Health Tips: ಊಟ ಮಾಡುವಾಗ ಕೆಲವರಿಗೆ ಮಧ್ಯೆ ಮಧ್ಯೆ ಸ್ವಲ್ಪ ಸ್ವಲ್ಪ ನೀರು ಕುಡಿಯುವ ಅಭ್ಯಾಸವಿರುತ್ತದೆ. ಇನ್ನು ಕೆಲವರು ಊಟಕ್ಕೂ ಮುನ್ನ ಚೆನ್ನಾಗಿ ನೀರು ಕುಡಿಯುತ್ತಾರೆ. ಮತ್ತೆ ಕೆಲವರು ಊಟವಾದ ತಕ್ಷಣ ನೀರು ಕುಡಿಯುತ್ತಾರೆ. ಹಲವರು ಊಟವಾಗಿ 1 ಗಂಟೆ ಬಳಿಕ ನೀರು ಕುಡಿಯುತ್ತಾರೆ. ಹಾಗಾದರೆ ಇದರಲ್ಲಿ ಯಾವುದು ಸರಿ..? ಊಟದ ಮಧ್ಯೆ ನೀರು ಕುಡಿಯುವುದು ಸರಿನಾ ತಪ್ಪಾ ಅನ್ನೋ ಬಗ್ಗೆ ವೈದ್ಯರು ಮಾಹಿತಿ ನೀಡಲಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಊಟದ ಮಧ್ಯೆ ನೀರು ಕುಡಿಯುವುದು ತಪ್ಪು ಅಂತಾರೆ ವೈದ್ಯರು. ಏಕೆಂದರೆ ನಮ್ಮ ದೇಹದಲ್ಲಿ ಆ್ಯಸಿಡ್ ಪ್ರೊಡಕ್ಷನ್ ಆಗುತ್ತದೆ. ಹೀಗೆ ಉತ್ಪತ್ತಿಯಾಗುವ ಆ್ಯಸಿಡ್ ನಾವು ಸೇವಿಸುವ ಆಹಾರದೊಂದಿಗೆ ಮಿಕ್ಸ್ ಆಗಿ, ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕು ಅಂದ್ರೆ, ಊಟದ ಮಧ್ಯೆ ನೀರು ಕುಡಿಯಬಾರದು.
ಊಟದ ಮಧ್ಯೆ ನೀರು ಕುಡಿದರೆ, ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಆಗ ನಾವು ತಿಂದ ಆಹಾರ, ಆ್ಯಸಿಡ್ ಜೊತೆ ಸರಿಯಾಗಿ ಸೇರಿಕೊಳ್ಳದೇ, ಜೀರ್ಣಕ್ರಿಯೆ ಆಗುವುದಿಲ್ಲ. ಆಗಲೇ ಆರೋಗ್ಯ ಸಮಸ್ಯೆಗಳು ಬರುತ್ತದೆ. ಹಾಗಾಗಿ ಊಟವಾಗಿ ಒಂದು ಗಂಟೆಯಾದ ಬಳಿಕ, ನೀರು ಕುಡಿಯಬೇಕು. ಅಥವಾ ಊಟದ ಅರ್ಧ ಗಂಟೆ ಮೊದಲು ನೀರು ಕುಡಿಯಬಹುದು.
ಇನ್ನು ಊಟದ ನಡುವೆ ಯಾವಾಗ ನೀರು ಕುಡಿಯಬೇಕು ಅಂದ್ರೆ, ನಮಗೆ ಕೆಮ್ಮು ಬಂದಾಗ, ಊಟ ಗಂಟಲಲ್ಲಿ ಸಿಕ್ಕಿಹಾಕಿಕೊಂಡಾಗ, ಬೇರೆ ಉಪಾಯವಿಲ್ಲದೇ, ನಾವು ಕೊಂಚವೇ ನೀರು ಕುಡಿಯಬಹುದು. ಆದರೆ ಹೆಚ್ಚು ನೀರು ಕುಡಿಯುವಂತಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..




