Health Tips: ಕ್ಯಾನ್ಸರ್ ಅನ್ನೋದು ಅದೆಷ್ಟು ಮಾರಕ ಖಾಯಿಲೆ ಎಂದರೆ, ಮೊದಲ ಹಂತದಲ್ಲೇ ಎಚ್ಚೆತ್ತುಕೊಂಡು ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ, ಕೆಲ ದಿನಗಳಲ್ಲೇ ಇಡೀ ದೇಹವನ್ನು ಆವರಿಸಿ, ನಿಮ್ಮ ಜೀವಕ್ಕೆ ಅಪಾಯ ತಂದೊಡ್ಡುತ್ತದೆ. ಚಿಕಿತ್ಸೆ ಜೊತೆಗೆ, ನಾವು ಪಥ್ಯ ಮಾಡುವುದು ಕೂಡ ಅವಶ್ಯಕವಾಗಿದೆ. ಹಾಗಾದ್ರೆ ಕ್ಯಾನ್ಸರ್ ಇರುವವರು ಉಪ್ಪು- ಸಕ್ಕರೆ ತಿನ್ನೋದು ತಪ್ಪಾ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ಕ್ಯಾನ್ಸರ್ ಇರುವವರು ಸಕ್ಕರೆ ಉಪ್ಪು ತಿನ್ನಬಾರದು ಅಂತಾ ಹೇಳುವುದು ಸುಳ್ಳು. ಯಾವುದೇ ಪದಾರ್ಥವನ್ನು ಮಿತವಾಗಿ ಸೇವಿಸಬೇಕು. ಬಿಪಿ, ಶುಗರ್ ಇರುವ ಸಂದರ್ಭದಲ್ಲಿ ಅಷ್ಟೇ ಸಕ್ಕರೆ, ಉಪ್ಪಿನ ಸೇವನೆಯ ಪ್ರಮಾಣ ಕಡಿಮೆ ಮಾಡಬೇಕು ಅಂತಾರೆ ವೈದ್ಯರು.
ಕ್ಯಾನ್ಸರ್ ಇದ್ದವರಿಗೆ ಹಸಿವು ಕಡಿಮೆ ಆಗುತ್ತ ಹೋಗುತ್ತಿದ್ದಂತೆ, ಅವರ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುತ್ತ ಹೋಗುತ್ತದೆ. ಹಾಗಾಗಿ ಹಸಿವು ಕಡಿಮೆಯಾದಾಗ, ಕಡೆಗಣಿಸದೇ, ಉತ್ತಮ ಚಿಕಿತ್ಸೆ ತೆಗೆದುಕೊಳ್ಳಬೇಕು.
ಕ್ಯಾನ್ಸರರ್ ಇದ್ದವರು ಯಾಕೆ ಇದ್ದಕ್ಕಿಂತೆ ವೀಕ್ ಆಗುತ್ತಾರೆ ಎಂದರೆ, ದೇಹದಲ್ಲಿರುವ ಕ್ಯಾನ್ಸರ್ ಕಣಗಳು ನೀವು ಸೇವಿಸುವ ಆಹಾರ, ನ್ಯೂಟ್ರಿಶಿಯನ್ ತಾನು ತೆಗೆದುಕೊಂಡು ಬೆಳೆಯುತ್ತದೆ. ಹಾಗಾಗಿ ನೀವು ರೋಗ ರುಜಿನ ಬರುವುದಕ್ಕೂ ಮುನ್ನವೇ ಆರೋಗ್ಯಕರ ಆಹಾರ ಸೇವನೆ ಮಾಡಿದರೆ, ನಿಮ್ಮ ದೇಹದಲ್ಲಿ ಕ್ಯಾನ್ಸರ್ ಕಣ ಉದ್ಭವ ಆಗುವ ಚಾನ್ಸ್ ಕಡಿಮೆ ಇರುತ್ತದೆ. ಹಾಗಾಗಿ ಕ್ಯಾನ್ಸರ್ ಬಂದ ಮೇಲೆ ಅಲ್ಲದೇ, ನೀವು ಆರೋಗ್ಯವಾಗಿರುವಾಗಲೇ, ಆರೋಗ್ಯಕರ ಆಹಾರ ಸೇವಿಸಲು ಶುರು ಮಾಡಬೇಕು. ಈ ಬಗ್ಗೆ ವೈದ್ಯರು ಇನ್ನಷ್ಟು ಮಾಹಿತಿ ನೀಡಿದ್ದಾರೆ. ಅದನ್ನು ತಿಳಿಯಲು ಈ ವೀಡಿಯೋ ನೋಡಿ.

