ಹಿಂದಿನ ಕಾಲದಲ್ಲಿ ಪತಿಯ ಊಟವಾದ ಬಳಿಕ, ಪತ್ನಿ ಅದೇ ಬಟ್ಟಲಲ್ಲಿ ಊಟ ಮಾಡುತ್ತಿದ್ದಳು. ಯಾಕಂದ್ರೆ ಹೀಗೆ ಮಾಡುವುದರಿಂದ ಮುತ್ತೈದೆ ಸಾವು ಬರುತ್ತದೆ ಎಂಬ ನಂಬಿಕೆ ಇತ್ತು. ಆದ್ರೆ ಇಂದಿನ ಕಾಲದಲ್ಲಿ ಪತಿ- ಪತ್ನಿ ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡೋದು ಕಾಮನ್ ಆಗಿದೆ. ಹಾಗಾದ್ರೆ ಪತಿ- ಪತ್ನಿ ಒಟ್ಟಿಗೆ ಊಟ ಮಾಡೋದು ಒಳ್ಳೆಯದಾ..? ಅಥವಾ ಪತಿ ಉಂಡ ಬಟ್ಟಲಲ್ಲಿ ಪತ್ನಿ ಊಟ ಮಾಡುವುದು ಒಳ್ಳೆಯದಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕೆಲವರ ಪ್ರಕಾರ, ಪತಿ- ಪತ್ನಿ ಒಂದೇ ಬಟ್ಟಲಲ್ಲಿ ಊಟ ಮಾಡಿದ್ರೆ, ಅವರ ಮಧ್ಯೆ ಪ್ರೀತಿ ಹೆಚ್ಚುತ್ತದೆ ಅನ್ನೋ ನಂಬಿಕೆ ಇದೆ. ಆದ್ರೆ ಇದು ಸುಳ್ಳು. ಬದಲಾಗಿ ಪತಿ- ಪತ್ನಿ ಒಟ್ಟಿಗೆ, ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ, ಮನೆಗೆ ದರಿದ್ರ ಬರುತ್ತದೆ. ಯಾಕಂದ್ರೆ ಒಂದೇ ಬಟ್ಟಲಲ್ಲಿ ಉಣ್ಣುವುದರಿಂದ ಒಬ್ಬರ ಗುಣ ಇನ್ನೊಬ್ಬರಿಗೆ ಬರುತ್ತದೆ. ಅದು ಒಳ್ಳೆಯದಾದರೆ, ಪರ್ವಾಗಿಲ್ಲಾ. ಆದ್ರೆ ಕೆಟ್ಟ ಗುಣ, ಸಿಟ್ಟಿನ ಸ್ವಭಾವ, ಹೊಟ್ಟೆ ಕಿಚ್ಚಿನ ಸ್ವಭಾವ, ಆಶೆ ಬುರುಕ ಸ್ವಭಾವ ಇತ್ಯಾದಿಗಳಿದ್ದರೆ, ಅಂಥ ಸ್ವಭಾವ ಇನ್ನೊಬ್ಬರಿಗೆ ಬರುತ್ತದೆ.
ಅಲ್ಲದೇ ಎಂಜಿಲು ತಿನ್ನುವುದರಿಂದ, ಆರೋಗ್ಯಕ್ಕೂ ಮಾರಕ. ಯಾರಿಗೆ ಯಾವ ಖಾಯಿಲೆ ಇರುತ್ತದೆ ಅನ್ನೋದು ಸ್ವತಃ ಅವರಿಗೇ ಗೊತ್ತಿರುವುದಿಲ್ಲ. ಹಾಗಾಗಿ ಯಾರ ಎಂಜಿಲನ್ನೂ ನಾವು ತಿನ್ನಕೂಡದು. ಮತ್ತು ಹಿಂದೂ ಧರ್ಮದಲ್ಲಿ ಒಬ್ಬರ ಎಂಜಿಲನ್ನು ಮತ್ತೊಬ್ಬರು ತಿನ್ನೋದು ನಿಷಿದ್ಧವಾಗಿದೆ. ಅಲ್ಲದೇ ಹೀಗೆ ಮಾಡುವುದರಿಂದ ಮನೆಯಲ್ಲಿ ಪದೇ ಪದೇ ಜಗಳಗಳಾಗುವ ಸಾಧ್ಯತೆ ಹೆಚ್ಚು.
ಇಷ್ಟೇ ಅಲ್ಲದೇ, ಒಂದೇ ಬಟ್ಟಲಲ್ಲಿ, ಒಟ್ಟಿಗೆ ಊಟ ಮಾಡುವುದರಿಂದ, ಪತಿ- ಪತ್ನಿ ಮಧ್ಯೆ ರಸಿಕತೆ ಕಡಿಮೆಯಾಗುತ್ತದೆ. ಭೋಗ ವಿಲಾಸದಲ್ಲಿ ಸಮಸ್ಯೆ ಬರುತ್ತದೆ. ಇದರಿಂದ ಪತಿ- ಪತ್ನಿ ಸಂಬಂಧದಲ್ಲೂ ಧಕ್ಕೆಯುಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಪತಿ- ಪತ್ನಿ ಒಟ್ಟಿಗೆ ಕುಳಿತು ಊಟ ಮಾಡಿದರೂ, ಬೇರೆ ಬೇರೆ ಬಟ್ಟಲಲ್ಲಿ ಊಟ ಮಾಡುವುದು ಒಳಿತು.