Wednesday, October 29, 2025

Latest Posts

Janmashtami Special: ಕೃಷ್ಣನಿಗೆ ಇಷ್ಟವಾಗುವ ಅವಲಕ್ಕಿ ಪಂಚಕಜ್ಜಾಯ ರೆಸಿಪಿ

- Advertisement -

Janmashtami Special: ಶ್ರೀಕೃಷ್ಣನಿಗೆ ಇಷ್ಟವಾದ ಪ್ರಸಾದವೆಂದರೆ ಅವಲಕ್ಕಿ ಎಂದು ಎಲ್ಲರಿಗೂ ಗೊತ್ತು. ಏಕೆಂದರೆ, ಕುಚೇಲ ಶ್ರೀಕೃಷ್ಣನಿಗೆ ಕೊಡುವ ತಿಂಡಿಯೇ ಅವಲಕ್ಕಿ. ಹಾಗಾಗಿ ಹಲವರು ಕೃಷ್ಣಾಷ್ಠಮಿಗೆ ಅವಲಕ್ಕಿ ಪಂಚಕಜ್ಜಾಯವನ್ನು ನೈವೇದ್ಯ ಮಾಡುತ್ತಾರೆ. ಹಾಗಾಗಿ ಇಂದು ನಾವು ಈ ಪ್ರಸಾದದ ರೆಸಿಪಿ ಹೇಳಲಿದ್ದೇವೆ.

ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎರಡು ಸ್ಪೂನ್ ತುಪ್ಪ ಹಾಕಿ, ಎಳ್ಳು ಹುರಿದುಕೊಳ್ಳಿ. ಮತ್ತು ಇದನ್ನು ತೆಗೆದು ಬದಿಗಿರಿಸಿ. ಅದೇ ಪ್ಯಾನ್‌ಗೆ ಒಂದೂವರೆ ಕಪ್ ಬೆಲ್ಲ ಮತ್ತು ನೀರು ಹಾಕಿ, ಬೆಲ್ಲದ ಪಾಕ ತಯಾರಿಸಿಕೊಳ್ಳಿ. ಬೆಲ್ಲವನ್ನು ಸರಿಯಾಗಿ ಪಾಕ ಮಾಡಿದಾಗ ಮಾತ್ರ ಅವಲಕ್ಕಿ ಪಂಚಕಜ್ಜಾಯ ಮೂರ್ನಾಲ್ಕು ದಿನ ಚೆನ್ನಾಗಿರುತ್ತದೆ. ಪಾಕಕ್ಕೆ ಚಿಟಿಕೆ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.

ಈಗ ಆ ಪಾಕಕ್ಕೆ ಒಂದು ಕಪ್ ತೆಂಗಿನತುರಿ ಸೇರಿಸಿ. ಪ್ಯಾನ್ ಆಫ್ ಮಾಡಿ, ಇದಕ್ಕೆ ಹುರಿದಿಟ್ಟುಕೊಂಡ ಎಳ್ಳು, ಅವಲಕ್ಕಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಅವಲಕ್ಕಿ ಪಂಚಕಜ್ಜಾಯ ರೆಡಿ.

ಪೂರಿ ಮತ್ತು ಆಲೂಗಡ್ಡೆ ಸಾಗು ರೆಸಿಪಿ

ಹೆಸರು ಬೇಳೆ ಇಡ್ಲಿ ರೆಸಿಪಿ

ಗೋಧಿಹಿಟ್ಟಿನ ದೋಸೆ ರೆಸಿಪಿ

- Advertisement -

Latest Posts

Don't Miss