- Advertisement -
Janmashtami Special: ಕೃಷ್ಣ ಜನ್ಮಾಷ್ಠಮಿ ಸಮೀಪಿಸುತ್ತಿದೆ. ಈ ವೇಳೆ ಹಲವರು ಪೂಜೆಗೆ ಬಗೆ ಬಗೆಯ ಖಾದ್ಯವನ್ನು ತಯಾರಿಸಿ, ನೈವೇದ್ಯ ಮಾಡುತ್ತಾರೆ. ಹಾಗಾಗಿ ಇಂದು ನಾವು ಮೊಸರು ಕೊಡುಬಳೆ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಈ ರೆಸಿಪಿ ತುಂಬಾ ಸಿಂಪಲ್ ಇದ್ದು, ತಕ್ಷಣ ತಯಾರಿಸಬಹುದು.
1 ಕಪ್ ಮೊಸರು, 1 ಕಪ್ ನೀರು, ಚಿಟಿಕೆ ಜೀರಿಗೆ, ಇವಿಷ್ಟನ್ನು ಹಾಕಿ ಕೊಂಚ ಬಿಸಿ ಮಾಡಿ. ಬಳಿಕ 1 ಕಪ್ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕೋಡುಬಳೆ ಹಿಟ್ಟನ್ನು ಕಲಿಸಿಕೊಳ್ಳಿ. ಗ್ಯಾಸ್ ಆಫ್ ಮಾಡಿ, ಈ ಹಿಟ್ಟನ್ನು ಇನ್ನೊಂದು ಬೌಲ್‌ಗೆ ಹಾಕಿ, ಒಂದು ಸ್ಪೂನ್ ಎಣ್ಣೆ ಹಾಕಿ, ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ಬಳಿಕ ಕೋಡುಬಳೆಯನ್ನು ತಯಾರಿಸಿ, ಕಾದ ಎಣ್ಣೆಯಲ್ಲಿ ಕರಿದರೆ, ಜನ್ಮಾಷ್ಠಮಿ ವಿಶೇಷ ಪ್ರಸಾದ ಮೊಸರು ಕೋಡುಬಳೆ ರೆಡಿ.
- Advertisement -