Thursday, December 26, 2024

Latest Posts

ಕಾಜು ಮಸಾಲಾ ರೆಸಿಪಿ..

- Advertisement -

Recipe: ರೆಸ್ಟೋರೆಂಟ್‌ಗೆ ಹೋದಾಗ, ನಾನ್, ಬಟರ್ ನಾನ್, ಕುಲ್ಚಾಗೆ ಮ್ಯಾಚ್ ಆಗುವಂಥ ಟೇಸ್ಟಿ ಗ್ರೇವಿ ಅಂದ್ರೆ ಕಾಜು ಮಸಾಲಾ. ಅದನ್ನು ನಾವು ಮನೆಯಲ್ಲೂ ತಯಾರಿಸಬಹುದು. ಇದು ಬರೀ ನಾನ್, ಕುಲ್ಚಾ ಅಲ್ಲ, ಬದಲಾಗಿ ಜೀರಾ ರೈಸ್, ಚಪಾತಿ, ಪೂರಿಗೂ ಸೂಟ್ ಆಗತ್ತೆ. ಹಾಗಾದ್ರೆ ಕಾಜು ಮಸಾಲಾ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

2ರಿಂದ 3ಟೊಮೆಟೋವನ್ನು, 10ರಿಂದ 20 ಕಾಜು ಜೊತೆ ಪೇಸ್ಟ್ ಮಾಡಿ. ಈ ಪೇಸ್ಟ್ ತಯಾರಿಸುವಾಗ, ಚಕ್ಕೆ, ಲವಂಗ, ಏಲಕ್ಕಿಯನ್ನನೂ ಸೇರಿಸಿಕೊಳ್ಳಿ. ಈಗ ಗ್ಯಾಸ್ ಆನ್ ಮಾಡಿ, ಪ್ಯಾನ್ ಬಿಸಿ ಮಾಡಿ, ಅದಕ್ಕೆ ನಾಲ್ಕು ಸ್ಪೂನ್ ತುಪ್ಪ, 2 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, 1 ಪಲಾವ್ ಎಲೆ, ಎರಡು ಏಲಕ್ಕಿ, ಚಿಕ್ಕ ತುಂಡು ಚಕ್ಕೆ, ನಾಲ್ಕು ಲವಂಗ, ಇವಿಷ್ಟನ್ನು ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಈರುಳ್ಳಿಯನ್ನೂ ಹುರಿಯಿರಿ. ಇದರೊಂಗಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ.

ಈಗ ಅರಿಶಿನ, ಖಾರದ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ಕೊತ್ತೊಂಬರಿ ಕಾಳಿನ ಪುಡಿ, ಉಪ್ಪು ಮಿಕ್ಸ್ ಮಾಡಿ. ಈಗ ಪೇಸ್ಟ್ ಮಾಡಿಟ್ಟುಕೊಂಡ ಮಿಶ್ರಣ ಹಾಕಿ, ಚೆನ್ನಾಗಿ ಹುರಿಯಿರಿ. ಬಳಿಕ ಕಾಲು ಕಪ್ ಮೊಸರು, ನೀರು ಹಾಕಿ, ಚೆನ್ನಾಗಿ ಕುದಿಸಿ. ಕೊತ್ತೊಂಬರಿ ಸೊಪ್ಪು, ಕಸೂರಿ ಮೇಥಿ ಮತ್ತು ತುಪ್ಪದಲ್ಲಿ ಹುರಿದ 10ರಿಂದ 20 ಗೋಡಂಬಿಯನ್ನು ಸೇರಿಸಿದರೆ, ಕಾಜು ಮಸಾಲ ರೆಡಿ.

ಈ ಪರಿಮಳಗಳನ್ನು ತೆಗೆದುಕೊಂಡರೆ, ನಿಮ್ಮ ಆರೋಗ್ಯ ಹಾಳಾಗುವುದು ಗ್ಯಾರಂಟಿ..

ನೀರನ್ನು ಕುಡಿಯಬಾರದಂತೆ.. ತಿನ್ನಬೇಕಂತೆ.. ಅದು ಹೇಗೆ ಅಂತಾ ತಿಳಿಯಿರಿ..

ಪಂಜಾಬಿ ಛೋಲೆ ಮಾಡೋದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ರೆಸಿಪಿ..

- Advertisement -

Latest Posts

Don't Miss