Friday, July 11, 2025

Latest Posts

Janmashtami Special: ಗೊಜ್ಜವಲಕ್ಕಿ ಪ್ರಸಾದ ರೆಸಿಪಿ

- Advertisement -

Janmashtami Special: ಶ್ರೀಕೃಷ್ಣನಿಗೆ ಇಷ್ಟವಾದ ಪ್ರಸಾದವೆಂದರೆ ಅವಲಕ್ಕಿ ಎಂದು ಎಲ್ಲರಿಗೂ ಗೊತ್ತು. ಏಕೆಂದರೆ, ಕುಚೇಲ ಶ್ರೀಕೃಷ್ಣನಿಗೆ ಕೊಡುವ ತಿಂಡಿಯೇ ಅವಲಕ್ಕಿ. ಹಾಗಾಗಿ ಕೃಷ್ಣಾಷ್ಠಮಿಗೆ ಅವಲಕ್ಕಿ ಬಳಸಿ ಪ್ರಸಾದ ಮಾಡುವುದು ವಾಡಿಕೆ. ಹಾಗಾಗಿ ನಾವಿಂದು ಗೊಜ್ಜವಲಕ್ಕಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.

ಮೊದಲು ದಪ್ಪ ಅವಲಕ್ಕಿಯನ್ನು ನೆನೆಸಿಟ್ಟುಕೊಳ್ಳಬೇಕು. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಒಣ ಮೆಣಸು, ಕರಿಬೇವು, ಶೇಂಗಾ ಹಾಕಿ ಒಗ್ಗರಣೆ ಕೊಡಿ. ಬಳಿಕ ಒಂದು ಸ್ಪೂನ್ ಹುಣಸೆ ಹಣ್ಣು ಮತ್ತು ಖಾರದ ಪುಡಿ, ಬೆಲ್ಲದಿಂದ ತಯಾರಿಸಿದ ಗೊಜ್ಜು, ಪುಳಿಯೋಗರೆ ಪುಡಿ ಹಾಕಿ ಮಿಕ್ಸ್ ಮಾಡಿ. ಈಗ ನೆನೆಸಿಟ್ಟ ಅವಲಕ್ಕಿ, ಉಪ್ಪು, ಕೊಂಚ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿದ್ರೆ, ಗೊಜ್ಜವಲಕ್ಕಿ ರೆಡಿ. ಇದಕ್ಕೆ ಮೇಲಿನಿಂದ ಕೊಬ್ಬರಿ ತುರಿ ಸೇರಿಸಿದರೆ, ಸ್ವಾದ ಹೆಚ್ಚುತ್ತದೆ.

ಪೂರಿ ಮತ್ತು ಆಲೂಗಡ್ಡೆ ಸಾಗು ರೆಸಿಪಿ

ಹೆಸರು ಬೇಳೆ ಇಡ್ಲಿ ರೆಸಿಪಿ

ಗೋಧಿಹಿಟ್ಟಿನ ದೋಸೆ ರೆಸಿಪಿ

- Advertisement -

Latest Posts

Don't Miss