Tuesday, October 15, 2024

Latest Posts

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ಪ್ರಕರಣಕ್ಕೆ ತಡೆ- ಭಾರತಕ್ಕೆ ರಾಜತಾಂತ್ರಿಕ ಗೆಲುವು- ಪಾಕ್ ಗೆ ತೀವ್ರ ಮುಖಭಂಗ..!

- Advertisement -

ನೆದರ್ಲೆಂಡ್: ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಪಾಕ್ ವಿರುದ್ಧ ಭಾರತ ರಾಜತಾಂತ್ರಿಕ ಗೆಲುವು ಸಾಧಿಸಿದೆ.

ನೆದರ್ಲೆಂಡ್ ನಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಮರಣದಂಡನೆ ಕುರಿತು ಪಾಕಿಸ್ತಾನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಅಂತಾರಾಷ್ಟ್ರೀಯ ನ್ಯಾಯಾಲಯದ ಒಟ್ಟು 16 ಮಂದಿ ನ್ಯಾಯಾಧೀಶರಲ್ಲಿ 15 ಮಂದಿ ನ್ಯಾಯಾಧೀಶರು ಭಾರತದ ಪರ ತಮ್ಮ ವಾದ ಮಂಡಿಸಿದ್ರು. ಹೀಗಾಗಿ ಐಸಿಜೆ ಭಾರತ ಮೂಲದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಮರಣದಂಡನೆಗೆ ತಡೆ ನೀಡಿ ಆದೇಶ ಹೊರಡಿಸಿದ್ದಾರೆ.

ಇನ್ನು 2016 ಮಾರ್ಚ್ ನಲ್ಲಿ ಕುಲಭೂಷಣ್ ಜಾಧವ್ ಇರಾನ್ ನ ಬಲೂಚಿಸ್ತಾನ ಪ್ರದೇಶಕ್ಕೆ ತೆರಳಿದ್ದಾಗ ಬೇಹುಗಾರಿಕೆ ಮತ್ತು ವಿಧ್ವಂಸಕ ಕೃತ್ಯ ನಡೆಸಲು ಬಂದಿದ್ದರು ಎಂಬ ಆರೋಪದಡಿ ಪಾಕಿಸ್ತಾನ ಅವರನ್ನು ಬಂಧಿಸಿತ್ತು. ಅಲ್ಲದೆ 2017 ಏಪ್ರಿಲ್ ನಲ್ಲಿ ಜಾಧವ್ ರಿಗೆ ಪಾಕ್ ಮರಣದಂಡನೆ ಶಿಕ್ಷೆ ಕೂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಕ್ಕೆ ಮೇ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ವಿಚಾರಣೆ ನಡೆಸಿರುವ ಐಸಿಜೆ, ಪಾಕಿಸ್ತಾನ ತನ್ನ ತೀರ್ಪಿನ ಮರು ವಿಚಾರಣೆ ನಡೆಸುವಂತೆ ಆದೇಶ ನೀಡಿದ್ದಾರೆ. ಪಾಕಿಸ್ತಾನದ ಎಲ್ಲಾ ಆಕ್ಷೇಪಗಳನ್ನು ತಿರಸ್ಕರಿಸಿ, ಭಾರತದ ವಾದವನ್ನು ಪುರಸ್ಕರಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದೆ.

ವಿಜಯ್ ಮಲ್ಯ ಬಂಧಿಸಿದ ಕ್ರಿಸ್ ಗೇಲ್..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=NWhCPCRywH4
- Advertisement -

Latest Posts

Don't Miss