Health Tips: ಕೆಲವರಿಗೆ ನೀವು ಮದ್ಯಪಾನ ಸೇವನೆ ಮಾಡ್ತೀರಾ ಅಂತಾ ಕೇಳಿದರೆ, ಇಲ್ಲಾ ನಾನು ಬಿಯರ್ ಅಷ್ಟೇ ಕುಡಿಯುತ್ತೇನೆ. ಅದೇನು ಆರೋಗ್ಯಕ್ಕೆ ಅಷ್ಟು ಕೆಟ್ಟದಲ್ಲಾ ಅಂತಾ ಹೇಳ್ತಾರೆ. ಇನ್ನು ಕೆಲ ಸೆಲೆಬ್ರಿಟಿಗಳು ಜ್ಯೂಸ್ ಕುಡಿದ ಹಾಗೆ ಬಿಯರ್ ಕುಡಿಯುತ್ತಾರೆ. ಅದರಿಂದಲೇ ಅವರ ತೂಕ ಅಷ್ಟು ಹೆಚ್ಚಾಗೋದು. ಹಾಗಾದ್ರೆ ಬಿಯರ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ವೈದ್ಯರು ಹೇಳುವ ಪ್ರಕಾರ, ಬಿಯರ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದಷ್ಟು ಬಿಯರ್ ಕುಡಿಯುವುದನ್ನು ತಪ್ಪಿಸಬೇಕು. ಕೆಲವರು ಬಿಯರ್ ಕುಡಿಯುವುದರಿಂದ ಕಿಡ್ನಿಸ್ಟೋನ್ ಕಡಿಮೆಯಾಗುತ್ತದೆ ಅಂತಾರೆ. ಆದರೆ ಕಿಡ್ನಿ ಸ್ಟೋನ್ ಆಗಬಾರದು ಅಂದ್ರೆ, ಬಿಯರ್ ಬದಲು ನಾವು ಆದಷ್ಟು ನೀರು ಕುಡಿಯಬಹುದು. ಬಿಯರ್ ಕುಡಿಯಲೇಬೇಕು ಅಂತಿಲ್ಲ ಎನ್ನುತ್ತಾರೆ ವೈದ್ಯರು.
ಅಲ್ಲದೇ, ಬಿಯರ್ ಕುಡಿಯುತ್ತಿದ್ದರೆ, ಅದೇ ಚಟವಾಗಬಹುದು. ಬಿಯರ್ ಹೆಚ್ಚು ಕುಡಿಯುವುದರಿಂದ, ಆರೋಗ್ಯಕ್ಕೆ ಹಾನಿಯುಂಟಾಗಬಹುದು. ಮದ್ಯಪಾನ ಸೇವಿಸಿದರೆ, ಹೇಗೆ ದೇಹದಲ್ಲಿ ಡ್ಯಾಮೇಜ್ ಆಗುತ್ತದೆಯೇ, ಅದೇ ರೀತಿ ಬಿಯರ್ ಸೇವನೆ ಮಾಡುವುದರಿಂದ ನಿಮ್ಮ ದೇಹದ ಯಾವುದೇ ಭಾಗಕ್ಕೂ ತೊಂದರೆಯಾಗಬಹುದು. ಹಾಗಾಗಿ ಹೆಚ್ಚು ಬಿಯರ್ ಸೇವನೆ ಉತ್ತಮವಲ್ಲ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

