್ಲಿ ವಾಕಿಂಗ್ ಮಾಡಬೇಕು. ಆಗ ದೇಹಕ್ಕೆ ಒಳ್ಳೆಯ ವ್ಯಾಯಾಮ ಸಿಗುತ್ತದೆ ಎಂದಿದ್ದಾರೆ.
ಇನ್ನು ವಾಕಿಂಗ್ ಅಂದ್ರೆ ಹೇಗೇಗೋ ವಾಕಿಂಗ್ ಮಾಡುವುದಲ್ಲ. ದೇಹಕ್ಕೆ ಹಗುರವಾಗುವಂಥ ಕಾಟನ್ ಬಟ್ಟೆ ಇರಬೇಕು. ನೀವು ನಿಮ್ಮ ದೇಹಕ್ಕೆ ಕಂಫರ್ಟ್ ಆಗದ, ಟೈಟ್ ಬಟ್ಟೆ ಧರಿಸಿ ವಾಕ್ ಮಾಡಿದರೆ, ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಶೂಟ್ ಧರಿಸದಿದ್ದರೂ, ನಡೆಯಲು ಅನುಕೂಲವಾಗುವ ಚಪ್ಪಲಿ ಧರಿಸಿ, ಹೀಲ್ಸ್ ಧರಿಸಿ, ವಾಕ್ ಮಾಡುವವರೂ ಇದ್ದಾರೆ. ಅಂಥವರಿಗೆಲ್ಲ ಇಂಥ ಸಲಹೆಗಳು ಮುಖ್ಯವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..