Sunday, December 15, 2024

Latest Posts

ಕೂದಲಿಗೆ ಮೊಸರು ಬಳಸುವುದು ಒಳ್ಳೆಯದಾ..? ಕೆಟ್ಟದಾ..?

- Advertisement -

ಕೂದಲಿನ ಆರೋಗ್ಯ ಚೆನ್ನಾಗಿರಬೇಕು. ಕೂದಲು ಉದುರಬಾರದು ಅಂತಾ ಹಲವರು, ಹಲವು ರೀತಿಯಲ್ಲಿ ತಮ್ಮ ಕೂದಲಿಗೆ ಹಲವು ಉತ್ಪನ್ನಗಳನ್ನು ಹಚ್ಚಿ, ಪ್ರಯೋಗ ಮಾಡುತ್ತಾರೆ. ಆದರೆ, ಆ ಪ್ರಯೋಗಗಳಿಂದಲೇ, ಕೆಲವೊಮ್ಮೆ ನಮ್ಮ ತಲೆಗೂದಲು ಇನ್ನಷ್ಟು ಹಾಳಾಗುತ್ತದೆ. ಅಂಥ ಪ್ರಯೋಗಗಳಲ್ಲಿ ಮೊಸರಿನ ಹೇರ್ ಪ್ಯಾಕ್ ಹಾಕುವ ಪ್ರಯೋಗ. ಹಾಗಾದರೆ ಮೊಸರಿನ ಹೇರ್ ಪ್ಯಾಕ್ ಹಾಕಬಾರದಾ..? ಇದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಾ..? ಕೆಟ್ಟದ್ದಾ ಅಂತಾ ತಿಳಿಯೋಣ ಬನ್ನಿ..

ಮೊಸರಿನ ಹೇರ್ ಪ್ಯಾಕ್‌ ಹಾಕುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದೇ. ಆದರೆ ಹಾಗೆ ಹೇರ್ ಪ್ಯಾಕ್ ಹಾಕುವಾಗ, ಹಲವು ವಿಷಯಗಳನ್ನು ನೀವು ಗಮನದಲ್ಲಿರಿಸಬೇಕಾಗುತ್ತದೆ. ಇಲ್ಲವಾದಲ್ಲಿ, ಕೂದಲು ಬೆಳೆಯುವ ಬದಲು, ಉದುರಲು ಶುರುವಾಗುತ್ತದೆ. ನೀವು ಮೊಸರಿನ ಹೇರ್ ಪ್ಯಾಕ್ ಹಾಕುವ ಮುನ್ನ, ಅದು ನಿಮ್ಮ ದೇಹಕ್ಕೆ ಹೊಂದುತ್ತದೆಯಾ, ಇಲ್ಲವಾ ಎಂದು ತಿಳಿದುಕೊಳ್ಳಬೇಕು. ಅಂದರೆ ಮೊಸರು ತಲೆಗೂದಲಿಗೆ ಹಚ್ಚಿದಾಗ, ನಿಮಗೆ ಅಲರ್ಜಿಯಾಗುತ್ತದಾ ಇಲ್ಲವಾ ಅನ್ನೋದನ್ನ ನೀವು ಮೊದಲು ಚೆಕ್ ಮಾಡಬೇಕು. ತಲೆಗೆ ಮೊಸರು ಹಚ್ಚಿದರೆ, ಏನು ತೊಂದರೆ ಇಲ್ಲವೆಂದಾದಾಗ ಮಾತ್ರ, ತಲೆಗೆ ಮೊಸರಿನ ಪ್ಯಾಕ್ ಹಾಕಬಹುದು.

ಅಷ್ಟೇ ಅಲ್ಲದೇ, ಮೊಸರಿನ ಜೊತೆ ಕೆಲವರು ನಿಂಬೆಹಣ್ಣು, ಮುಲ್ತಾನಿ ಮಿಟ್ಟಿ, ಮೊಟ್ಟೆ ಇವನ್ನೆಲ್ಲ ಸೇರಿಸಿ ಹೇರ್ ಪ್ಯಾಕ್ ಹಾಕುತ್ತಾರೆ. ಆದರೆ ಮೊಸರಿನ ಜೊತೆ ಇವನ್ನೆಲ್ಲ ಸೇರಿಸಿ, ಹೇರ್ ಪ್ಯಾಕ್ ಹಾಕಿದ್ರೆ, ನಿಮ್ಮ ಕೂದಲು ಡ್ಯಾಮೇಜ್ ಆಗಬಹುದು. ಹಾಗಾಗಿ ನಿಮ್ಮ ಕೂದಲಿಗೆ ಸೂಟ್ ಆಗುವ ಹೇರ್ ಪ್ಯಾಕ್‌ ಹಾಕಿ. ಇನ್ನೊಂದು ಮುಖ್ಯವಾದ ಅಂಶವೆಂದರೆ, ಯಾವುದೇ ಕಾರಣಕ್ಕೂ ಹಳೆಯ ಮೊಸರನ್ನ ಕೂದಲಿಗೆ ಬಳಸಬೇಡಿ, ಫ್ರೆಶ್ ಆಗಿರುವ ಮೊಸರನ್ನೇ ಕೂದಲಿಗೆ ಬಳಸಿ.

ಬರೀ ಮೊಸರನ್ನು ತೆಗೆದುಕೊಂಡು ನೀರು ಕೂದಲಿಗೆ ಹಚ್ಚಿಕೊಳ್ಳಬಹುದು. ಇದರಿಂದ ನಿಮ್ಮ ಕೂದಲ ಬುಡ ಗಟ್ಟಿಯಾಗಿ, ಕೂದಲು ಉದುರುವುದು ನಿಲ್ಲುತ್ತದೆ. ಮೊಸರಿನ ಜೊತೆ ಮುಲ್ತಾನಿ ಮಿಟ್ಟಿ ಸೇರಿಸಿ, ಹೇರ್ ಪ್ಯಾಕ್ ಹಾಕಿದ್ರೆ, ನಿಮ್ಮ ಕೂದಲು ನೈಸ್ ಆಗುತ್ತದೆ. ಇದಕ್ಕಾಗಿ ನೀವು ಮೊದಲ ದಿನ ರಾತ್ರಿ ತಲೆಗೂದಲಿಗೆ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಬೇಕು. ಒಂದು ಕಾಟನ್ ಬಟ್ಟೆಯನ್ನ ಬೆಚ್ಚಗಿನ ನೀರಿನಲ್ಲಿ ಅದ್ದಿ, ಅದನ್ನ ನಿಮ್ಮ ತಲೆಗೂದಲಿಗೆ ಸುತ್ತಿ ಮಲಗಬೇಕು. ಮರುದಿನ ಎದ್ದು ಮುಲ್ತಾನಿ ಮಿಟ್ಟಿ ಮತ್ತು ಮೊಸರು ಸೇರಿಸಿ, ಹೇರ್ ಪ್ಯಾಕ್ ತಯಾರಿಸಿ, ಅಪ್ಲೈ ಮಾಡಬೇಕು.

ಹೀಗೆ ಮಾಡಿದರೆ, ನಿಮ್ಮ ಕೂದಲು ಸಾಫ್ಟ್, ಶೈನಿ ಆಗುತ್ತದೆ. ನೆನಪಿರಲಿ ನೀವು ಹೇರ್ ವಾಶ್ ಮಾಡುವಾಗ, ಉತ್ತಮವಾದ ಶ್ಯಾಂಪೂ ಬಳಸಿ, ಸರಿಯಾಗಿ ಹೇರ್ ವಾಶ್ ಮಾಡಬೇಕು. ಇಲ್ಲವಾದಲ್ಲಿ, ಕೂದಲಿಗೆ ಮೊಸರಿನ ವಾಸನೆ ಬಂದು, ಕೂದಲು ಉದುರಲು ಶುರುವಾಗುತ್ತದೆ.

ಕಿಡ್ನಿಸ್ಟೋನ್ ತೆಗೆದುಹಾಕಲು ಈ ಜ್ಯೂಸ್‌ ಮಾಡಿ ಕುಡಿಯಿರಿ.

ಮಕ್ಕಳ ತೂಕ ಹೆಚ್ಚಿಸಲು ಬಾಳೆಹಣ್ಣನ್ನು ಈ ರೀತಿಯಾಗಿ ನೀಡಿ..

ಹಸುವಿನ ಶುದ್ಧ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

- Advertisement -

Latest Posts

Don't Miss