Friday, November 22, 2024

Latest Posts

ಒಂದೇ BP Tablet ಹಲವಾರು ವರ್ಷ ಬಳಸೋದು ತಪ್ಪಾ..?

- Advertisement -

Health Tips: ಬಿಪಿ ಇರುವವರಿಗೆ ಯಾರಾದ್ರೂ ಕಾಲ ಕಾಲಕ್ಕೆ ಮಾತ್ರೆ ಕೊಟ್ಟಾಗ, ಅಥವಾ ವೈದ್ಯರ ಸಲಹೆಯಂತೆ ಮಾತ್ರೆ ಕೊಟ್ಟಾಗ ಮಾತ್ರ ಅವರು ತೆಗೆದುಕೊಳ್ಳುತ್ತಾರೆ. ಇಲ್ಲದಿದ್ದಾಗ ಮನಸ್ಸಿಗೆ ಬಂದಾಗ ಮಾತ್ರೆ ಸೇವಿಸುತ್ತಾರೆ. ಕೆಲವರು ಒಂದೇ ಬಿಪಿ ಮಾತ್ರೆಯನ್ನು ಹಲವಾರು ವರ್ಷ ಬಳಸುತ್ತಾರೆ. ಇದು ಸರಿಯಾ, ತಪ್ಪಾ ಅನ್ನೋ ಬಗ್ಗೆ ವೈದ್ಯರು ಮಾತನಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಇಂದಿನ ಕಾಲದಲ್ಲಿ ಹಲವರಿಗೆ ಬಿಪಿ-ಶುಗರ್ ಬರುತ್ತಿದೆ. ಹಾಗಾಗಿ ಇದು ಕಾಮನ್ ಸಮಸ್ಯೆ ಅಂತಾ ಎಲ್ಲರಿಗೂ ಅನ್ನಿಸುತ್ತಿದೆ. ಆದರೆ ಬಿಪಿ ಅನ್ನೋದು ಎಷ್ಟರ ಮಟ್ಟಿಗೆ ನಿಮ್ಮನ್ನು ಕರೆದೊಯ್ಯುತ್ತದೆ ಎಂದರೆ, ಇದರಿಂದ ಮೆದುಳಿನ ಸಮಸ್ಯೆ ಬರುತ್ತದೆ. ಕಣ್ಣು ಕಳೆದುಕೊಳ್ಳುವ ಸಾಧ್ಯತೆ ಇದೆ. ಕಿಡ್ನಿ ಡ್ಯಾಮೇಜ್ ಆಗುವ ಸಾಧ್ಯತೆ ಇದೆ. ಹಾಗಾಗಿ ನಿಮಗೆ ಬಿಪಿ ಇದೆ ಎಂದು ಗೊತ್ತಾದ ತಕ್ಷಣ, ಅದಕ್ಕೆ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳಿ. ಆಹಾರದ ಬಗ್ಗೆ ಗಮನ ಕೊಡಿ.

ಇನ್ನು ಮಾತ್ರೆ ತೆಗೆದುಕೊಳ್ಳುವ ವಿಷಯದ ಬಗ್ಗೆ ಮಾತನಾಡುವುದಿದ್ದರೆ, ನಿಮ್ಮ ಬಿಪಿ ಈ ವರ್ಷ ಕಡಿಮೆ ಇರಬಹುದು, ಮುಂದಿನ ವರ್ಷ ಹೆಚ್ಚಾಗಬಹುದು. ಅಥವಾ ಈ ವರ್ಷ ಹೆಚ್ಚಾಗಿ, ಮುಂದಿನ ವರ್ಷ ಕಡಿಮೆಯಾಗಬಹುದು. ಹಾಗಾಗಿ ಒಂದೇ ಮಾತ್ರೆಯನ್ನು ಕಂಟಿನ್ಯೂ ಮಾಡುವುದು ಉತ್ತಮವಲ್ಲ. ಬಿಪಿ ಚೆಕ್ ಮಾಡಿಸಿಕೊಂಡು, ಕಾಲ ಕಾಲಕ್ಕೆ ವೈದ್ಯರ ಸಲಹೆಯ ಪ್ರಕಾರ, ಮಾತ್ರೆ ಚೇಂಜ್ ಮಾಡಬೇಕಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಅವಲಕ್ಕಿ ಶೀರಾ ರೆಸಿಪಿ

ಹುಟ್ಟುವ ಮಗುವಿನ ತೂಕ ಎಷ್ಟಿರಬೇಕು?

- Advertisement -

Latest Posts

Don't Miss