ಗರ್ಲ್ ಫ್ರೆಂಡ್ ಜೊತೆ ಬರ್ತ್ ಡೇ ಪಾರ್ಟಿ ಮಾಡಿದ ಯಂಗ್ ಕ್ರಿಕೆಟರ್

ಭಾರತದ ಯಂಗ್ ಕ್ರಿಕೆಟರ್, ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶನ್ ಕಿಶನ್ ಸದ್ಯ ಪಾರ್ಟಿ ಮೂಡಲ್ಲಿದ್ದಾರೆ. ೨೧ನೇ ಸಂತಕ್ಕೆ ಕಾಲಿಟ್ಟ ಕಿಶನ್ ಬಬ್ಲಿ ಬಬ್ಲಿ ಗರ್ಲ್ ಫ್ರೆಂಡ್ ಜೊತೆ ಹುಟ್ಟುಹಬ್ಬ ಆಚರಿಸಿ ಕೊಂಡಿದ್ದಾರೆ. ಹೌದು ಬರ್ತ್​ಡೇ ಸಂಭ್ರಮಾಚರಣೆ ವೇಳೆ, ಇಶಾನ್​ ಕಿಸಾನ್​ ತಮ್ಮ ಗೆಳತಿ ಆದಿತಿ ಹೂಂಡೈ ಜತೆ ತೆಗೆಸಿಕೊಂಡಿರುವ ಫೋಟೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ.

ಹುಟ್ಟುಹಬ್ಬದ ವಿಶೇಷ ದಿನದಂದು ಇಬ್ಬರು ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆದಿದ್ದಾರೆ. ವಿಶ್ವಕಪ್​ ತಂಡದಿಂದ ವಂಚಿತರಾಗಿದ್ದ ಇಶಾನ್​ ಕಿಶಾನ್​, ಮುಂಬರುವ ವೆಸ್ಟ್​ಇಂಡೀಸ್​ ವಿರುದ್ಧ ಸರಣಿಗೆ ಆಯ್ಕೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಭಾರತದ ಭವಿಷ್ಯದ ವಿಕೆಟ್ ಕೀಪರ್ ಗಳ ಪಟ್ಟಿಯಲ್ಲಿ ಕಿಶಾನ್​ ಕೂಡ ಒಬ್ಬರಾಗಿದ್ದಾರೆ. ಇನ್ನೂ ಇಶನ್ ಕಿಶನ್ ಗರ್ಲ್ ಫ್ರೆಂಡ್ ಆದಿತಿ, ಮಿಸ್​ ಸುಪ್ರಾನ್ಯಾಶನಲ್​ ಇಂಡಿಯಾ 2018ರ ವಿಜೇತೆಯಾಗಿದ್ದು, ಮಾಡೆಲ್​ ಆಗಿರುವ ಆದಿತಿ ಸಾಮಾಜಿಕ ಜಾಲತಾಣ ಇನ್​​ಸ್ಟಾಗ್ರಾಂನಲ್ಲಿ ಸದಾ ಸಕ್ರೀಯರಾಗಿದ್ದಾರೆ. ಸದ್ಯ ಕಿಶನ್ ಜೊತೆಗಿನ ಆದಿತಿ
ಫೋಟೋಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

https://www.instagram.com/p/B0ECQqGlfNx/?utm_source=ig_embed
https://www.instagram.com/p/BzTW9wgFue5/?utm_source=ig_embed
https://www.instagram.com/p/BxMVSI8nkro/?utm_source=ig_embed
https://www.instagram.com/p/BujLpSUhyGi/?utm_source=ig_embed

ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ

https://www.youtube.com/watch?v=v3xUAB-Bd2k

About The Author