Sunday, September 8, 2024

Latest Posts

ಸೂರ್ಯ ನಮಸ್ಕಾರವನ್ನು ಸಂಜೆಯ ಹೊತ್ತಲ್ಲಿ ಮಾಡುವುದು ತಪ್ಪೋ..? ಸರಿಯೋ..?

- Advertisement -

Health Tips: ಯೋಗ ಮಾಡಿದವರಿಗೆ ಯಾವ ರೋಗವೂ ಬರುವುದಿಲ್ಲವೆಂಬ ಮಾತಿದೆ. ಆದರೆ ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಯೋಗ ಮಾಡಿದರೆ ಮಾತ್ರ, ಆರೋಗ್ಯಕ್ಕೆ ಲಾಭವಾಗುತ್ತದೆ. ಅದೇ ರೀತಿ ಸೂರ್ಯ ನಮಸ್ಕಾರವನ್ನು ಸಂಜೆ ಹೊತ್ತಲ್ಲಿ ಮಾಡುವುದು ತಪ್ಪೋ ಸರಿಯೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಯೋಗ ಮಾಡುವುದರಿಂದ ಬರೀ ನಮ್ಮ ಆರೋಗ್ಯ ಸುಧಾರಿಸುವುದಷ್ಟೇ ಅಲ್ಲದೇ, ನಮ್ಮ ಸೌಂದರ್ಯ ವೃದ್ಧಿಸುತ್ತದೆ. ಮುಖದ ಕಾಂತಿ ಹೆಚ್ಚುತ್ತದೆ. ದೇಹದಲ್ಲಿ ಸರಿಯಾಗಿ ರಕ್ತ ಸಂಚಾರವಾಗುತ್ತದೆ. ಅಲ್ಲದೇ ಎಲ್ಲಕ್ಕಿಂತ ಮುಖ್ಯ ಯೋಗ ಅಂದ್ರೆ ಸೂರ್ಯ ನಮಸ್ಕಾರ. ಸೂರ್ಯ ನಮಸ್ಕಾರ ಮಾಡಲು ಪರ್ಫೆಕ್ಟ್ ಆಗಿ ಯಾರಿಗೆ ಬರುತ್ತದೆಯೋ, ಅವರು ಎಲ್ಲ ರೀತಿಯ ಯೋಗಗಳನ್ನು ಮಾಡಬಲ್ಲರು ಅಂತಾರೆ, ಯೋಗ ಗುರುಗಳು.

ಇನ್ನು ಸೂರ್ಯ ಉದಯವಾಗುವಾಗ, ಸೂರ್ಯ ಮುಳುಗುವಾಗ ಸೂರ್ಯ ನಮಸ್ಕಾರ ಮಾಡಬೇಕು.  ಮತ್ತು ಆ ವೇಳೆ ನಾವು ಆಹಾರ ಸೇವಿಸಿರಬಾರದು. ಖಾಲಿ ಹೊಟ್ಟೆಯಲ್ಲಿ ಸೂರ್ಯ ನಮಸ್ಕಾರ ಮಾಡಬೇಕು. ಮಡಿ ನೋವು ಇದ್ದವರು ಸೂರ್ಯ ನಮಸ್ಕಾರ ಮಾಡಬಾರದು. ಆದರೆ ನೀವು ಈ ಬಗ್ಗೆ ನಿಮ್ಮ ಯೋಗ ಗುರುಗಳಲ್ಲಿ ಕೇಳಿ ತಿಳಿದುಕೊಳ್ಳಬೇಕು.

ಪ್ರತಿದಿನ 12 ಸೂರ್ಯನಮಸ್ಕಾರ ಮಾಡಿ, ಪ್ರಾಣಾಯಾಮ ಮಾಡಿದರೆ, ನೀವು ಪೂರ್ತಿ ಯೋಗ ಮಾಡಿದಂತೆ. ಇದರಿಂದಲೇ ನಿಮ್ಮ ಆರೋಗ್ಯ ವೃದ್ಧಿಸುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

- Advertisement -

Latest Posts

Don't Miss