Sports News: ವಿರಾಟ್ ಕೊಹ್ಲಿ ಎರಡನೇಯ ಬಾರಿಗೆ ತಂದೆಯಾಗಿದ್ದು, ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಅಕಾಯ್ ಎಂದು ನಾಮಕರಣ ಮಾಡಲಾಗಿದೆ.
ಈ ಬಗ್ಗೆ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಖುಶಿ ಸುದ್ದಿ ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಫೆಬ್ರವರಿ 15ರಂದು ನಮ್ಮ ಪುತ್ರ ಮತ್ತು ವಮಿಕಾಳ ತಮ್ಮ ಅಕಾಯ್‌ನನ್ನು ನಾವು ಬರ ಮಾಡಿಕೊಂಡಿದ್ದೇವೆ. ನಮ್ಮ ಜೀವನದ ಖುಷಿಯ ಸಮಯದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಬಯಸಿದ್ದೇವೆ. ನಮ್ಮ ಈ ಗೌಪತ್ಯೆಯನ್ನು ಗೌರವಿಸಲು ನಾವು ವಿನಂತಿಸುತ್ತೇವೆ ಎಂದು ಅನುಷ್ಕಾ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಕೊಹ್ಲಿ ಯಾಕೆ ಕ್ರಿಕೇಟ್ ಮ್ಯಾಚ್‌ನಲ್ಲಿ ಭಾಗವಹಿಸುತ್ತಿಲ್ಲ ಎಂಬ ಪ್ರಶ್ನೆಗೆ ಎಬಿಡಿ ಅವರು ತಂದೆಯಾಗುತ್ತಿದ್ದಾರೆ. ಹಾಗಾಗಿ ಅವರು ಕುಟುಂಬಕ್ಕೆ ಸಮಯ ನೀಡುತ್ತಿದ್ದಾರೆಂದು ಹೇಳಿದ್ದರು. ಬಳಿಕ ನಾನು ತಪ್ಪು ಹೇಳಿಕೆ ಕೊಟ್ಟಿದ್ದೆ. ಕೊಹ್ಲಿ ಬೇರೆ ಕಾಣದಿಂದ ಆಟದಿಂದ ದೂರ ಉಳಿದಿದ್ದಾರೆಂದು ಹೇಳಿದ್ದರು. ಆಗಲೇ ಕೊಹ್ಲಿ ಅಬಿಮಾನಿಗಳು ಕೆಲ ದಿನದಲ್ಲೇ ವಿರಾಟ್ ಶುಭ ಸುದ್ದಿ ಕೊಡಲಿದ್ದಾರೆಂದು ಅಂದಾಜಿಸಿದ್ದರು.
ಪಂಜಾಬ್ ಚುನಾವಣಾ ಆಯೋಗದ ಐಕಾನ್ ಆಗಿ ಸೆಲೆಕ್ಟ್ ಆದ ಕ್ರಿಕೇಟಿಗ ಶುಭಮನ್ ಗಿಲ್
ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿ ರಿವಾಬಾಗೆ ಅರ್ಪಿಸಿದ ರವೀಂದ್ರ ಜಡೇಜಾ..