ಇಂದಿನ ಬ್ಯುಸಿ ಶೆಡ್ಯೂಲ್‌ನಲ್ಲಿ ಜನ ತೂಕ ಇಳಿಸಿಕೊಳ್ಳೋಕ್ಕೆ ಹೆಚ್ಚು ಹರಸಾಹಸ ಪಡುತ್ತಿದ್ದಾರೆ. ತೂಕ ಹೆಚ್ಚಿಸಿಕೊಳ್ಳುವವರು 20 ಪರ್ಸೆಂಟ್ ಇದ್ರೆ, ತೂಕ ಇಳಿಸಿಕೊಳ್ಳೋಕ್ಕೆ ಬಯಸುವವರು 80 ಪರ್ಸೆಂಟ್ ಜನರಿದ್ದಾರೆ. ಹೀಗಾಗಿ ಯಾವುದೇ ಆಹಾರ ತಿಂದ್ರೂ, ಅದನ್ನ ತಿಂದ್ರೆ ದಪ್ಪ ಆಗಲ್ಲ ತಾನೇ ಅನ್ನೋದೇ ಅವರ ತಲೆಯಲ್ಲಿ ಬರೋ, ಮೊದಲ ಯೋಚನೆಯಾಗಿರತ್ತೆ. ಹಾಗಾಗಿ ಇಂದು ನಾವು ಹಾಲು ಕುಡಿದ್ರೆ, ದಪ್ಪ ಆಗ್ತಾರಾ ಇಲ್ವಾ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಹಾಲಲ್ಲಿ ಹಲವು ವಿಧಗಳಿದೆ. ದನದ ಹಾಲು, ಎಮ್ಮೆ ಹಾಲು, ಆಡಿನ ಹಾಲು, ಒಂಟೆ ಹಾಲು. ನೀವು ಯಾವ ಹಾಲು ಕುಡಿಯುತ್ತೀರಿ ಅನ್ನೋದರ ಮೇಲೆ, ನಿಮ್ಮ ತೂಕ ಹೆಚ್ಚುವುದು ಅವಲಂಬಿತವಾಗಿರುತ್ತದೆ. ಎಮ್ಮೆಯ ಹಾಲು, ಬೆಣ್ಣೆ ಮತ್ತು ತುಪ್ಪದಲ್ಲಿ ಹೆಚ್ಚಿನ ಫ್ಯಾಟ್ ಇರುತ್ತದೆ. ಈ ಆಹಾರವನ್ನು ನೀವು ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಳವಾಗುತ್ತದೆ.
ಇನ್ನು ನೀವು ಯಾವುದೇ ಹಾಲು ಕುಡಿದರೂ, ಅದಕ್ಕೆ ಸಕ್ಕರೆ ಸೇರಿಸಿ ಕುಡಿದರೆ, ನಿಮ್ಮ ತೂಕ ಹೆಚ್ಚಳವಾಗೇ ಆಗುತ್ತದೆ. ಯಾಕಂದ್ರೆ ಕೆಲವರಿಗೆ ಹಾಲಿಗೆ ಸಕ್ಕರೆ ಹಾಕದೇ ಕುಡಿಯಲು ಸಾಧ್ಯವಾಗೋದಿಲ್ಲಾ. ಹಾಗಾಗಿ ಸಕ್ಕರೆ, ಬೆಲ್ಲ, ಅಥವಾ ಬೇರೆ ಪುಡಿ ಸೇರಿಸಿ ಕುಡಿಯುತ್ತಾರೆ. ಇದರಿಂದ ತೂಕ ಹೆಚ್ಚಳವಾಗುತ್ತದೆ. ನಿಮ್ಮ ತೂಕ ಹೆಚ್ಚಳವಾಗುವ ಭಯ ನಿಮ್ಮಲ್ಲಿದ್ದಲ್ಲಿ, ಹಾಲು ಕುಡಿಯುವಾಗ, ಸಕ್ಕರೆ ಬಳಸಬೇಡಿ. ಕೆನೆ ಇರದೇ ಕುಡಿಯಿರಿ. ಅಲ್ಲದೇ ಮಾರುಕಟ್ಟೆಯಲ್ಲಿ ಫ್ಯಾಟ್ ಇಲ್ಲದ ಹಾಲು ಸಿಗುತ್ತದೆ. ಅಂಥ ಹಾಲು ಕುಡಿಯುವುದರಿಂದ ನಿಮ್ಮ ದೇಹದ ತೂಕ ಹೆಚ್ಚಳವಾಗುವುದಿಲ್ಲ.