Health Tips: ಗರ್ಭಾವಸ್ಥೆಯಲ್ಲಿದ್ದಾಗ, ಹೆಣ್ಣು ಮಕ್ಕಳು ಎಷ್ಟೇ ಕಾಳಜಿ ಮಾಡಿದರೂ ಅದು ಕಡಿಮೆಯೇ. ಡಿಲೆವರಿ ಆಗಿ ಆರೋಗ್ಯಕರವಾದ ಮಗು ಕೈಗೆ ಬಂದಾಗಲೇ ಪೂರ್ತಿ ಸಮಾಧಾನವಾಗೋದು. ಅದೇ ರೀತಿ ಗರ್ಭಾವಸ್ಥೆಯಲ್ಲಿದ್ದಾಗ, ಹೆಣ್ಣು ಮಕ್ಕಳು ಮಾತ್ರೆ ತೆಗೆದುಕೊಳ್ಳುವ ಬಗ್ಗೆ, ಚಿಕಿತ್ಸೆ ತೆಗೆದುಕೊಳ್ಳುವ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಹಾಗಾದ್ರೆ ಲೇಸರ್ ಟ್ರೀಟ್ಮೆಂಟ್ ಗರ್ಭಿಣಿಯರಿಗೆ ಸೇಫ್ ಹೌದಾ..? ಅಲ್ಲವಾ ಅಂತಾ ತಿಳಿಯೋಣ ಬನ್ನಿ..
ಗರ್ಭಿಣಿಯರು ಯಾವುದೇ ಕಾರಣಕ್ಕೂ ಲೇಸರ್ ಟ್ರೀಟ್‌ಮೆಂಟ್ ಮಾಡಿಸಿಕೊಳ್ಳಬಾರದು. ಲೇಸರ್ ಟ್ರೀಟ್ಮೆಂಟ್ ಕೊಡುವಾಗ, ವೈದ್ಯರು ಈ ಬಗ್ಗೆ ನಿಮ್ಮಲ್ಲಿ ವಿಚಾರಿಸುತ್ತಾರೆ. ಆಗ ನೀರು ಗರ್ಭಾವಸ್ಥೆಯಲ್ಲಿರುವುದು ಗೊತ್ತಾದರೆ, ಅವರು ನಿಮಗೆ ಈ ಚಿಕಿತ್ಸೆ ಕೊಡುವುದಿಲ್ಲ. ಏಕೆಂದರೆ, ಇದರಿಂದ ತಾಯಿ ಮಗು ಇಬ್ಬರ ಆರೋಗ್ಯಕ್ಕೂ ಸಮಸ್ಯೆ ಬರುತ್ತದೆ.
ಅಲ್ಲದೇ 18 ವರ್ಷದ ಮೊದಲು ಲೇಸರ್ ಟ್ರೀಟ್‌ಮೆಂಟ್ ಒಳ್ಳೆಯದಲ್ಲ ಎಂದಿದ್ದಾರೆ ವೈದ್ಯೆ ದೀಪಿಕಾ. ಅಲ್ಲದೇ ಲೇಸರ್ ಟ್ರೀಟ್‌ಮೆಂಟ್ ಸರಿ ಹೊಂದುವ ತ್ವಚೆಗಷ್ಟೇ ಈ ಚಿಕಿತ್ಸೆ ಕೊಡಲಾಗುತ್ತದೆ. ಅಲ್ಲದೇ ಬಿಪಿ, ಶುಗರ್, ಅಥವಾ ಬೇರೆ ಆರೋಗ್ಯ ಸಮಸ್ಯೆ ಇದ್ದಲ್ಲಿ, ಅದರ ಬಗ್ಗೆ ಸರಿಯಾದ ವಿಚಾರಣೆ ಮಾಡಿಯಾದ ಬಳಿಕವಷ್ಟೇ, ಲೇಸರ್ ಟ್ರೀಟ್‌ಮೆಂಟ್ ಕೊಡಲಾಗುತ್ತದೆ.
ಹೃದಯದ ಆರೋಗ್ಯ ಸಮಸ್ಯೆ, ರಕ್ತದ ಸಮಸ್ಯೆ ಸೇರಿ ಹಲವು ಆರೋಗ್ಯ ಸಮಸ್ಯೆಗಳಿದ್ದಲ್ಲಿ, ಅಂಥವರಿಗೆ ಲೇಸರ್ ಟ್ರೀಟ್‌ಮೆಂಟ್ ಮಾಡಲಾಗುವುದಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..