Health Tips: ಯಾವುದೇ ರೋಗವಿರಲಿ, ವೈರಲ್ ಜ್ವರವಿರಲಿ, ಇವೆಲ್ಲವೂ ಬೇಗ ಶಿಶುಗಳಿಗೆ, ಮಕ್ಕಳಿಗೆ ಹರಡುತ್ತದೆ. ಹಾಗಾಗಿ ಹುಟ್ಟಿದ ಮಕ್ಕಳ ಕಾಳಜಿ ಮಾಡುವುದು ತುಂಬಾ ಮುಖ್ಯ. ಈ ಬಗ್ಗೆ ವೈದ್ಯೆಯಾದ ಡಾ. ಸಹನಾ ದೇವ್‌ದಾಸ್ ಅವರು ವಿವರಿಸಿದ್ದಾರೆ.
ಶಿಶುಗಳನ್ನು ರೋಗಗಳಿಂದ, ಚಳಿಗಾಲದಿಂದ ರಕ್ಷಿಸಬೇಕು ಅಂದ್ರೆ ತಾಯಿ ಮಗು ಇಬ್ಬರೂ ಒಂದೇ ಕಡೆ ಇರಬೇಕು. ಅಂದ್ರೆ ಬಾಣಂತಿ ಸದಾ ಮಗುವಿನ ಬಳಿಯೇ ಇರಬೇಕು. ಅದನ್ನ ಮುಟ್ಟುತ್ತಲೇ ಇರಬೇಕು. ತಾಯಿಯ ಸ್ಪರ್ಶವೇ ಮಗುವಿನ ಆರೋಗ್ಯವನ್ನು ಅಭಿವೃದ್ಧಿ ಮಾಡುತ್ತದೆ. ಆದರೆ ಆ ಬಾಣಂತಿ ಕೂಡ ಸ್ವಚ್ಛವಾಗಿರಬೇಕು. ಬಿಸಿ ನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ, ಇಸ್ತ್ರಿ ಮಾಡಿದ ಬಟ್ಟೆಯನ್ನೇ ಧರಿಸಬೇಕು.
ಬಿಸಿ ಬಿಸಿಯಾದ ಊಟ, ನೀರು ಸೇವಿಸಬೇಕು. ಮತ್ತು ಮಗುವಿಗೂ ಕೂಡ ಸ್ವಚ್ಛವಾದ, ಕಾಟನ್ ಬಟ್ಟೆ ಹಾಕಿ, ಬೆಚ್ಚಗಿರಿಸಬೇಕು. ಉಲ್ಲನ್ ಬಟ್ಟೆ ಬಳಸಬಾರದು ಅಂತಾರೆ ವೈದ್ಯರು. ಅಲ್ಲದೇ ಸಾಫ್ಟ್ ಟಾಯ್ಸ್ ಮಗುವಿನ ಹತ್ತಿರ ಇಡಬಾರದು. ಇದರಿಂದಲೂ ಮಗುವಿಗೆ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ.
ಇನ್ನು ಮಗುವಿಗೆ ತಾಯಿಯ ಹಾಲು ಬಿಟ್ಟು, ಬೇರೇನೂ ನೀಡಬಾರದು. ಗ್ರೈಪ್ ವಾಟರ್, ಕಶಾಯ ಇವನ್ನೆಲ್ಲ ಮಕ್ಕಳಿಗೆ ಕುಡಿಸಬಾರದು. ಮಗುವಿಗೆ ಹೆಚ್ಚು ಹರಳೆಣ್ಣೆ ಹಾಕಿ ಸ್ನಾನ ಮಾಡಿಸುವುದೆಲ್ಲ ಮಾಡಬಾರದು. ಅಲ್ಲದೇ, ಬೇರೆಯವರು ಬಂದು ಮಕ್ಕಳನ್ನು ಮುಟ್ಟುವುದನ್ನು ಆದಷ್ಟು ಅವೈಡ್ ಮಾಡಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..