Health Tips: ಕೆಲವರು ತಮ್ಮ ದೇಹದ ತೂಕ ಇಳಿಸಲು ಪೌಡರ್ ಸಹಾಯ ಪಡೆಯುತ್ತಾರೆ. ಆದರೆ ಪೌಡರ್ ಸೇವನೆಯಿಂದ ತೂಕ ಇಳಿಯುತ್ತದೆ ಅನ್ನೋದು ಎಷ್ಟು ಸತ್ಯ ಅಂತಾ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಆಹಾರ ತಜ್ಞೆ ಮತ್ತು ವೈದ್ಯರಾದ ಡಾ.ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ.
ವೈದ್ಯರು ಹೇಳುವುದೇನೆಂದರೆ, ದಯವಿಟ್ಟು ಪೌಡರ್ ತೆಗೆದುಕೊಂಡು ಎಂದಿಗೂ ತೂಕ ಇಳಿಸಲು ಹೋಗಬೇಡಿ. ಏಕೆಂದರೆ ಇದೊಂದು ಕೃತಕವಾದ ದಾರಿ. ನಾಲಿಗೆಯಿಂದ ಹಿಡಿದು ಸಣ್ಣ ಕರುಳಿನ ತನಕ ನಾವು ತೆಗೆದುಕೊಂಡ ಆಹಾರಗಳು ಜೀರ್ಣವಾಗುತ್ತದೆ. ನಮ್ಮ ದೇಹದಲ್ಲಿರುವ ಜೀರ್ಣಾಂಗ ವ್ಯವಸ್ಥೆ ಪರಪಕ್ವವಾಗಿ ಕೆಲಸ ಮಾಡಬೇಕು ಅಂದ್ರೆ, ನಾವು ಸರಿಯಾದ ರೀತಿಯಲ್ಲಿ ಆಹಾರವನ್ನು ಸೇವಿಸಬೇಕು.
ನಾವು ಸೇವಿಸುವ ಆಹಾರದಲ್ಲಿ ಫೈಬರ್, ಪ್ರೋಟೀನ್, ವಿಟಾಮಿನ್ ಸೇರಿ ಹಲವು ಆರೋಗ್ಯಕರ ಪೋಷಕಾಂಶಗಳು ಇರಬೇಕು. ಆದರೆ ಮಾನವ ತಯಾರಿಸಿದ ಆಹಾರದಲ್ಲಿ ಕೆಲವೇ ಕೆಲವೇ ಆರೋಗ್ಯಕರ ಅಂಶಗಳು ಬಿಟ್ಟು, ಬೇರೆ ಪೋಷಕಾಂಶಗಳು ಇರುವುದಿಲ್ಲ. ಹಾಗಾಗಿ ಪೌಡರ್ ಸೇವನೆ ಮಾಡಿ, ಯಾವುದೇ ಕಾರಣಕ್ಕೂ ದೇಹದ ತೂಕ ಇಳಿಸಿಕೊಳ್ಳುವ ಪ್ರಯತ್ನ ಮಾಡಬೇಡಿ ಅಂತಾರೆ ವೈದ್ಯರು.
ಅಲ್ಲದೇ ನಾವು ಸೇವಿಸುವ ಆಹಾರದಲ್ಲಿ ಉಪ್ಪು, ಹುಳಿ, ಖಾರ ಎಲ್ಲವೂ ಇರಬೇಕು. ಅಲ್ಲದೇ, ನಾವು ಸೇವಿಸುವ ಆಹಾರ ನಮ್ಮ ಆರೋಗ್ಯ ಕಾಪಾಡುವುದರ ಜೊತೆಗೆ, ನಮ್ಮ ಮನಸ್ಸಿಗೂ ಖುಷಿ ಕೊಡಬೇಕು. ಆಗ ಮಾತ್ರ ನಾವು ಸೇವಿಸುವ ಆಹಾರದಿಂದ ನಾವು ಆರೋಗ್ಯವಾಗಿರಲು ಸಾಧ್ಯ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..