Spiritual: ಪ್ರಪಂಚದಲ್ಲಿ ಸಿಗುವ ಎಲ್ಲ ಸಿಹಿ ತಿಂಡಿಗಳ ರುಚಿ ಒಂದೆಡೆಯಾದರೆ, ತಿರುಪತಿ ಲಡ್ಡು ಪ್ರಸಾದದ ರುಚಿ ಒಂದೆಡೆ. ಆ ಅದ್ಭುತ ರುಚಿಯನ್ನು ಯಾವ ಸಿಹಿ ತಿಂಡಿಯೂ ಮೀರಿಸಲು ಸಾಧ್ಯವಿಲ್ಲ. ತುಪ್ಪ, ಗೋಡಂಬಿ, ದ್ರಾಕ್ಷಿ ಎಲ್ಲವನ್ನೂ ಹಾಕಿ, ಮಾಡುವ ರುಚಿ ರುಚಿಯಾದ ಲಡ್ಡು ಪ್ರಸಾದದ ಬಗ್ಗೆ ನಾವು ಇಂದು ಒಂದಿಷ್ಟು ಕುತೂಹಲಕಾರಿ ಸಂಗತಿಯನ್ನ ಹೇಳಲಿದ್ದೇವೆ.
ತಿರುಪತಿ ಲಾಡುವಿಗೆ ಮೂನ್ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ತಿಮ್ಮಪ್ಪನಿಗೆ ನೈವೇದ್ಯ ಮಾಡಲು ತಯಾರಾಗುವ ಲಾಡುವನ್ನು ಪೋತು ಪಾಕಶಾಲೆಯಲ್ಲಿ ತಯಾರಿಸಲಾಗುತ್ತದೆ. ಇದನ್ನು ತಯಾರಿಸಲು ಸಪರೇಟ್ ಆಗಿ ಅರ್ಚಕರಿದ್ದಾರೆ. ಅವರೇ ಈ ಲಾಡು ಪ್ರಸಾದವನ್ನು ತಯಾರಿಸುತ್ತಾರೆ. ಈ ಲಾಡು ಪ್ರಸಾದವನ್ನು ಹಂಚುವುದರ ಜೊತೆಗೆ, ಎಕ್‌ಸ್ಟ್ರಾ ಬೇಕಾದರೆ, ಮಾರಲಾಗುತ್ತದೆ. ಹೀಗೆ ಬರೀ ಲಾಡುವನ್ನೇ ಮಾರಿ, ದೇವಸ್ಥಾನ ಕೋಟಿ ಕೋಟಿ ಆದಾಯ ಗಳಿಸುತ್ತದೆ.
ಆಗಸ್ಟ್ 2, 1715ರಲ್ಲಿ ಈ ಲಾಡುವನ್ನು ಹಂಚಲು ಶುರು ಮಾಡಲಾಗಿತ್ತು. 1999ರಲ್ಲಿ ಇದರ ರೆಸಿಪಿ ಯಾರೂ ಉಪಯೋಗಿಸಬಾರದು ಎಂದು ಪೇಟೆಂಟ್ ಖರೀದಿಸಲಾಯಿತು. ತಿರುಪತಿಯಲ್ಲಿ ಪ್ರತಿದಿನ 30 ಸಾವಿರಕ್ಕೂ ಹೆಚ್ಚು ಲಾಡು ಮಾಡಲಾಗುತ್ತದೆ. ಇದಕ್ಕೆ 10 ಟನ್ ಕಡಲೆ ಹಿಟ್ಟು, 10 ಟನ್ ಸಕ್ಕರೆ, 700 ಕೆಜಿ ಗೋಡಂಬಿ, 150 ಕೆಜಿ ಏಲಕ್ಕಿ, 300ರಿಂದ 500 ಲೀಟರ್ ತುಪ್ಪ, 500 ಕೆಜಿ ಕಲ್ಲುಸಕ್ಕರೆ, 540 ಕೆಜಿ ಒಣದ್ರಾಕ್ಷಿ ಮತ್ತು ಕೇಸರಿ ದಳಗಳನ್ನು ಬಳಸಲಾಗುತ್ತದೆ.
ಲಾಡು ಪ್ರಸಾದವನ್ನು ಹಂಚಲು 29ಕ್ಕೂ ಹೆಚ್ಚು ಲಾಡು ಕೌಂಟರ್‌ಗಳಿದೆ. ಲಾಡು ತಯಾರಿಸಲು ಅರ್ಚಕರೊಂದಿಗೆ, 300ಕ್ಕೂ ಹೆಚ್ಚು ಜನ ಸಹಾಯಕರಿರುತ್ತಾರೆ. ತಿರುಪತಿ ಲಾಡುವನ್ನು ಎಷ್ಟು ಅಚ್ಚುಕಟ್ಟಾಗಿ ಮಾಡಲಾಗುತ್ತದೆ ಎಂದರೆ, ನೀವು 15ರಿಂದ 20 ದಿನ ಹಾಗೆ ಇಟ್ಟರೂ, ಅದು ಕೆಡುವುದಿಲ್ಲ.
ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ