Monday, April 14, 2025

Latest Posts

ಇದು ಬಹು ಕಷ್ಟಕರವಾಗಿದ್ದ ಸ್ವಯಂವರಗಳು.. ಭಾಗ 1

- Advertisement -

ಸ್ವಯಂವರ ಅಂದಾಕ್ಷಣ, ನಮ್ಮ ಕಣ್ಣ ಮುಂದೆ, ಸುಂದರ ಯುವಕರು ಸಾಲಾಗಿ ಕುಳಿತುಕೊಂಡಿದ್ದು, ಅವರ ಮುಂದೆ ಸುಂದರವಾದ ಯುವತಿ ಹಾರ ಹಿಡಿದು ನಾಚುತ್ತ ಬರುವುದು. ನಂತರ ಯಾರಿಗಾದರೂ ವರಿಸುವುದು. ಅಲ್ಲಿ ಸಂಭ್ರಮದ ವಾತಾವರಣವಿರುವುದು. ಆದ್ರೆ ಪೌರಾಣಿಕ ಕಥೆಗಳಲ್ಲಿ ಕೆಲ ಕಷ್ಟಕರವಾದ ಸ್ವಯಂವರಗಳು ನಡೆದಿದ್ದನ್ನ ಉಲ್ಲೇಖಿಸಲಾಗಿದೆ. ಹಾಗಾದ್ರೆ ಯಾರದ್ದು ಅಂಥ ಕಷ್ಟಕರ ಸ್ವಯಂವರ, ಯಾಕೆ ಅದು ಅಷ್ಟು ಕಷ್ಟಕರವಾಯ್ತು ಅಂತಾ ತಿಳಿಯೋಣ ಬನ್ನಿ..

ಮೊದಲ ಸ್ವಯಂವರ ದಮಯಂತಿ ಸ್ವಯಂವರ : ನಿಷಧದ ರಾಜ ವೀರಸೇನನ ಪುತ್ರನ ಹೆಸರು ನಳ ಮಹಾರಾಜ. ವಿದರ್ಭ ರಾಜ್ಯದ ರಾಜನ ಮಗಳು ದಮಯಂತಿಯಾಗಿದ್ದಳು. ಈಕೆ ಮೂವರು ಸಹೋದರರ ಪ್ರೀತಿಯ ಸಹೋದರಿಯಾಗಿದ್ದಳು. ನಳ- ದಮಯಂತಿ ಇಬ್ಬರೂ ಸುಂದರವಾಗಿದ್ದರು. ನಳ ದಮಯಂತಿಯನ್ನು ನೋಡದೇ, ಮತ್ತು ದಮಯಂತಿ ನಳನನ್ನು ನೋಡದೆಯೇ, ಅವರ ಬಗ್ಗೆ ಕೇಳಿಯೇ ಪ್ರೀತಿಯಲ್ಲಿ ಬಿದ್ದಿದ್ದರು.

ಈ ವೇಳೆ ದಮಯಂತಿಯ ಸ್ವಯಂವರ ಆಯೋಜಿಸಲಾಗಿತ್ತು. ಇಂದ್ರ, ವರುಣ, ಅಗ್ನಿ ಮತ್ತು ಯಮ ಈ ನಾಲ್ವರಿಗೂ ದಮಯಂತಿಯನ್ನು ಪಡೆಯಬೇಕೆಂಬ ಆಸೆ ಇತ್ತು. ಅವರಿಗೆ ನಳ ದಮಯಂತಿಯನ್ನು ಪ್ರೀತಿಸುವುದೂ ಗೊತ್ತಿತ್ತು. ಹಾಗಾಗಿ ಅವರು ಭೂಲೋಕಕ್ಕೆ ಬಂದು ನಳನನ್ನು ತಮ್ಮ ದಾಸನನ್ನಾಗಿ ಮಾಡಿಕೊಂಡರು. ಮತ್ತು ಸ್ವಯಂವರದ ತಯಾರಿ ನೋಡಿಕೊಂಡು ಬರಲು ಹೇಳಿದರು. ನಳ ಮಹಾರಾಜ ದಮಯಂತಿಯ ಬಳಿ ಹೋಗಿ, ನನ್ನ ಹೆಸರು ನಳ, ನಾನು ಅಗ್ನಿ, ವರುಣ, ಇಂದ್ರ ಮತ್ತು ಯಮನ ದೂತನಾಗಿ ಬಂದಿದ್ದೇನೆ ಎನ್ನುತ್ತಾನೆ.

ಅದಕ್ಕೆ ದಮಯಂತಿ, ಅವರೆಲ್ಲರಿಗೂ ನನ್ನ ನಮಸ್ಕಾರ ತಿಳಿಸು. ಆದರೆ ನೀನು ಅವರೊಂದಿಗೆ ಸ್ವಯಂವರದಲ್ಲಿ ಭಾಗವಹಿಸು. ನಾನು ನಿನ್ನನ್ನೇ ವರಿಸುತ್ತೇನೆ ಎಂದು ಹೇಳುತ್ತಾಳೆ. ಈ ವಿಷಯ ಆ ನಾಲ್ವರಿಗೂ ಗೊತ್ತಾಗುತ್ತದೆ. ಹಾಗಾಗಿ ಆ ನಾಲ್ವರೂ ಕೂಡ ನಳನ ವೇಷ ಧರಿಸಿ, ನಳನೊಂದಿಗೆ ಸ್ವಯಂವರಕ್ಕೆ ಬರುತ್ತಾರೆ. ಆಗ ದಮಯಂತಿಗೆ ಇದರಲ್ಲಿ ನಳ ಮಹಾರಾಜ ಯಾರೆಂದು ಕಂಡು ಹಿಡಿಯಲು ಕಷ್ಟವಾಗುತ್ತದೆ. ಆದರೂ ಆಕೆ ನಳನನ್ನು ಕಂಡುಹಿಡಿದು ಅವನನ್ನೇ ವರಿಸುತ್ತಾಳೆ.

ಅದು ಹೇಗೆಂದರೆ, ಆ ಐವರಲ್ಲಿ, ನಾಲ್ವರ ಮುಖದ ಮೇಲೆ ಬೆವರೇ ಬರುತ್ತಿರಲಿಲ್ಲ. ಅವರು ಧರಿಸಿದ ಹಾರ ಒಂದು ಚೂರು ಬಾಡದೇ, ಚೆಂದವಾಗಿಯೇ ಇದ್ದವು. ಮತ್ತು ಆ ನಾಲ್ವರ ನೆರಳು ಕೂಡ ಕಾಣುತ್ತಿರಲಿಲ್ಲ. ಅವರು ಅಷ್ಟು ಚಿಕ್ಕ ಸಿಂಹಾಸನದ ಮೇಲೆ ಕುಳಿತರೂ, ಅವರ ಪಾದ ನೆಲಕ್ಕೆ ತಾಕುತ್ತಿರಲಿಲ್ಲ. ಆದರೆ 5ನೇಯವರು ಮನುಷ್ಯನ ರೀತಿ ವರ್ತಿಸುತ್ತಿದ್ದ. ಅವನ ಮುಖದಲ್ಲಿ ಬೆವರಿತ್ತು. ಅವನು ಧರಿಸಿದ ಮಾಲೆ ಕೊಂಚ ಬಾಡಿಹೋದಂತಿತ್ತು. ಅವನ ಕಾಲು ನೆಲಕ್ಕೆ ತಾಕುತ್ತಿತ್ತು. ಅವನ ನೆರಳು ಕೂಡ ಕಾಣುತಿತ್ತು. ಹಾಗಾಗಿ ಅವನೇ ನಳನೆಂದು ದಮಯಂತಿಗೆ ಗೊತ್ತಾಯಿತು. ಹೀಗೆ ಅವರಿಬ್ಬರು ಒಂದಾದರು. ಉಳಿದ ಸ್ವಯಂವರದ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

ಇದು ಮಹಾಭಾರತ ಕಾಲದಲ್ಲಿ ಮಾಡಿದ ಭಯಂಕರ ಪ್ರತಿಜ್ಞೆಗಳು.. ಭಾಗ 1

ಇದು ಮಹಾಭಾರತ ಕಾಲದಲ್ಲಿ ಮಾಡಿದ ಭಯಂಕರ ಪ್ರತಿಜ್ಞೆಗಳು.. ಭಾಗ 2

ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?

- Advertisement -

Latest Posts

Don't Miss