ಕಾಫಿ ಅಂದ್ರೆ ಹಲವರಿಗೆ ಪ್ರತಿದಿನ ಬೇಕೇ ಬೇಕು ಎನ್ನುವ ಪೇಯ. ಚಾ ಇಲ್ಲದಿದ್ದರೇ, ಆ ದಿನ ದಿನವೇ ಅಲ್ಲ ಅನ್ನುವವರ ರೀತಿ, ಕಾಫಿ ಕುಡಿಯದಿದ್ದರೆ, ಏನೋ ಮಿಸ್ ಆಗುತ್ತಿದೆ. ತಲೆ ನೋವು ಬರುವ ಅನುಭವವಾಗುತ್ತಿದೆ ಎಂಬ ಭ್ರಮೆಯಲ್ಲಿರುವವರೇ ಹೆಚ್ಚು. ಕಾಫಿ ಉಷ್ಣವಾದ ಪೇಯ. ಹಾಗಾಗಿ ಪ್ರತಿದಿನ ನಿಮಗೆ ಕಾಫಿ ಕುಡಯಲೇಬೇಕು ಎಂದರೆ, ಒಂದು ಹೊತ್ತಷ್ಟೇ ಮಿತಿಯಲ್ಲಿ ಕಾಫಿ ಕುಡಿಯಿರಿ.
ಕಾಫಿಯನ್ನ ಯಾಕೆ ಮಿತಿಯಲ್ಲಿ ಕುಡಿಯಬೇಕು ಅಂದ್ರೆ, ಇದು ಔಷಧಿಯ ರೀತಿ ಕಾರ್ಯನಿರ್ವಹಿಸುತ್ತದೆ. ಹೆಚ್ಚು ಕಾಫಿ ಕುಡಿದರೆ, ನಿಮ್ಮ ಆರೋಗ್ಯವೇ ಹಾಳಾಗಿ ಹೋಗುತ್ತದೆ. ಹಾಗಾದ್ರೆ ಕಾಫಿ ಕುಡಿಯುವುದು ಕೆಟ್ಟದ್ದಾ..? ಒಳ್ಳೆಯದಾ..? ಕಾಫಿ ಸೇವನೆಯಿಂದ ಆಗುವ ಲಾಭ ಮತ್ತು ನಷ್ಟವೇನು..? ಅಂತಾ ತಿಳಿಯೋಣ ಬನ್ನಿ..
ನೀವು ಮನೆಗೆಲಸ ಮುಗಿಸಿ, ಆಫೀಸಿಗೆ ಹೋಗುವವರಾಗಿದ್ದರೆ, ನೀವು ದಿನಕ್ಕೆ ಒಮ್ಮೆ ಕಾಫಿ ಕುಡಿಯಬಹುದು. ಯಾಕಂದ್ರೆ ಕಾಫಿ ಸೇವನೆಯಿಂದ ನೀವು ಚೈತನ್ಯದಾಯಕವಾಗಿರುತ್ತೀರಿ. ಆದರೆ ಕಾಫಿ ಸೇವನೆ ಅತೀಯಾದಾಗ, ನಿಮಗೆ ನಿದ್ರಾಹೀನತೆ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ.
ಅಲ್ಲದೇ ಕಾಫಿ ಉಷ್ಣ ಪದಾರ್ಥವಾಗಿರುವುದರಿಂದ, ನಿಮಗೆ ಬಿಪಿ ಬರುವ ಸಾಧ್ಯತೆ ಹೆಚ್ಚಿದೆ. ಹೃದಯ ಸಮಸ್ಯೆ ಇದ್ದವರಂತೂ ಕಾಫಿ ಕುಡಿಯುವುದನ್ನ ನಿಲ್ಲಿಸಿಯೇ ಬಿಡಿ. ಇನ್ನು ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ, ಅವರಿಗೆ ಚಹ ಕಾಫಿ ಕುಡಿಯಲು ಕೊಡಬೇಡಿ. ಇದರಿಂದ ಅವರ ಬೆಳವಣಿಗೆಯಲ್ಲಿ ಕುಂಠಿತವಾಗುವ ಸಾಧ್ಯತೆ ಇರುತ್ತದೆ.
ಕಾಫಿಯಲ್ಲಿ ಕೆಫಿನ್ ಇದೆ. ಇದು ಕಾಫಿಯ ಚಟ ಹತ್ತಿಸಲು ಕಾರಣವಾಗುತ್ತದೆ. ಹಾಗಾಗಿಯೇ ಕೆಲವರು ಕಾಫಿಯನ್ನ ಅವೈಡ್ ಮಾಡೋಕ್ಕೆ ಇಷ್ಟಪಡಲ್ಲ. ಆದರೆ ನೀವೇನಾದರೂ ಗರ್ಭಿಣಿಯಾಗಿದ್ದಲ್ಲಿ, ಯಾವುದೇ ಕಾರಣಕ್ಕೂ ಕಾಫಿ ಸೇವನೆ ಮಾಡಲೇಬೇಡಿ. ಇದರಿಂದ ನಿಮ್ಮ ಶಿಶುವಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಇನ್ನು ಯಾವಾಗ ಕಾಫಿ ಸೇವನೆ ಮಾಡಬಹುದು ಎಂದರೆ, ಸಿಕ್ಕಾಪಟ್ಟೆ ಚಳಿಯ ವಾತಾವರಣದಲ್ಲಿ ನೀವು ಜೀವಿಸುತ್ತಿದ್ದೀರಿ ಎಂದಾದಲ್‌ಲಿ ನೀವು ಕಾಫಿ ಸೇವನೆ ಮಾಡಬಹುದು. ಬಿಪಿ ಲೋ ಆದಾಗ, ಕಾಫಿ ಸೇವನೆ ಮಾಡಬಹುದು. ನಿಮ್ಮ ದೇಹದಲ್ಲಿ ರಕ್ತ ಸಂಚಾರವಾಗುತ್ತಿಲ್ಲವೆಂದು ನಿಮಗೆ ಅನ್ನಿಸಿದ್ದಲ್ಲಿ, ನೀವು ಕಾಫಿ ಸೇವನೆ ಮಾಡಬಹುದು.
ಪ್ರತಿದಿನ ಕೊಂಚ ಕುಂಬಳಕಾಯಿ ಬೀಜ ಸೇವಿಸಿ, ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಿ