Wednesday, October 29, 2025

Latest Posts

Janmashtami Special: ಕೃಷ್ಣನಿಗೆ ನೈವೇದ್ಯಕ್ಕಾಗಿ ಪಂಚಕಜ್ಜಾಯ ರೆಸಿಪಿ

- Advertisement -

Janmashtami Special:  ಶ್ರೀಕೃಷ್ಣ ಜನ್ಮಾಷ್ಠಮಿ ಸಮೀಪಿಸುತ್ತಿದೆ. ಕೃಷ್ಣನಿಗೆ ಬಗೆ ಬಗೆಯ ನೈವೇದ್ಯವನ್ನು ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ಜನ್ಮಾಷ್ಠಮಿ ವಿಶೇಷ ಪ್ರಸಾದವಾದ ಕೊತ್ತೊಂಬರಿ ಕಾಳಿನ ಪಂಚಕಜ್ಜಾಯ ರೆಸಿಪಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.

ಮೊದಲು ಪ್ಯಾನ್ ಇಟ್ಟು ಅದಕ್ಕೆ ಡ್ರೈಫ್ರೂಟ್ಸ್ ಕರಿಯಲು ಬೇಕಾದಷ್ಟು ತುಪ್ಪವನ್ನು ಹಾಕಿ. ಬಳಿಕ ಕಾಜು, ಬಾದಾಮ್, ದ್ರಾಕ್ಷಿ ಕರಿದುಕೊಳ್ಳಿ. ಜೊತೆಗೆ ಅಂಟನ್ನು ಕರಿದುಕೊಳ್ಳಿ. ಇದನ್ನು ಗೋಂದ ಅಂತಲೂ ಕರಿಯುತ್ತಾರೆ. ಕಲ್ಲಿನಂತೆ ಗಟ್ಟಿಯಾಗಿರುವ ಈ ಪದಾರ್ಥ, ತುಪ್ಪ ಅಥವಾ ಎಣ್ಣೆಯಲ್ಲಿ ಹಾಕಿದಾಗ, ಸಂಡಿಗೆಯಂತೆ ಉಬ್ಬುತ್ತದೆ. ಈಗ 1 ಕಪ್ ಮಖಾನಾವನ್ನು ಕೂಡ ಕರಿದುಕೊಳ್ಳಿ.

ಉಳಿದ ತುಪ್ಪದಲ್ಲಿ ಒಂದು ಕಪ್ ಕೊತ್ತೊಂಬರಿ ಕಾಳಿನ ಪುಡಿ, ತುರಿದ ಒಣ ಕೊಬ್ಬರಿ ಹಾಕಿ ಹುರಿಯಿರಿ. ಈಗ ಕರಿದ ಮತ್ತು ಹುರಿದ ಎಲ್ಲ ಪದಾರ್ಥಗಳನ್ನು ಒಂದು ಬೌಲ್‌ಗೆ ಹಾಕಿ, ಅದಕ್ಕೆ ನಿಮಗೆ ಬೇಕಾದಷ್ಟು ಸಕ್ಕರೆ ಪುಡಿ, ಮತ್ತು ಕೊಂಚ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿದರೆ, ಜನ್ಮಾಷ್ಠಮಿಯ ಪಂಚಕಜ್ಜಾಯ ರೆಡಿ.

ಪೂರಿ ಮತ್ತು ಆಲೂಗಡ್ಡೆ ಸಾಗು ರೆಸಿಪಿ

ಹೆಸರು ಬೇಳೆ ಇಡ್ಲಿ ರೆಸಿಪಿ

ಗೋಧಿಹಿಟ್ಟಿನ ದೋಸೆ ರೆಸಿಪಿ

- Advertisement -

Latest Posts

Don't Miss