Tuesday, October 22, 2024

Latest Posts

ಕಿವಿಗೆ ಎಣ್ಣೆ ಹಾಕೋದು ಒಳ್ಳೆಯದಾ..? ಕೆಟ್ಟದ್ದಾ..?

- Advertisement -

ಕೆಲವರು ಕಿವಿ ನೋವಾದ್ರೆ, ಅಥವಾ ಕಿವಿಗೆ ಯಾವುದಾದರೂ ಹುಳ ಹೋದ್ರೆ ಅದನ್ನ ತೆಗೆಯಲು ಕಿವಿಗೆ ಎಣ್ಣೆ ಹಾಕುತ್ತಾರೆ. ಅಲ್ಲದೇ, ಕಿವಿಯಲ್ಲಿರುವ ಕಸ ತೆಗೆಯಲು ಕೂಡ ಕಿವಿಗೆ ಎಣ್ಣೆ ಹಾಕುತ್ತಾರೆ. ಆದ್ರೆ ಹೀಗೆ ಕಿವಿಗೆ ಎಣ್ಣೆ ಹಾಕೋದು ಸರಿನಾ..? ತಪ್ಪಾ..? ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರತ್ತಾ..? ಕಿವಿಯ ಸಮಸ್ಯೆ ಉಂಟಾಗತ್ತಾ..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..

ಕಿವಿ ನೋವಾದಾಗ, ಅಥವಾ ಕಿವಿಯಿಂದ ಕಸ ತೆಗಿಯಲು ಕಿವಿಗೆ ಎಣ್ಣೆ ಹಾಕೋದು, ಪ್ರಾಚೀನ ವಿಧಾನವಾಗಿದೆ. ಇದರಿಂದ ನಿಮ್ಮ ಆರೋಗ್ಯಕ್ಕೇನು ಸಮಸ್ಯೆಯಾಗುವುದಿಲ್ಲ. ಕಿವಿಗೆ ಎಣ್ಣೆ ಹಾಕೋದು ಉತ್ತಮವಲ್ಲ ಅನ್ನೋದು, ಕೆಲವರು ಹಬ್ಬಿಸಿಟ್ಟ ಊಹಾಪೋಹ. ಕೆಲವರು ಡ್ರಾಪ್ಸ್‌ ಹಾಕೋಕ್ಕೆ ಸಲಹೆ ಕೊಡ್ತಾರೆ.

ಆದ್ರೆ ನೀವು ಆ ಡ್ರಾಪ್ಸ್‌ನ್ನ ಸತತವಾಗಿ ಒಂದು ವಾರವಾದ್ರೂ ಬಳಸಬೇಕಾಗುತ್ತದೆ. ಅದೇ ಜಾಗದಲ್ಲಿ ಅಷ್ಟೇ ಪ್ರಮಾಣದಲ್ಲಿ, ಸತತ ಒಂದು ವಾರ ಎಣ್ಣೆ ಹಾಕಿದ್ರೆ, ನಿಮ್ಮ ಕಿವಿ ನೋವು ಶಮನವಾಗುತ್ತದೆ. ಆದ್ರೆ ನೀವು ಎಣ್ಣೆಯನ್ನ ರಾತ್ರಿ ಕಿವಿಗೆ ಹಾಕಬಾರದು. ಬದಲಾಗಿ ಬೆಳಿಗಿನ ಸಮಯ ಅಥವಾ ಮಧ್ಯಾಹ್ನದ ಸಮಯ ಎಣ್ಣೆ ಹಾಕಿ, ಹೆಚ್ಚೆಂದರೆ 10 ನಿಮಿಷವಷ್ಟೇ ಮಲಗಬೇಕು. ನಂತರ ಎದ್ದು ಕಿವಿ ಅಲ್ಲಾಡಿಸಿ, ಎಣ್ಣೆ ಕಿವಿಯೊಳಗೆ ಹೋಗುವಂತೆ ಮಾಡಬೇಕು.

ಯಾಕಂದ್ರೆ ನೀವು ರಾತ್ರಿ ಮಲಗುವಾಗ ನಿಮ್ಮ ಕಿವಿಯಲ್ಲಿ ಎಣ್ಣೆ ಹಾಕಿ, ಅಲ್ಲೇ ನಿದ್ದೆ ಹೋದ್ರೆ, ಅದ್ರಿಂದೇನು ಪ್ರಯೋಜನವಾಗುವುದಿಲ್ಲ. ಹಾಗಾಗಿ ಬೆಳಿಗ್ಗೆ ಅಥವಾ ಮಧ್ಯಾಹ್ನ ಅಥವಾ ಸಂಜೆ ಎರಡೇ ಎರಡು ಡ್ರಾಪ್ಸ್ ಎಣ್ಣೆಯನ್ನ ಕಿವಿಗೆ ಹಾಕಿ. ಇನ್ನು ನಿಮಗೆ ಕಿವಿಗೆ ಎಣ್ಣೆ ಹಾಕಿದ್ರೆ ಅಲರ್ಜಿ ಎಂದಾದಲ್ಲಿ ನೀವು ವೈದ್ಯರಲ್ಲಿಗೇ ಹೋಗಿ, ಈ ಬಗ್ಗೆ ವಿಚಾರಿಸಿ.

- Advertisement -

Latest Posts

Don't Miss