ನೀರು ಕುಡಿಯುವ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಟಿಪ್ಸ್ ಕೊಟ್ಟಿದ್ದೇವೆ. ನೀರು ಕುಡಿಯಲು ಕೂಡ ಹಲವಾರು ಪದ್ಧತಿಗಳಿದೆ. ಆ ಪ್ರಕಾರ ನಾವು ನೀರು ಕುಡಿದರೆ, ನಮ್ಮ ಆರೋಗ್ಯ ಚೆನ್ನಾಗಿರುತ್ತೆ. ನಾವಿಂದು ನೀರು ಕುಡಿಯುವಾಗ ಯಾವ ಟಿಪ್ಸ್ ಫಾಲೋ ಮಾಡಬೇಕು..? ಯಾವ ಸಮಯದಲ್ಲಿ ನೀರು ಕುಡಿಯಬೇಕು..? ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆದಾ..? ಕೆಟ್ಟದ್ದಾ..? ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ..
ರಾತ್ರಿ ಮಲಗುವ ಮುನ್ನ ಮತ್ತು ಮಧ್ಯರಾತ್ರಿ ಎಚ್ಚರವಾದಾಗ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮವಲ್ಲ. ಇದರಿಂದ ನಮ್ಮ ದೇಹದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಮತ್ತು ರಾತ್ರಿ ಮಲಗುವ ಮುನ್ನ ನಾವು ನೀರು ಕುಡಿದರೆ, ಅದು ನಮ್‌ಮ ರಕ್ತನಾಳಗಳಿಗೆ ಸರಿಯಾಗಿ ತಲುಪುವುದಿಲ್ಲ. ಆಗ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ರಕ್ತ ಸಂಚಾರ ಸರಿಯಾಗಿ ಆಗದಿದ್ದಲ್ಲಿ, ಹೃದಯದ ಸಮಸ್ಯೆ ಬರುತ್ತದೆ. ಹಾಗಾಗಿ ರಾತ್ರಿ ಮಲಗುವ ಮುನ್ನ ನೀರು ಕುಡಿಯಬಾರದು. ನಿಮಗೆ ಸಿಕ್ಕಾಪಟ್ಟೆ ಬಾಯಾರಿಕೆಯಾಗುತ್ತಿದೆ ಎಂದಲ್‌ಲಿ ಮಾತ್ರ, ಕೊಂಚ ನೀರು ಕುಡಿಯಿರಿ. ಆದರೆ ಹೊಟ್ಟೆ ತುಂಬ ನೀರು ಕುಡಿದು ಮಲಗಬೇಡಿ.
ಹಾಗಾದ್ರೆ ರಾತ್ರಿ ಯಾವ ಸಮಯದಲ್ಲಿ ನೀರು ಕುಡಿಯಬೇಕು ಎಂದು ಕೇಳಿದ್ರೆ, ರಾತ್ರಿ ಮಲಗಲು ಇನ್ನು ಒಂದು ಗಂಟೆ ಇರಬೇಕಾದ್ರೆ ನೀವು ನೀರು ಕುಡಿಯಬಹುದು. ಮತ್ತು ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯಿರಿ. ಇದರಿಂದ ನಿಮ್ಮ ಬಾಯಾರಿಕೆಯೂ ನೀಗುತ್ತದೆ. ಆರೋಗ್ಯವೂ ಒಳ್ಳೆಯದಿರುತ್ತದೆ.