ಪತಿ ಪತ್ನಿ ಒಟ್ಟಿಗೆ ಕೂತು ಊಟ ಮಾಡುವುದು ಸರಿಯೋ..? ತಪ್ಪೋ..?

ಹಿಂದಿನ ಕಾಲದಲ್ಲಿ ಮೊದಲು ಪತಿ ಊಟ ಮಾಡುತ್ತಿದ್ದ. ನಂತರ ಅದೇ ಬಟ್ಟಲಿನಲ್ಲಿ ಪತ್ನಿ ಊಟ ಮಾಡುತ್ತಿದ್ದಳು. ಯಾಕಂದ್ರೆ ಇದರಿಂದ ಮುತ್ತೈದೆ ಸಾವು ಸಿಕ್ಕುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಹಾಗಾಗಿ ಅದೇ ಬಟ್ಟಲಿನಲ್ಲಿ ಪತ್ನಿ ಊಟ ಮಾಡುತ್ತಿದ್ದಳು. ಆದ್ರೆ ಈಗಿನ ಕಾಲದಲ್ಲಿ ಪತಿ ಪತ್ನಿ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಇದು ಸರಿನಾ..? ತಪ್ಪಾ ..? ಅಂತಾ ತಿಳಿಯೋಣ ಬನ್ನಿ..

ಹಲ್ಲಿ ದೇಹದ ಯಾವ ಭಾಗದ ಮೇಲೆ ಬಿದ್ದರೆ ಶುಭ..? ಮತ್ತು ಅಶುಭ..?

ಪತಿ ಪತ್ನಿ ಒಟ್ಟಿಗೆ ಕುಳಿತು ಊಟ ಮಾಡುವುದು ತಪ್ಪಲ್ಲ, ಬದಲಾಗಿ ಪತಿ ಪತ್ನಿ ಒಂದೇ ತಟ್ಟೆಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವುದು ತಪ್ಪು. ಇದು ವೈಜ್ಞಾನಿಕವಾಗಿಯೂ ಮತ್ತು ಶಾಸ್ತ್ರದ ಪ್ರಕಾರವೂ ತಪ್ಪು. ಹೀಗೆ ಊಟ ಮಾಡುವುದರಿಂದ ಒಬ್ಬರ ಬುದ್ಧಿ ಇನ್ನೊಬ್ಬರಿಗೆ ಬರುತ್ತದೆ. ಪತ್ನಿಗೆ ಹೊಟ್ಟೆ ಕಿಚ್ಚಿನ ಸ್ವಭಾವ, ಬೈಯ್ಯುವ ಸ್ವಭಾವವಿದ್ದರೆ, ಅದು ಪತಿಗೂ ಬರುತ್ತದೆ. ಪತಿಗೆ ದುಷ್ಟ ಬುದ್ಧಿ ಇದ್ದರೆ ಅದು ಕೂಡ ಪತ್ನಿಗೆ ಬರುತ್ತದೆ. ಹಾಗಾಗಿ ಒಂದೇ ತಟ್ಟೆಯಲ್ಲಿ ಪತಿ ಪತ್ನಿ ಇಬ್ಬರೂ ಊಟ ಮಾಡಬಾರದು.

ಕೆಲವರು ಒಂದೇ ತಟ್ಟೆಯಲ್ಲಿ ತಿಂದ್ರೆ ಪ್ರೀತಿ ಜಾಸ್ತಿಯಾಗತ್ತೆ ಎಂದು ಹೇಳುತ್ತಾರೆ. ಆದ್ರೆ ಇದು ಸುಳ್ಳು. ಹೀಗೆ ಉಣ್ಣುವುದರಿಂದ ಮನೆಯಲ್ಲಿ ಗಲಾಟೆ ಹೆಚ್ಚುತ್ತದೆ. ದರಿದ್ರತೆ ಬರುತ್ತದೆ. ಊಟಕ್ಕೆ ತಾಪತ್ರಯ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ರೀತಿ ಮಾಡಬೇಡಿ. ಇನ್ನು ಟಿವಿ ನೋಡುತ್ತ, ಮೊಬೈಲ್ ನೋಡುತ್ತ ಊಟ ಮಾಡುವುದು ತಪ್ಪು.

ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.. ಈ ರಾಶಿಯವರಿಗೆ ಜೀವನದಲ್ಲಿ ದೊಡ್ಡ ಬದಲಾವಣೆಗಳು..!

ಬೆಡ್ ಮೇಲೆ, ಸೋಫಾದ ಮೇಲೆ ಕುಳಿತು ಊಟ ಮಾಡುವುದು ತಪ್ಪು. ಒಮ್ಮೆ ಊಟಕ್ಕೆ ಕುಳಿತಾಗ ಎದ್ದು ಹೋಗಿ ಮತ್ತೆ ಬಂದು ಉಣ್ಣುವುದು ತಪ್ಪು. ಊಟ ಮಾಡುವಾಗ ಯಾರನ್ನೂ ಬೈಯ್ಯಬೇಡಿ. ಯಾರ ಬಗ್ಗೆಯೂ ಅಸೂಯೆ ಪಡಬೇಡಿ. ಊಟಕ್ಕೂ ಮುನ್ನ ದೇವರನ್ನು ನೆನೆಸಿಕೊಳ್ಳಿ. ಅಡುಗೆ ಕೋಣೆಗೆ ಚಪ್ಪಲ್ಲಿ ಧರಿಸಿ ಹೋಗಬೇಡಿ. ಊಟ ಮಾಡುವಾಗಲೂ ಚಪ್ಪಲಿ ಧರಿಸಬೇಡಿ.

About The Author