Health Tips: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಸ್ಪೀಡ್ ಆದಬಳಿಕ, ಅದರಲ್‌ಲಿ ಆರೋಗ್ಯ, ಸೌಂದರ್ಯಕ್ಕೆ ಸಂಬಂಧಿಸಿದ ಹಲವು ಟಿಪ್ಸ್‌ಗಳು ಬರುತ್ತಿದೆ. ಅವುಗಳಲ್ಲಿ ರೈಸ್ ವಾಟರ್ ಬಳಸುವುದೂ ಒಂದು, ಅಕ್ಕಿ ತೊಳೆದ ನೀರನ್ನು ಸೇವಿಸಬೇಕು, ಅದನ್ನು ಮುಖಕ್ಕೆ ಕೂದಲಿಗೆ ಬಳಸಿದರೆ ಒಳ್ಳೆಯದು ಅಂತೆಲ್ಲ ಹೇಳಲಾಗುತ್ತದೆ. ಹಾಗಾದ್ರೆ ಅಕ್ಕಿ ತೊಳೆದ ನೀರನ್ನು ಕುಡಿಯಬಹುದಾ..? ಕುಡಿದರೆ ಆರೋಗ್ಯಕ್ಕೆ ನಷ್ಟವೋ, ಲಾಭವೋ..? ಇತ್ಯಾದಿ ಮಾಹಿತಿಯನ್ನು ಆಹಾರ ತಜ್ಞರಾದ ಡಾ.ಪ್ರೇಮಾ ವಿವರಿಸಿದ್ದಾರೆ ನೋಡಿ..
ವೈದ್ಯರು ಹೇಳುವ ಪ್ರಕಾರ, ಅಕ್ಕಿ ತೊಳೆದ ನೀರನ್ನು ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಮೊದಲ ಬಾರಿ ಅಕ್ಕಿ ತೊಳೆದ ನೀರು ಬಳಸುವುದು ಬೇಡ. ಏಕೆಂದರೆ, ಇದರಲ್ಲಿ ಹೆಚ್ಚು ಕಲ್ಮಶವಿರುತ್ತದೆ. ಹಾಗಾಗಿ ಮೊದಲು ಅಕ್ಕಿ ತೊಳೆದ ನೀರನ್ನು ಚೆಲ್ಲಿ, ಬಳಿಕ ಅಕ್ಕಿ ತೊಳೆದು ಆ ನೀರನ್ನು ಬಳಸಬಹುದು.
ಅಕ್ಕಿ ಬೆಳೆಯುವಾಗ ಅದರಲ್ಲಿ ಕೆಮಿಕಲ್‌ಗಳನ್ನು ಬಳಸಿರುತ್ತಾರೆ. ಹಾಗಾಗಿ ಅಕ್ಕಿ ತೊಳೆಯಲೇಬೇಕಾಗುತ್ತದೆ. ಆಗ ಮೊದಲ ಬಾರಿ ಅಕ್ಕಿಯನ್ನು ನೀವು ಚೆನ್ನಾಗಿ ತೊಳೆದು ಬಿಟ್ಟರೆ, ಅಕ್ಕಿಯಲ್ಲಿರುವ ಧೂಳು, ಕಲ್ಮಶವೆಲ್ಲ ಹೋಗುತ್ತದೆ. ಬಳಿಕ ನೀವು ಅಕ್ಕಿ ತೊಳೆದ ನೀರನ್ನು ಬಳಸಬಹುದು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..