Health Tips: ವ್ಯಾಸಲಿನನ್ನು ಹೆಚ್ಚಾಗಿ ತುಟಿಗೆ ಹಚ್ಚಲಾಗುತ್ತದೆ. ಏಕೆಂದರೆ ಇದರಿಂದ ತುಟಿ ಒಡೆಯುವುದಿಲ್ಲ. ಆದರೆ ಇದರ ಬಳಕೆ ಒಳ್ಳೆಯದ್ದೋ, ಕೆಟ್ಟದ್ದೋ ಅಂತಾ ಹಲವರಿಗೆ ಗೊತ್ತಿಲ್ಲ. ಹಾಗಾಗಿ ವೈದ್ಯೆಯಾದ ಡಾ.ದೀಪಿಕಾ ಅವರು ಈ ಬಗ್ಗೆ ಪೂರ್ತಿ ವಿವರಣೆ ನೀಡಿದ್ದಾರೆ.
ಮೊದಲೆಲ್ಲ ಮಾಯಿಶ್ಚರೈಸರ್ ಇರಲಿಲ್ಲ. ಹಾಗಾಗಿ ಜನ ಚರ್ಮಕ್ಕೆ ಮತ್ತು ತುಟಿಗೆ ವ್ಯಾಸಲಿನ್ ಹಚ್ಚುತ್ತಿದ್ದರು. ಆದರೆ ಈಗ ಬೇರೆ ಬೇರೆ ವಿಧದ ಮಾಯಿಶ್ಚರೈಸರ್ ಬಂದಿದೆ. ಅವುಗಳು ವ್ಯಾಸಲಿನ್‌ಗಿಂತಲೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ನೀವು ತ್ವಚೆಗೆ ಮಾಯಿಶ್ಚರೈಸರ್ ಹಚ್ಚುವುದು ತುಂಬಾ ಉತ್ತಮ ಅಂತಾರೆ ವೈದ್ಯರು.
ಹಾಗಂತ ವ್ಯಾಸಲಿನ್ ಹಚ್ಚುವುದು ತಪ್ಪಲ್ಲ. ಅದು ಯಾರ ತ್ವಚೆಗೆ ಹೊಂದುತ್ತದೆಯೋ, ಅಂಥವರು ವ್ಯಾಸಲಿನ್ ಹಚ್ಚಿಕೊಳ್ಳಬಹುದು. ಎಣ್ಣೆ ತ್ವಚೆ ಇದ್ದವರು ವ್ಯಾಸಲಿನ್ ಅಥವಾ ಮಾಯಿಶ್ಚರೈಸಿಂಗ್ ಕ್ರೀಮ್ ಎರಡೂ ಮುಖಕ್ಕೆ ಬಳಸದಿರುವುದು ಉತ್ತಮ. ಡ್ರೈ ಸ್ಕಿನ್, ನಾರ್ಮಲ್ ಸ್ಕಿನ್ ಇದ್ದವರಷ್ಟೇ ಇದನ್ನು ಬಳಸಬಹುದು. ಇಲ್ಲವಾದಲ್ಲಿ ಮುಖಕ್ಕೆ ಗುಳ್ಳೆಗಳಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




