Health Tips: ಭಾರತದ ಹಲವು ಹೆಣ್ಣು ಮಕ್ಕಳಲ್ಲಿ ಗರ್ಭಕೋಶದ ಸಮಸ್ಯೆ ಮೊದಲಿನಿಂದಲೂ ಇದೆ. ಇತ್ತೀಚೆಗೆ ಸಂತಾನಹೀನ ಸಮಸ್ಯೆಯಿಂದ ಹಲವರು ನರಳುತ್ತಿದ್ದಾರೆ. ಗರ್ಭಕೋಶದ ಸಮಸ್ಯೆ ಇದ್ದಾಗ, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ. ಈ ಬಗ್ಗೆ ವೈದ್ಯರಾದ ಡಾ.ಚಂದ್ರಿಕಾ ಅವರು ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಗರ್ಭಕೋಶದ ಸಮಸ್ಯೆಗೆ ಆಪರೇಷನ್ ಒಂದೇ ಪರಿಹಾರವಲ್ಲ ಅಂತಾರೆ. ಗರ್ಭಕೋಶದ ಸಮಸ್ಯೆ ಇದ್ದಾಗ, ರಕ್ತಸ್ರಾವ ಹೆಚ್ಚಾಗುತ್ತದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಆಗಿ, ಅನೇಮಿಯಾ ಬರುತ್ತದೆ. ಮುಖದ ಮೇಲೆ ಮೊಡವೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಕೂದಲು ಹೆಚ್ಚು ಉದುರುತ್ತದೆ.
ಇಂಥ ಸಮಸ್ಯೆ ಬಂದಾಗ, ಹಲವರು ಗರ್ಭಕೋಶದ ಆಪರೇಷನ್ ಮೊರೆ ಹೋಗ್ತಾರೆ. ಆದರೆ ಗರ್ಭಕೋಶದ ಸಮಸ್ಯೆ ಬಂದಾಗ, ಆಪರೇಷನ್ ಮಾಡಿಕೊಳ್ಳುವುದಷ್ಟೇ ಪರಿಹಾರವಲ್ಲ. ಬದಲಾಗಿ, ಹಲವು ಚಿಕಿತ್ಸೆಗಳು ಇರುತ್ತದೆ. ಆ ಬಗ್ಗೆಯೂ ತಿಳಿದುಕೊಂಡು, ಚಿಕಿತ್ಸೆ ಪಡೆಯಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




