Janmashtami Special: ಶ್ರೀಕೃಷ್ಣನಿಗೆ ಇಷ್ಟವಾದ ಪ್ರಸಾದವೆಂದರೆ ಅವಲಕ್ಕಿ ಎಂದು ಎಲ್ಲರಿಗೂ ಗೊತ್ತು. ಏಕೆಂದರೆ, ಕುಚೇಲ ಶ್ರೀಕೃಷ್ಣನಿಗೆ ಕೊಡುವ ತಿಂಡಿಯೇ ಅವಲಕ್ಕಿ. ಹಾಗಾಗಿ ಕೃಷ್ಣಾಷ್ಠಮಿಗೆ ಅವಲಕ್ಕಿ ಬಳಸಿ ಪ್ರಸಾದ ಮಾಡುವುದು ವಾಡಿಕೆ. ಹಾಗಾಗಿ ನಾವಿಂದು ಅವಲಕ್ಕಿ ಲಾಡು ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಒಂದು ಕಪ್ ದಪ್ಪ ಅವಲಕ್ಕಿಯನ್ನು ಸ್ವಚ್ಛ ಮಾಡಿಕೊಳ್ಳಿ. ಬಳಿಕ ಪ್ಯಾನ್ ಬಿಸಿ ಮಾಡಿ ಎರಡು ಸ್ಪೂನ್ ತುಪ್ಪ ಹಾಕಿ, ಘಮ ಬರುವವರೆಗೂ ಅವಲಕ್ಕಿಯನ್ನು ಹುರಿಯಿರಿ. ಇದನ್ನು ಇನ್ನೊಂದು ಬೌಲ್‌ಗೆ ಹಾಕಿ, ಅದೇ ಪ್ಯಾನ್‌ಗೆ ಮತ್ತಷ್ಚು ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿಯನ್ನೂ ಹುರಿದುಕೊಳ್ಳಿ. ಇದನ್ನು ಸಪರೇಟ್ ಆಗಿ ಇರಿಸಿ. ಮತ್ತೆ ಪ್ಯಾನ್‌ಗೆ ತುಪ್ಪ ಹಾಕಿ ಒಂದು ಕಪ್ ತುರಿದ ಒಣಕೊಬ್ಬರಿಯನ್ನು ಹುರಿಯಿರಿ.
ಈಗ ಮಿಕ್ಸಿ ಜಾರ್‌ಗೆ ಹುರಿದಿಟ್ಟುಕೊಂಡ ಅವಲಕ್ಕಿ ಮತ್ತು ಒಣಕೊಬ್ಬರಿ ಎರಡನ್ನೂ ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ. ಪ್ಯಾನ್ ಬಿಸಿ ಮಾಡಿ ತುಪ್ಪ ಬೆಲ್ಲ ಮತ್ತು ನೀರು ಹಾಕಿ, ಬೆಲ್ಲದ ಪಾಕ ತಯಾರಿಸಿಕೊಳ್ಳಿ. ಪಾಕ ತಯಾರಾದ ಬಳಿಕ ಪುಡಿ ಮಾಡಿದ ಅವಲಕ್ಕಿ ಮಿಶ್ರಣ, ಏಲಕ್ಕಿ ಪುಡಿ, ಹುರಿದ ಗೋಡಂಬಿ ದ್ರಾಕ್ಷಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಗ್ಯಾಸ್ ಆಫ್ ಮಾಡಿ, ಕೈಗೆ ತುಪ್ಪ ಸವರಿ, ಈ ಮಿಶ್ರಣದ ಲಾಡುವನ್ನು ಕಟ್ಟಿ. ಈಗ ಜನ್ಮಾಷ್ಠಮಿ ವಿಶೇಷ ನೈವೇದ್ಯ ಅವಲಕ್ಕಿ ಲಾಡು ರೆಡಿ.

