ಹಾಸನ: ಒಬ್ಬ ಜವಬ್ಧಾರಿಯುತ ಶಾಸಕನಾಗಿ ಮಹಿಳೆಯರ ಬಗ್ಗೆ ಮಾತನಾಡುವಾಗ ಮಾತಿನಲ್ಲಿ ಹಿಡಿತ ಇರಬೇಕು. ಇಂತಹ ಕೀಳು ಮಟ್ಟದ ಹೇಳಿಕೆ ನೀಡಿರುವುದು ಮಹಿಳೆಯರಿಗೆ ಮಾಡಿರುವ ಅವಮಾನ ಎಂದು ಜೆಡಿಎಸ್ ಪಕ್ಷದ ಮುಖಂಡರಾದ ಪ್ರೇಮಮ್ಮ ಮತ್ತು ಸುಮಾ ಆಕ್ರೋಶ ವ್ಯಕ್ತಪಡಿಸಿರು.
ಪತ್ರಿಕಾಗೋಷ್ಠಿಯಲ್ಲಿ ಬುಧವರಾದಂದು ಮಾತನಾಡಿ, ಕ್ಷೇತ್ರದ ಶಾಸಕರು ಮಾತನಾಡುವಾಗ ಮಾತಿನಲ್ಲಿ ಹಿಡಿತ ಇರಬೇಕು. ಇಂತಹ ಹೇಳಿಕೆ ನೀಡಿರುವುದು ಮಹಿಳೆಯರಿಗೆ ಮಾಡಿರುವ ಅವಮಾನವಾಗಿದ್ದು, ಶಾಸಕನಾಗಿ ನಾನು ಏನು ಮಾತನಾಡುತ್ತಿದ್ದೇನೆ ಎಂಬುದರ ಬಗ್ಗೆ ಅರಿವು ಇರುವುದಿಲ್ಲ. ವಾದ ಮಾಡುವುದಕ್ಕೆ ನಮ್ಮ ಅಡ್ಡಿ ಇಲ್ಲ. ಮಹಿಳೆಯರಿಗೆ ನಿಂದನೆ ಮಾಡಿ ಮಾತನಾಡಿರುವುದು ಎಷ್ಟು ಸರಿಯಾಗಿದೆ ಎಂದು ಪ್ರಶ್ನೆ ಮಾಡಿದರು. ರಾತ್ರಿ ಏರಿದ ನಶೇ ಬೆಳಿಗ್ಗೆ ೧೧ ಗಂಟೆಯದರೂ ಮಾತನಾಡುತ್ತಿದ್ದಾರೆ ಎಂದಿರುವುದ ನೋಡಿದ್ರೆ ಶಾಸಕರಿಗೆ ಸಂಸ್ಕೃತಿಯೆ ಇಲ್ಲ ಎಂಬಂತೆ ಕಾಣುತ್ತದೆ.
ಪ್ರೀತಂಗೌಡ ಹೊಂದಿರುವ ಸಂಸ್ಕೃತಿ ಇದೇನಾ..?: ಎಚ್.ಪಿ. ಸ್ವರೂಪ್ ಕಿಡಿ..
ಇಂತಹ ಮಾತಿನಿಂದ ನಮಗೆಲ್ಲಾ ನೋವಾಗಿದ್ದು, ಹೆಣ್ಣು ಎಂದರೇ ಅವರ ತಾಯಿಯು ಕೂಡ ಹೆಣ್ಣು ಎಂಬುದನ್ನು ಮರೆಯಬಾರದು. ರಾಜಕೀಯದಲ್ಲಿ ವಾಗ್ವಾದ ಮತ್ತು ಚರ್ಚೆಗಳು ಮಾಡಿದರೇ ಬೇಡ ಎನ್ನುವುದಿಲ್ಲ. ಆದ್ರೇ ಹೆಣ್ಣು ಮಕ್ಕಳಿಗೆ ಅವಮಾನ ಮಾಡಿರುವುದು ಇಡೀ ಹಾಸನ ಜಿಲ್ಲೆಗೆ ಬೇಸರ ತಂದಿದೆ ಎಂದರು. ಸ್ವಂತ ಅಕ್ಕ ತಂಗಿಗೆ ಈ ರೀತಿ ಮಾತನಾಡುತ್ತಿದ್ದರಾ.. ಸ್ವಂತ ತಾಯಿತರ ಇರುವವರ ಬಗೆ ಮಾತನಾಡಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.
ಡಿ.ಎನ್.ಎ. ಪದ ಶಾಸಕರ ಬಾಯಿಯಲ್ಲಿ ಏಕೆ ಬಂದಿದೆ ಎಂಬುದು ನಮಗೆ ಅರ್ಥ ಆಗುತ್ತಿಲ್ಲ. ಭವಾನಿ ಅಕ್ಕ ನಮ್ಮಕ್ಕ ಎನ್ನುತ್ತಾರೆ. ಆಗದರೇ ಅವರ ಅಕ್ಕನ ಬಗ್ಗೆಯೇ ಕೇವಲವಾಗಿ ಮಾತನಾಡಬಹುದಾ! ಶಾಸಕರು ಏನೇ ಕೆಲಸ ಮಾಡಬೇಕಾದರೂ ಒಬ್ಬ ನಾಯಕರಾಗಿ ನೋಡಿಕೊಂಡು ಮಾತನಾಡಬೇಕು. ನಶೇ ಇಳಿದಿಲ್ಲ ಎನ್ನುವುದು ಅದು ಯಾವ ನಶೇ, ಹಣದ ನಶೇನಾ.. ಎಣ್ಣೆ ನಶೇನಾ, ಇಲ್ಲವೇ ಅಧಿಕಾರದ ನಶೇನಾ.. ಯಾವುದು ಹೇಳಿ. ಆಗಾದರೇ ಮಹಿಳೆಯರು ರಾಜಕೀಯಕ್ಕೆ ಬರುವಾಗಿಲ್ಲವೇ? ಮನುಷ್ಯ ಯಾವಾಗ ಸೋಲುತ್ತಾನೆ ಆಗ ಸಿಗುವ ಆಯುಧ ಎಂದರೇ ಹೆಣ್ಣು ಮಕ್ಕಳ ಮೇಲೇ ಆರೋಪ ಮಾಡುವುದು. ನಾವುಗಳು ಶಾಸಕರಾಗೇ ಕೀಳಲು ಮಟ್ಟದ ಇಳಿಯಕ್ಕೆ ಆಗುವುದಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ವಿದ್ಯುತ್ ತಂತಿ ಮೇಲಿದ್ದ ಬೈಕ್ ಕೀ ತೆಗೆಯಲು ಹೋಗಿ ವ್ಯಕ್ತಿ ಸಾವು..
ಇದೆ ಮಾತನ್ನು ನಿಮ್ಮಮ್ಮ, ನಿಮ್ಮತೆಗೆ ಹೇಳಿದ್ರೆ ಹಾಗೂ ನಿಮ್ಮ ಪತ್ನಿಗೆ ಹೇಳಿದ್ರೆ ನಮಗೆ ನೋವಾಗುತ್ತದೆ. ನಾವು ಹೆಣ್ಣು ಮಕ್ಕಳು ಆ ರೀತಿ ಹೇಳುವುದಿಲ್ಲ. ಹಾಸನದ ಹೆಣ್ಣು ಮಕ್ಕಳು ಎಂದು ಹೇಳುವ ಶಾಸಕರು ಈ ರೀತಿ ಡಿ.ಎನ್.ಎ. ಬಗ್ಗೆ ಮಾತನಾಡುವುದು ಯಾರಿಗಾದರೂ ನೋವಾಗುವುದಿಲ್ಲವೇ ಎಂದು ಹೇಳಿದರು. ಶಾಸಕರಾದ ಪ್ರೀತಂ ಗೌಡರ ಹೇಳಿಕೆ ಖಂಡಿಸಿ ಇಂದು ಗುರುವಾರದಂದು ಜೆಡಿಎಸ್ ಪಕ್ಷದವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮಹಿಳಾ ಮುಖಂಡರಾದ ರೇಖಾ ಮಂಜುನಾಥ್, ನಿರ್ಮಲಾ, ಸದಸ್ಯರಾದ ಚಂದ್ರಿಕಾ ಇತರರು ಉಪಸ್ಥಿತರಿದ್ದರು.